1. ಸುದ್ದಿಗಳು

ಜನರು ʻಹುಲಿ ಉಗುರುʼ ಧರಿಸೋದ್ಯಾಕೆ? ಅದು ಅಷ್ಟೊಂದು ಪವರ್‌ ಫುಲ್ಲಾ?

Maltesh
Maltesh
Why do people wear ``tiger claws''? Is it that powerful?

ʻʻಹುಲಿ ಉಗುರುʼʼ ರಾಜ್ಯದಲ್ಲಿ ಸದು ಸಾಕಷ್ಟು ಸದ್ದು ಹಾಗೂ ಸುದ್ದಿ ಮಾಡುತ್ತಿರುವ ವಿಷಯ. ಇಷ್ಟು ದಿನ ಸೈಲೆಂಟಾಗಿದ್ದ ಹುಲಿ ಉಗುರಿನ ವಿಷ್ಯಾ ಇದ್ದಕ್ಕಿದ್ದಂತೆ ರಾಜ್ಯದಲ್ಲಿ ಭಾರೀ ಸದ್ದು ಮಾಡ ತೊಡಗಿದೆ.

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ರಿಂದ ಆರಂಭವಾದ ಹುಲಿ ಉಗುರಿನ ಬೇಟೆ ಇದೀಗ ಸಾಕಷ್ಟು ಖ್ಯಾತನಾಮರಿಗೂ ಬಿಸಿ ತುಪ್ಪವಾಗಿ ಪರಿಣಮಿಸಿದೆ. ರಾಜಕೀಯ ಗಣ್ಯರು, ಸಿನಿಮಾ ಕಲಾವಿದರು, ಉದ್ಯಮಿಗಳಿಗೆ ಹುಲಿ ಉಗುರು ಪರಚುತ್ತಿದ್ದು ಎಲ್ಲೆಡೆ ಇದೀಗ ಹುಲಿ ಉಗುರಿನದ್ದೆ ಕಾರುಬಾರು.

ಸದ್ಯ ಅರಣ್ಯಾಧಿಕಾರಿಗಳು ಹುಲಿ ಉಗುರನ್ನು ಧರಿಸಿರುವವರ ಮೇಲೆ ಕಾನೂನಿನ ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಕೂಡ ವನ್ಯಜೀವಿಗಳ ದೇಹದ ಭಾಗಗಳಲ್ಲು ಬಳಸುತ್ತಿರುವವರ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದೆಲ್ಲದರ ನಡುವೆ ಈ ಹುಲಿ ಉಗುರನ್ನು ಯಾಕೇ ಧರಿಸ್ತಾರೆ ಇದು ಅಷ್ಟೊಂದು ಪವರ್‌ಫುಲ್‌ ಇದೆಯಾ ಇದನ್ನ ಧರಿಸಲು ಇರುವ ಕಾರಣಗಳೇನು ಎಂಬಿತ್ಯಾದಿ ಗಲ್ಲಿ ಗಲ್ಲಿಯಲ್ಲಿ ಹರಿದಾಡುತ್ತಿರುವ ಪ್ರಶ್ನೆಗಳಿಗೆ ಉತ್ತರ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಹುಲಿಯ ಉಗುರು ಹಾಗೂ ಚರ್ಮವನ್ನು ಹಲವು ಕಾರಣಗಳಿಗಾಗಿ ಬಳಸುತ್ತಾರೆ ಅವುಗಳಲ್ಲಿ ಕೆಲವೊಂದನ್ನ ಇಲ್ಲಿ ನೋಡೋಣ

ಹುಲಿಯ ಉಗುರುಗಳು ಮತ್ತು ಚರ್ಮವು ಬಹಳಷ್ಟು ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ.

ಹುಲಿಯ ದೇಹದ ಭಾಗಗಳು ಹೆಚ್ಚಿನ ಆಕರ್ಷಣೆ ಹೊಂದಿದ್ದು, ಅವುಗಳ ಮೌಲ್ಯ ಕೋಟಿಗಟ್ಟಲೆ ಆಗಿದೆ.

ತಂತ್ರ ಮಂತ್ರ ಮತ್ತು ಮಾಂತ್ರಿಕ ಜಗತ್ತಿನಲ್ಲಿ ಹುಲಿಯ ಉಗುರಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಹೇಳಲಾಗುತ್ತದೆ.

ಶತ್ರುತ್ವದ ಅಪಾಯವನ್ನು ಎದುರಿಸುತ್ತಿರುವ ಹುಲಿಯ ಉಗುರಿನ ತಾಯತವನ್ನು ಧರಿಸುತಾರೆ ಎಂದು ಹೇಳುತ್ತಾರೆ.

ಇನ್ನು ವಿಶೇವಾಗಿ ಕುತ್ತಿಗೆಗೆ ಹುಲಿಯ ಉಗುರನ್ನು ಧರಿಸುವುದರಿಂದ ಅದೃಷ್ಟ ಬದಲಾಗುತ್ತದೆ ಎಂದು ನಂಬಲಾಗಿದೆ .

ಇದು ಇತ್ತೀಚಿಗೆ ಗಣ್ಯ ವ್ಯಕ್ತಿಗಳು, ಸೆಲಿಬ್ರಿಟಿಗಳು ಸೇರಿದಂತೆ ಹಲವಾರು ಜನರು ಇದನ್ನು ಪ್ರತಿಷ್ಠೆಯ ರೂಪಕವಾಗಿ ಕೂಡ ಧರಿಸಲು ಕಾರಣ ಎಂದು ಹೇಳಲಾಗುತ್ತದೆ.

ವನ್ಯಜೀವಿ ಸಂರಕ್ಷಣಾ ಕಾಯಿದೆ ಹೇಳೊದೇನು?

ದೇಶದಲ್ಲಿ ಅಸಲಿ ಹುಲಿ ಉಗುರುಗಳ ಮಾರಾಟ, ಸಾಗಾಟ, ಧರಿಸುವುದು ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ಅಪರಾಧವಾಗಿದೆ. ಹೀಗಾಗಿ ಕಾನೂನು ಉಲ್ಲಂಘಿಸಿ ಅಸಲಿ ಹುಲಿ ಉಗುರುಗಳನ್ನು ಧರಿಸಿದವರ ಮೇಲೆ ಕೇಸ್‌ ದಾಖಲು ಮಾಡಿ ಅವರನ್ನು ಬಂಧಿಸಲಾಗುತ್ತಿದೆ.

Published On: 30 October 2023, 02:30 PM English Summary: Why do people wear ``tiger claws''? Is it that powerful?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.