1. ಸುದ್ದಿಗಳು

ರೈತರಿಗೆ ಮಹತ್ವದ ಸುದ್ದಿ: PM ಕಿಸಾನ್‌ 14 ನೇ ಕಂತು ಯಾವಾಗ ಬರುತ್ತೆ? ಇಲ್ಲಿದೆ ಮಾಹಿತಿ

Maltesh
Maltesh
PM Kisan

ಪಿಎಂ ಕಿಸಾನ್ ಯೋಜನೆಯ 14ನೇ ಕಂತು ಯಾವಾಗ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ರೈತರು ಕಾಯುತ್ತಿರುವಾಗಲೇ ಮಹತ್ವದ ಮಾಹಿತಿಯೊಂದು ಹೊರಬಂದಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್‌ ಯೋಜನೆ:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನೀತಿ ಯೋಜನೆ  2019 ರಲ್ಲಿ ಭಾರತದಲ್ಲಿನ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಹಾಯ ಮಾಡಲು ಪ್ರಾರಂಭಿಸಲಾಯಿತು. ಈ ಯೋಜನೆಯ ಪ್ರಕಾರ ಪ್ರತಿ 4 ತಿಂಗಳಿಗೊಮ್ಮೆ ತಲಾ 2 ಸಾವಿರ ರೂ.ನಂತೆ ರೈತರಿಗೆ ವರ್ಷಕ್ಕೆ 6 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತದೆ.

ಈ ಮಧ್ಯೆ ಪಿಎಂ ಕಿಸಾನ್ ಅವರ 13 ನೇ ಕಂತನ್ನು ಫೆಬ್ರವರಿ 27, ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಯಿತು. ಇದರ ಬೆನ್ನಲ್ಲೇ 14ನೇ ಕಂತು ಮೇ-ಜೂನ್ ನಡುವೆ ಬಿಡುಗಡೆಯಾಗಬಹುದು ಎಂದು ವರದಿಯಾಗಿದ್ದು, ಇದೀಗ ಅದರ ಉದ್ದೇಶಿತ ದಿನಾಂಕ ಬಹಿರಂಗವಾಗಿದೆ.

ಲಭ್ಯವಿರುವ ಮೂಲಗಳ ಪ್ರಕಾರ, ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣವನ್ನು ಕೇಂದ್ರ ಸರ್ಕಾರ ರೈತರ ಬ್ಯಾಂಕ್ ಖಾತೆಗೆ ಜೂನ್‌ನಲ್ಲಿ ಜಮಾ ಮಾಡಲಾಗುವುದು ಎನ್ನಲಾಗುತ್ತಿದೆ. ಈ ಬಾರಿ ಜೂನ್ 23 ರಂದು 14ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ .

ಪಿಎಂ ಕಿಸಾನ್ ಯೋಜನಾ ಅಧಿಕೃತ ವೆಬ್‌ಸೈಟ್‌ನಲ್ಲಿ 12 ಕೋಟಿಗೂ ಹೆಚ್ಚು ರೈತರು 13ನೇ ಕಂತಿಗೆ ನೋಂದಾಯಿಸಿಕೊಂಡಿದ್ದಾರೆ. ಆದರೆ 13ನೇ ಕಂತಿನಡಿ 8.69 ಕೋಟಿ ರೈತರಿಗೆ ಮಾತ್ರ ತಲಾ 2 ಸಾವಿರ ರೂ. ಉಳಿದ 3.30 ಕೋಟಿ ನೋಂದಾಯಿತ ರೈತರಿಗೆ ನಾನಾ ಕಾರಣಗಳಿಂದ ಆರ್ಥಿಕ ನೆರವು ಸಿಗಲಿಲ್ಲ. ಇವರಲ್ಲಿ ಕೆಲವರು ಫಲಾನುಭವಿಗಳಲ್ಲದವರಾಗಿದ್ದು, ಇನ್ನು ಕೆಲವರು ಪರಿಶೀಲನೆ ಪೂರ್ಣಗೊಳ್ಳದ ಕಾರಣ ಹೊಸ ಕಂತುಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ.

ಪಿಎಂ ಕಿಸಾನ್ ಯೋಜನೆಯಿಂದ ಪ್ರಯೋಜನ ಪಡೆಯುವ ರೈತರನ್ನು ಗುರುತಿಸಲು ಪರಿಶೀಲನೆ ಪ್ರಕ್ರಿಯೆ ಅಥವಾ ಇ-ಕೆವೈಸಿ ಅಗತ್ಯ. ಇ-ಕೆವೈಸಿ , ಆಧಾರ್ ವಿವರಗಳು, ಭೂಮಿ ಬಿತ್ತನೆ ಮತ್ತು ಇತರ ವಿವರಗಳನ್ನು ನವೀಕರಿಸಿದ ರೈತರು ಮಾತ್ರ ಮುಂದಿನ ಕಂತಿಗೆ ಅರ್ಹರಾಗಿರುತ್ತಾರೆ.

Published On: 29 May 2023, 04:23 PM English Summary: When will the 14th Installment Of pm kisan Samman Scheme money Coming?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.