1. ಸುದ್ದಿಗಳು

ಕೆಲಸದ ಅವಧಿ 9 ಗಂಟೆಯಿಂದ 12ಕ್ಕೆ: ಹೊಸ ಕಾಯ್ದೆಗೆ ರಾಜ್ಯ ಸರ್ಕಾರ ಅಸ್ತು!

Hitesh
Hitesh
Working hours from 9 am to 12 pm: State government to the new act!

ರಾಜ್ಯ ಸರ್ಕಾರವು ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕಾರ್ಖಾನೆಗಳಲ್ಲಿ ಕೆಲಸದ ಅವಧಿಯನ್ನು 9 ಗಂಟೆಯಿಂದ 12ಕ್ಕೆ ಹೆಚ್ಚಳ ಮಾಡಿದೆ.

ಕಾಯ್ದೆ ತಿದ್ದುಪಡಿಯಲ್ಲಿ ಏನಿದೆ. ಹೊಸ ಬದಲಾವಣೆಗಳೇನು ಎನ್ನುವ ವಿವರ ಇಲ್ಲಿದೆ.     

ರಾಜ್ಯದ ಕಾರ್ಖಾನೆಗಳಲ್ಲಿ ಕೆಲಸದ ಅವಧಿಯನ್ನು ಈಗ ಇರುವ 9 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸುವ ಹಾಗೂ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲೂ ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತಂದಿರುವುದಾಗಿ ಸರ್ಕಾರ ಸರ್ಮಥನೆ ನೀಡಿದೆ.

7th Pay Commission ಸರ್ಕಾರಿ ನೌಕರರ ಶೇ 17ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಅಸ್ತು: ಏನೆಲ್ಲ ಸೌಲಭ್ಯ, ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್‌!

ಇನ್ನು ಸರ್ಕಾರ ಮಂಡಿಸಿರುವ ಈ ಕಾಯ್ದೆ ಜಾರಿಗೆ ಬಂದ ನಂತರ ಒಂದು ವಾರದಲ್ಲಿ ವಿರಾಮ ಸೇರಿದಂತೆ ಕೆಲಸದ ಸಮಯವು ಇನ್ನು ಮುಂದೆ ಗರಿಷ್ಠ  9 ರಿಂದ 12 ಗಂಟೆಗೆ ಹೆಚ್ಚಳಗಲಿದೆ.

ಕೆಲಸದ ಅವಧಿಯನ್ನು ಹೆಚ್ಚಿಸುವುದಕ್ಕೆ ಕೆಲಸಗಾರರಿಂದ ಲಿಖಿತ ಒಪ್ಪಿಗೆಯನ್ನು ಪಡೆದುಕೊಳ್ಳಬೇಕು.

ಆಗ ಮಾತ್ರ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ವಿಸ್ತರಿಸಬಹುದಾಗಿದೆ.

ಇದೀಗ 9 ಗಂಟೆ ಮಾತ್ರ ಕೆಲಸಕ್ಕೆ ಅವಕಾಶ ಇದೆ. ಅಲ್ಲದೇ ಮಹಿಳಾ ಕಾರ್ಮಿಕರು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಕೆಲಸ ಮಾಡಬಹುದಾಗಿದೆ.

ಹೊಸ ಬದಲಾವಣೆಯ ಅನ್ವಯ ದಿನದ 24 ಗಂಟೆಯ ಅವಧಿಯಲ್ಲಿ ಯಾವ ಸಮಯದಲ್ಲಾದರೂ, ಕೆಲಸ ಮಾಡುವುದಕ್ಕೆ ಅನುಮತಿ ಸಿಗಲಿದೆ.

15,000 ಸಾವಿರ ರೂ. ಚುನಾವಣೆಯಲ್ಲಿ ಗೆದ್ದರೆ ಪ್ರತಿ ವರ್ಷ ರೈತರಿಗೆ: ಜನಾರ್ದನ ರೆಡ್ಡಿ ಭರವಸೆ!

ಈ ನಿಟ್ಟಿನಲ್ಲಿ ಸರ್ಕಾರವು ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ–2023ಕ್ಕೆ ವಿಧಾನಸಭೆ ಈಚೆಗೆ ಅಂಗೀಕಾರ ನೀಡಿದೆ.  ಸರ್ಕಾರವು ಈ ಕಾಯ್ದೆಯಲ್ಲಿ ಕೆಲವು ಷರತ್ತುಗಳನ್ನೂ ವಿಧಿಸಿದೆ. 

ಈಗ ಇರುವ ಕೆಲಸದ ಅವಧಿಗಿಂತಲೂ 3 ತಾಸು ಕೆಲಸದ ಅವಧಿ ಹೆಚ್ಚಾಗಲಿದ್ದು, ಅವಧಿ ಮೀರಿ ಕೆಲಸ ಮಾಡಿದ ಸಂದರ್ಭದಲ್ಲಿ ಕೆಲಸಗಾರನಿಗೆ ದುಪ್ಪಟ್ಟು ದರದಲ್ಲಿ ಹೆಚ್ಚುವರಿ ಹಣ ಅಥವಾ ಕಾರ್ಖಾನೆಯಲ್ಲಿ ಚಾಲ್ತಿಯಲ್ಲಿರುವ ಒಟಿ ನೀಡಬೇಕು ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದ್ದಾರೆ.

ಇನ್ನು ಕಾರ್ಖಾನೆಗಳಲ್ಲಿ ಕೆಲಸಗಾರನಿಗೆ ಕೆಲಸದ ಅವಧಿಯನ್ನು ಯಾವುದೇ ಮಧ್ಯಂತರವಿಲ್ಲದೇ, 6 ಗಂಟೆಗಳವರೆಗೆ ವಿಸ್ತರಿಸಲೂ ಅವಕಾಶ ನೀಡಲಾಗಿದೆ.

ಈ ಆಯ್ಕೆಯನ್ನು ಒಪ್ಪಿಕೊಂಡರೆ, 6 ಗಂಟೆ ನಂತರ ಹೆಚ್ಚುವರಿ ಕೆಲಸ ಮಾಡಿದರೂ ದುಪ್ಪಟ್ಟು ದರದ ಒಟಿ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.  

ರಾಜ್ಯದಲ್ಲಿ ಕೋಟ್ಯಾಂತರ ರೂಪಾಯಿ ಮೊತ್ತದ ಯೋಜನೆಗೆ: ಸೋಮವಾರ ಮೋದಿಯಿಂದ ಚಾಲನೆ 

Working hours from 9 am to 12 pm: State government to the new act!

ಇನ್ನು ರಾಜ್ಯದಲ್ಲಿ ದುಡಿಮೆ, ಸಂಪಾದನೆಯಲ್ಲಿ ಸಮಾನತೆ, ಸಮಾನ ಅವಕಾಶ ನೀಡುವ ಉದ್ದೇಶದಿಂದ ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯವನ್ನು ಖಾತರಿಪಡಿಸುವ ಷರತ್ತಿಗೆ

ಒಳಪಟ್ಟು ದಿನದ 24 ಗಂಟೆಯಲ್ಲಿ ಯಾವ ಅವಧಿಯಲ್ಲಿಯಾದರೂ ಕೆಲಸ ಮಾಡಬಹುದು ಎಂದು ಹೊಸ ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ. 

ಓವರ್‌ ಟೈಮ್ ಅಂದರೆ ಅವಧಿ ಮೀರಿ ಕೆಲಸ ಮಾಡಿದರೆ ಮಹಿಳಾ ಕೆಲಸಗಾರರಿಗೆ ಅನುವು ಮಾಡಿಕೊಡುವುದಕ್ಕಾಗಿ ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ

ಮಾಡಲು ಆಸಕ್ತಿ ಹೊಂದಿರುವ ಮಹಿಳಾ ಕೆಲಸಗಾರರಿಂದ ಲಿಖಿತ ಒಪ್ಪಿಗೆ ಪಡೆದು ಅವಕಾಶ ಕಲ್ಪಿಸಬಹುದಾಗಿದೆ.  

ಸರ್ಕಾರವು ಮಹಿಳೆಯರ ರಾತ್ರಿ ಪಾಳಿಯ ಸುರಕ್ಷತೆ ಕುರಿತು ನಿರ್ದಿಷ್ಟ ಷರತ್ತು ವಿಧಿಸಿದೆ.

ಈ ಹಿಂದೆ ಕೆಲವು ಕಹಿ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಮಹಿಳೆಯರು ರಾತ್ರಿಪಾಳಿಯಲ್ಲಿ ಕೆಲಸ ಮಾಡುವುದಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು.

ಈಗ ತಂದಿರುವ ತಿದ್ದುಪಡಿಯಲ್ಲಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.

ಮಹಿಳೆಯರು ಕೆಲಸ ಮಾಡುವ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು ಹಾಗೂ ಅವರ ಪ್ರಯಾಣದ ಅವಧಿಯಲ್ಲೂ

ಸುರಕ್ಷತೆ ನೀಡಬೇಕು ಎನ್ನುವುದು ಸೇರಿದಂತೆ ಹಲವು ಷರತ್ತುಗಳನ್ನು ಸರ್ಕಾರ ತಿದ್ದುಪಡಿಯಲ್ಲಿ ಉಲ್ಲೇಖಿಸಿದೆ.

PF ಭವಿಷ್ಯ ನಿಧಿ ಪಿಂಚಣಿಯಲ್ಲಿ ಮಹತ್ವದ ಬದಲಾವಣೆ!

ಸರ್ಕಾರವು ಮಹಿಳೆಯರ ರಾತ್ರಿ ಪಾಳಿಯ ಸುರಕ್ಷತೆ ಕುರಿತು ನಿರ್ದಿಷ್ಟ ಷರತ್ತು ವಿಧಿಸಿದೆ

  • ಮೊದಲನೆಯದಾಗಿ ರಾತ್ರಿಪಾಳಿ ಕೆಲಸ ಮಾಡುವ ಆಸಕ್ತಿರಿರುವ ಮಹಿಳಾ ನೌಕರರಿಂದ ಲಿಖಿತ ಸಮ್ಮತಿ ಪಡೆಯುವುದು ಕಡ್ಡಾಯ.
  • ರಾತ್ರಿಪಾಳಿಯಲ್ಲಿ ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ ಮಹಿಳೆಯರಿಗೆ ಭದ್ರತೆ ಇರಬೇರು.  
  • ಮಹಿಳಾ ಕಾರ್ಮಿಕರು ಅವಧಿಗಿಂತ ಮುಂಚೆ ಬರಲು ಮತ್ತು ಕೆಲಸದ ಬಳಿಕ ವಿಶ್ರಾಂತಿಪಡೆಯಲು ವಿಶ್ರಾಂತಿ ಕೊಠಡಿ ನಿರ್ಮಿಸಬೇಕು. 
  • ರಾತ್ರಿಪಾಳಿಯಲ್ಲಿ ಮಹಿಳೆಯರು ಉದ್ಯೋಗಕ್ಕೆ ಹಾಜರಾದರೆ, ಮಹಿಳಾ ಕಾರ್ಮಿಕರಿಗೆ ಅವರ ಮನೆಯಿಂದ ಕೆಲಸ ಸ್ಥಳದವರೆಗೆ
  • ಹಾಗೂ ಅಲ್ಲಿಂದ ಮರಳಲು ಸಾರಿಗೆ ಸೌಲಭ್ಯ ನೀಡಬೇಕು. ಈ ನಿರ್ದಿಷ್ಟ ವಾಹನಗಳಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಮಹಿಳಾ ಭದ್ರತಾ ಸಿಬ್ಬಂದಿ ಇರಲೇಬೇಕು.
  • ಅಲ್ಲದೇ ಪ್ರತಿಯೊಂದು ಸಾರಿಗೆ ವಾಹನವು ಸಿಸಿಟಿವಿ ಕ್ಯಾಮೆರಾ ಹಾಗೂ ಜಿಪಿಎಸ್‌ ವ್ಯವಸ್ಥೆಯನ್ನು ಅಳವಡಿಸಿರಬೇಕು.  
  • ರಾತ್ರಿ ಪಾಳಿಯಲ್ಲಿ ಪಾಳಿ ಪ್ರಭಾರದಲ್ಲಿರುವ ಮೇಲ್ವಿಚಾರಕರು, ಮೇಲ್ವಿಚಾರಣಾ ಸಿಬ್ಬಂದಿ ಇರಬೇಕು. 
  • ಬೆಳಿಗ್ಗೆ ಪಾಳಿಯಿಂದ ರಾತ್ರಿ ಪಾಳಿಗೆ, ರಾತ್ರಿ ಪಾಳಿಯಿಂದ ಬೆಳಗಿನ ಪಾಳಿಗೆ ಮಹಿಳಾ ಕಾರ್ಮಿಕರನ್ನು ಬದಲಾಯಿಸಿದ
  • ಸಂದರ್ಭದಲ್ಲಿ ಹಿಂದಿನ ಪಾಳಿಗಳು ಮತ್ತು ರಾತ್ರಿ ಪಾಳಿಯ ಮಧ್ಯದ ವಿರಾಮ ಅಥವಾ ಅಂತರವು ನಿರಂತರ 12 ಗಂಟೆಗಿಂತ ಕಡಿಮೆ ಇರಬಾರದು  
  •  ಮಹಿಳಾ ಸಿಬ್ಬಂದಿಯನ್ನು ಕರೆದುಕೊಂಡು ಹೋಗುವ ವಾಹನದಲ್ಲಿ ಪ್ರತಿಯೊಬ್ಬ ಚಾಲಕನ ವೈಯಕ್ತಿಕ ಮಾಹಿತಿ ಹಾಗೂ ತಾವಾಗಿಯೇ ಉದ್ಯೋಗವನ್ನು ಪಡೆದ ಎಲ್ಲಾ ಚಾಲಕರ ಹಿಂದಿನ ಉದ್ಯೋಗದ ಸಂಫೂರ್ಣ ಇತಿಹಾಸ ಪರಿಶೀಲಿಸಿರಲೇಬೇಕು.  
  • ಮಹಿಳಾ ಉದ್ಯೋಗಿಗಳ ದೂರವಾಣಿ ಸಂಖ್ಯೆ, ವಿಶೇಷವಾಗಿ ಮೊಬೈಲ್‌ ಸಂಖ್ಯೆ, ಇ–ಮೇಲ್‌ ಐಡಿ ಮತ್ತು ವಿಳಾಸ ಸೇರಿದಂತೆ ಯಾವುದೇ ವೈಯಕ್ತಿಕ ಮಾಹಿತಿಯನ್ನೂ ಬಹಿರಂಗಪಡಿಸಬಾರದು.   
  •  ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಂತೆ ಯಾವುದೇ ಮಹಿಳಾ ಸಿಬ್ಬಂದಿಗೆ ಕಡ್ಡಾಯ ಅಥವಾ ಒತ್ತಡಗಳನ್ನು ಹೇರುವಂತಿಲ್ಲ .
Published On: 01 March 2023, 05:05 PM English Summary: Working hours from 9 am to 12 pm: State government to the new act!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.