1. ಸುದ್ದಿಗಳು

karnataka Election ಮತದಾನ ಹೆಚ್ಚಿಸಲು ಮತದಾನದ ಹಬ್ಬ, ಏನಿದರ ವಿಶೇಷತೆ ?

Hitesh
Hitesh
Voting festival to increase voting, what is special about it?

ರಾಜ್ಯದಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಳ ಮಾಡಲು ರಾಜ್ಯ ಚುನಾವಣಾ ಆಯೋಗವು ಹಲವು ಕಸರತ್ತುಗಳನ್ನು ಮಾಡುತ್ತಿದ್ದು,

ಸ್ಥಳೀಯ ಸಂಸ್ಥೆಗಳು ಸಹ ಮತದಾನ ಪ್ರಮಾಣ ಹೆಚ್ಚಳ ಮಾಡಲು ವಿವಿಧ ಯೋಜನೆಗಳನ್ನು ರೂಪಿಸಿಕೊಂಡಿವೆ.  

ಮತದಾನ ಯಶಸ್ವಿಗೊಳಿಸಲು ಯುವಸಮೂಹವೇ ರಾಯಭಾರಿಗಳು ಎಂದು ಬೆಂಗಳೂರು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.  

ಮತದಾನ ಯಶಸ್ವಿಗೊಳಿಸಲು ಯುವಸಮೂಹವೇ ವಿಧಾನಸಭಾ ಚುನಾವಣೆಯ ರಾಯಭಾರಿಗಳು.

ಈ ಯುವಸಮೂಹವು ತಮ್ಮ ತಮ್ಮ ನೆರೆಹೊರೆಯ ಪ್ರದೇಶದ ಜನರನ್ನು ಮತದಾನಕ್ಕೆ ಪ್ರೇರೇಪಿಸುವ ಮೂಲಕ ಈ ಬಾರಿಯ ಚುನಾವಣೆಯನ್ನು ಯಶಸ್ವಿಗೊಳಿಸಬೇಕೆಂದು ಎಂದು ಹೇಳಿದ್ದಾರೆ.   

ಈಚೆಗೆ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಅಂಗವಾಗಿ  ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ

ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಆಯೋಜಿಸಲಾದ ಓಟ್ ಫೆಸ್ಟ್ (ಮತದಾನದ ಹಬ್ಬ) ಕಾರ್ಯಕ್ರಮವನ್ನು     ಉದ್ಘಾಟಿಸಿ ಮಾತನಾಡಿದರು.

ಮೇ 10 ರಂದು ರಾಜ್ಯದ ಜನರು ತಪ್ಪದೇ ತಮ್ಮ ಮತಗಟ್ಟೆ ಭೇಟಿ ನೀಡಿ ಮತದಾನ ಮಾಡಲೇಬೇಕೆಂದು ನಾಗರಿಕರಿಗೆ ಪ್ರೇರಣೆ ನೀಡುವ ಆಶಯದಿಂದ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜನರಲ್ಲಿ ಮತದಾನದ ಬಗ್ಗೆ ಅರಿವು ಹಾಗೂ ಉತ್ಸಾಹ ಮೂಡಿಸಲು ಇಂದಿನ ಕಾರ್ಯಕ್ರಮ ಸಹಕಾರಿಯಾಗಿದೆ.

ಈ ಚುನಾವಣೆಯಲ್ಲಿ ಮೊದಲನೇ ಬಾರಿ ಮತದಾನ ಮಾಡುವ ಯುವಕರ  ಸಂಖ್ಯೆ 1 ಲಕ್ಷ ಮೀರಿರುವುದು ದಾಖಲಾರ್ಹ ಸಂಗತಿ.

18 ತುಂಬಿರುವ ಯುವಕರು ಮೊದಲನೇ ಬಾರಿಗೆ ಮತದಾನ ಮಾಡಲು ಮುಂದೆ ಬರಬೇಕಿದೆ.  

ಮತದಾನದ ಬಗ್ಗೆ ಅರಿವು ಮೂಡಿಸಲು ಕಾಲೇಜುಗಳಲ್ಲಿ 4000 ಎಲೆಕ್ಟೋರಲ್ ಲಿಟ್ರೆಸಿ ಕ್ಲಬ್ ಗಳನ್ನು ಪ್ರಾರಂಭಿಸಲಾಗಿದೆ.

ಕಾಲೇಜುಗಳಿಂದ 18 ತುಂಬಿರುವ ಯುವಕರ ಪಟ್ಟಿಯನ್ನು ಪಡೆದು ಮತದಾನ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಹಿರಿಯ ನಾಗರಿಕರು, ಅಂಗವಿಕಲರಿಗೆ ಮತಗಟ್ಟೆಗಳಲ್ಲಿ ಮತದಾನ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದರು.

ವಿಧಾನಸಭಾ ಚುನಾವಣೆಯ ರಾಷ್ಟ್ರೀಯ ರಾಯಭಾರಿಯಾಗಿರುವ ರಾಹುಲ್ ದ್ರಾವಿಡ್ ರವರು ಮತದಾನ ಹಕ್ಕನ್ನು ಚಲಾಯಿಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ.

ಮತದಾನದ ಮೂಲ ಕರ್ತವ್ಯದಲ್ಲಿ ಎಲ್ಲರೂ ಭಾಗವಹಿಸಿ ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಅವರು ಮಾತನಾಡಿ,  ಬೆಂಗಳೂರು ಜಾಗತಿಕ ನಗರವಾಗಿದೆ. 

Voting festival to increase voting, what is special about it?

ಗರಿಷ್ಠ ಪ್ರಮಾಣದಲ್ಲಿ ಮತದಾನವನ್ನು ದಾಖಲಿಸುವ ಗುರಿಯನ್ನು ಸಾಧಿಸಬೇಕಿದೆ. ಬೆಂಗಳೂರು ನಗರದ ಮತದಾನದ ಪ್ರಮಾಣ ಕಡಿಮೆ ಇದೆ.

ಈ ಬಾರಿಯ ಚುನಾವಣೆಯಲ್ಲಿ ಈ ಪ್ರಮಾಣವನ್ನು ಸುಧಾರಿಸಲು ಹಾಗೂ ಯುವಸಮೂಹವನ್ನು ಮತಗಟ್ಟೆಯತ್ತ ಸೆಳೆಯಲು ಇಂದಿನ ಕಾರ್ಯಕ್ರಮ ಪೂರಕವಾಗಿದೆ.

ಯುವಜನರು ತಮ್ಮ ಪ್ರದೇಶದ ನೆರೆಹೊರೆಯವರನ್ನೂ ಮತದಾನದ ಹಕ್ಕನ್ನು ಚಲಾಯಿಸಲು ಪ್ರೋತ್ಸಾಹಿಸಬೇಕೆಂದು ಕೋರಿದರು.

ಬೈಕ್ ರ‍್ಯಾಲಿ, ಯಕ್ಷಗಾನ, ಫ್ಲಾಶ್ ಮಾಬ್ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಜನರು ದೊಡ್ಡ ಸಂಖ್ಯೆಯಲ್ಲಿ ಮುಂದೆ ಬಂದು ಮತದಾನ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಎಂದರು.

ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಮೇ 10 ರಂದು ರಾಜ್ಯಾದ್ಯಂತ ನಡೆಯಲಿದೆ.

ಜನರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಓಟ್ ಫೆಸ್ಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇದರಲ್ಲಿ ಬೈಕ್  ರ‍್ಯಾಲಿ, ಸಂಗೀತ, ಯಕ್ಷಗಾನ,ಬೀದಿ ನಾಟಕ ಹಾಗೂ ಫ್ಲಾಶ್ ಮಾಬ್ ಸೇರಿದಂತೆ ದಿನವಿಡೀ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಪ್ರಜಾಪ್ರಭುತ್ವದಲ್ಲಿ ಮತದಾನದ ಪ್ರಾಮುಖ್ಯತೆ ಹಾಗೂ ಇದರಿಂದಾಗಿ ಸಮುದಾಯದ ಮೇಲಿನ  ಸಕಾರಾತ್ಮಕ ಪರಿಣಾಮಗಳ ಬಗ್ಗೆ ಕಾರ್ಯಕ್ರಮದ ಅತಿಥಿಗಳು ಬೆಳಕು ಚೆಲ್ಲಿದರು.

ಚರ್ಚ್ ಸ್ಟ್ರೀಟ್ ನೆರೆದಿದ್ದ ಯುವಕರಲ್ಲಿ ಮತದಾನ ಬಗ್ಗೆ ಜಾಗೃತಿ , ವೋಟರ್ ಹೆಲ್ಪ್ ಲೈನ್ ಆಪ್ ಬಗ್ಗೆ ಮಾಹಿತಿ,

ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳುವುದು ಸೇರಿದಂತೆ ಹಲವು ಉಪಯುಕ್ತ ಮಾಹಿತಿಗಳನ್ನು ಪ್ರಚುರಪಡಿಸಲಾಯಿತು.

ಮತದಾನ ತಪ್ಪದೇ ಕೈಗೊಳ್ಳಲು ಭಾರತ ಚುನಾವಣಾ ಆಯೋಗದ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ಸ್ಥಳೀಯ ಜನಪ್ರಿಯ ವ್ಯಕ್ತಿಗಳು ಬೈಕ್ ರ್ಯಾಲಿಯನ್ನು ಮುನ್ನಡೆಸಿ ಮುಂಬರುವ ಚುನಾವಣೆ ಹಾಗೂ ಮತದಾನದ ಮಾಹಿತಿಯನ್ನು ನೀಡಿದರು.

ಸ್ಥಳೀಯ ಕಲಾವಿದರು ಹಾಗೂ ರಂಗಕಲಾವಿದರಿಂದ ಬೀದಿ ನಾಟಕಗಳನ್ನು ಏರ್ಪಡಿಸಿ, ಮತದಾನ ಪ್ರಕ್ರಿಯೆಯ ಮಹತ್ವ ,

ಮತಚಲಾಯಿಸದೆ ಇದ್ದಲ್ಲಿ ಆಗಬಹುದಾದ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಯಿತು.

ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಮತದಾನದ ಬಗ್ಗೆ ಉಪಯುಕ್ತ ಮಾಹಿತಿ

ಹಾಗೂ ಜಾಗೃತಿ ಮೂಡಿಸುವ ಮೂಲಕ ಓಟ್ ಫೆಸ್ಟ್ ಕಾರ್ಯಕ್ರಮವನ್ನು ಅವಿಸ್ಮರಣೀಯಗೊಳಿಸಲಾಯಿತು.

 ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಎ ದಯಾನಂದ, ಅಪರ ಮುಖ್ಯ ಚುನಾವಣಾಧಿಕಾರಿ ರಾಜೇಂದ್ರ ಚೋಳನ್,

ವಿಶೇಷ ಚುನಾವಣಾಧಿಕಾರಿ ಎ.ವಿ.ಸೂರ್ಯಸೇನ್  ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. 

ಇದನ್ನೂ ಓದಿರಿ: ಕೇಂದ್ರ ಮೀಸಲು ಪೊಲೀಸ್‌ ಪಡೆಯ ನೇಮಕಾತಿ ಕನ್ನಡದಲ್ಲಿ ನಡೆಸಲು ಆಗ್ರಹ

ನೆರೆಯ ತೆಲಂಗಾಣ ರಾಜ್ಯಕ್ಕೆ ಕೇಂದ್ರದಿಂದ ಬರೋಬ್ಬರಿ 11 ಸಾವಿರ ಕೋಟಿ ಯೋಜನೆ!

ಭಾರತೀಯ ರೈಲ್ವೆ: ರೈಲು ಅಪಘಾತದಲ್ಲಿ ಸಾವಿರಾರು ಜಾನುವಾರು ಸಾವು! 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದುವರಿದ ಮಳೆ!

Published On: 10 April 2023, 02:39 PM English Summary: Voting festival to increase voting, what is special about it?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.