1. ಸುದ್ದಿಗಳು

ವೀಕೆಂಡ್‌ನಲ್ಲಿ ಚಿನ್ನ ಖರೀದಿಗೆ ಹೋಗ್ತಿದ್ದೀರಾ..?ಹಾಗಾದ್ರೆ ಈ ಸುದ್ದಿಯನ್ನ ಒಮ್ಮೆ ನೋಡ್ಬಿಡಿ

KJ Staff
KJ Staff
weekend gold buying plans ́

ಭಾರತದಲ್ಲಿ ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಹಾವಳಿ ಬಹುತೇಕವಾಗಿ ಕಡಿಮೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಎಂದಿನಂತೆ ಚಿನ್ನ-ಬೆಳ್ಳಿ ದರಗಳಲ್ಲಿ ಏರಿಳಿತಗಳ ಹಾವು ಏಣಿ ಆಟ ಮುಂದುವರೆದಿದೆ. ಇನ್ನು ಈ ಆಟದಲ್ಲಿ ಚಿನ್ನಾಭರಣ ಪ್ರಿಯರು ವೀಕೆಂಡ್‌ ದಿನಗಳಲ್ಲಿ ಚಿನ್ನದ ಖರೀದಿಗೆ ಮುಂದಾಗುತ್ತಾರೆ.. ಕಳೆದ ಕೆಲ ಸಮಯಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ, ಆಭರಣ ಪ್ರಿಯರಿಗೆ ನಿರಾಸೆ ಮೂಡಿಸಿತ್ತು. ಹೀಗಾಗಿ ಶುಭಕಾರ್ಯಗಳ ಸೀಸನ್‌ ಶುರುವಾದ ನಂತರ ಸಹಜವಾಗಿಯೇ ಬಂಗಾರ ಪ್ರಿಯರು ಬೆಲೆ ಇಳಿಕೆಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ:Salary hike:ಸರ್ಕಾರಿ ನೌಕರರಿಗೆ ಬಂಪರ್‌..ಏಪ್ರೀಲ್‌ 1ರಿಂದ ಮೂಲ ವೇತನದಲ್ಲಿ 10% ಹೆಚ್ಚಳ

ಈ ನಡುವೆ ವಿಪರ್ಯಾಸ ಎನ್ನುವಂತೆ ಉಕ್ರೇನ್‌ಹಾಗೂ ರಷ್ಯಾ ಯುದ್ಧವು ಚಿನ್ನ, ಬೆಳ್ಳಿ ಬೆಲೆಯ ಮೇಲೆ ಪರಿಣಾಮವನ್ನು ಬೀರುತ್ತಿದೆ. ರಷ್ಯಾ-ಉಕ್ರೇನ್ ಯುದ್ಧ ಸಂಘರ್ಷದ ಪರಿಣಾಮ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಪದೇ ಪದೇ ಏರಿಕೆಯಾಗುತ್ತಲೇ ಇದೆ. ಆದರೆ ಕಳೆದ ಎರಡು ದಿನಗಳಿಂದ ಚಿನ್ನ-ಬೆಳ್ಳಿಯ ಬೆಲೆಯಲ್ಲಿ ಹೇಳಿಕೊಳ್ಳುವಂತಹ ಮಟ್ಟಿಗೆ ಏರಿಕೆಯಾಗಿಲ್ಲ.

ಕಳೆದ ವಾರ ಇಳಿಕೆಯಾಗಿದ್ದ ಚಿನ್ನದ ಬೆಲೆ 2 ದಿನಗಳಿಂದ ಮತ್ತೆ ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 400 ರೂ. ಏರಿಕೆಯಾಗಿದೆ. ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ ಇಂದು 1 ಕೆಜಿಗೆ 600 ರೂ. ಏರಿಕೆಯಾಗಿದೆ. ಭಾರತದ ಅನೇಕ ನಗರಗಳಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿತ್ತು. ಆದರೆ, ಇಂದು ಬಂಗಾರದ ದರ ಕುಸಿತ ಕಂಡಿದೆ. ಚಿನ್ನದ ಬಗೆಗಿನ ಜನರ ಆಕರ್ಷಣೆ, ಪ್ರೀತಿ ಇಂದು- ನಿನ್ನೆಯದಲ್ಲ. ಮದುವೆ, ಸಮಾರಂಭಗಳು, ಅಕ್ಷಯ ತೃತೀಯ ಹೀಗೆ ವಿಶೇಷ ಸಂದರ್ಭದಲ್ಲಿ ಮಾತ್ರವಲ್ಲದೆ ಹೂಡಿಕೆಯಾಗಿಯೂ ಚಿನ್ನವನ್ನು ಖರೀದಿಸುವವರ ಸಂಖ್ಯೆ ದೊಡ್ಡದಿದೆ.

ಇದನ್ನೂ ಓದಿ:ಭಾರತದ ಹೊಸ ಮೈಲಿಗಲ್ಲು! 400 Billion Dollar ಸಾಧನೆ

ವೀಕೆಂಡ್‌ನಲ್ಲಿ ಚಿನ್ನ ಖರೀದಿ ಹೇಗೆ..?
ನಿಮ್ಮ ನಗರಗಳಲ್ಲಿ ಇಂದಿನ ದಿನ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಅನ್ನೋದನ್ನು ನೀವು ಪ್ರತಿ ದಿನ ಸಮಾಜಿಕ ಜಾಲತಾಣಗಳ ಮೂಲಕ ಅಥವಾ ಮಾಧ್ಯಮಗಳ ಮೂಲಕ ತಿಳಿದುಕೊಳ್ಳಬಹುದು. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ನಾವು ಯಾವುದೇ ನಿರ್ದಿಷ್ಟ ದಿನವನ್ನು ಟಾರ್ಗೆಟ್‌ಮಾಡಿಕೊಂಡು ಖರೀದಿಗೆ ಹೋಗುವುದು ಉತ್ತಮವಲ್ಲ..

ಇದನ್ನೂ ಓದಿ:ರೈತರ ಭೂಮಿ‌ ಸ್ವಾಧೀನ ವೇಳೆ 4 ಪಟ್ಟು ಪರಿಹಾರ!

ಯಾವಾಗಲೂ ಮಾರುಕ್ಕಟಯ ಮೇಲೆ ಕಟ್ಟಿರಬೇಕು ದರ ಏರಿಳತಗಳ ಮೇಲೆ ಗಮನವಿಟ್ಟುಕೊಂಡು ಖರೀದಿ ಮಾಡುವುದು ಉತ್ತಮ. ಇನ್ನು ಟಾರ್ಗೆಟ್‌ಮಾಡಿಕೊಂಡು ಖರೀದಿಗೆ ನಿಂತರೇ ನಷ್ಟದ ಅಪಾಯವೇ ಹೆಚ್ಚಾಗಿರುತ್ತದೆ ಎಂಬುದು ತಜ್ಞರ ಅಭಿಪ್ರಾಯ..

ಕಳೆದ ವಾರದಿಂದ ಗಗನಕ್ಕೇರಿದ್ದ ಬೆಳ್ಳಿ ಬೆಲೆ ಇಂದು 600 ರೂ. ಏರಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 68,900 ರೂ. ಇದ್ದುದು ಇಂದು 73,400 ರೂ. ಆಗಿದೆ.
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ,

ಚೆನ್ನೈ- 73,400
ದೆಹಲಿ- 68,900

ಹೈದರಾಬಾದ್- 73,400
ಕೊಲ್ಕತ್ತಾ- 68,900

ಇದನ್ನೂ ಓದಿ:ನಿರುದ್ಯೋಗಿಗಳಿಗೆ ಇರೋ ಸರ್ಕಾರದ ಜನಪ್ರಿಯ ಸ್ಕೀಂಗಳು ಯಾವು.. ಇಲ್ಲಿದೆ ಪೂರ್ಣ ಮಾಹಿತಿ..

ಬೆಂಗಳೂರು- 73,400 ರೂ,
ಮೈಸೂರು- 73,400
ಮಂಗಳೂರು- 73,400
ಮುಂಬೈ- 68,900

Published On: 23 March 2022, 04:25 PM English Summary: weekend gold buying plans ́

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.