1. ಸುದ್ದಿಗಳು

ಕೃಷಿ ಜಾಗರಣ ಕಚೇರಿಗೆ ಪ್ರಗತಿಪರ ರೈತರ ಭೇಟಿ!

Kalmesh T
Kalmesh T
Visit of progressive farmers to Krishi Jagran Office!

ಹರಿಯಾಣದ ಪ್ರಗತಿಪರ ರೈತ ಮತ್ತು ಪ್ರಗತಿಶೀಲ ಕಿಸಾನ್ ಕ್ಲಬ್‌ನ ಅಧ್ಯಕ್ಷ ವಿಜೇಂದ್ರ ಸಿಂಗ್ ದಲಾಲ್, ಪ್ರಗತಿಶೀಲ ರೈತ ರಮೇಶ್ ಚೌಹಾಣ್ ಮತ್ತು ನವೀನ ರೈತ ಸರ್ದಾರ್ ಓಂಬೀರ್ ಸಿಂಗ್ ಕೃಷಿ ಜಾಗರಣ ಕಚೇರಿಗೆ ಭೇಟಿ ನೀಡಿದರು.

ಕಚೇರಿಗೆ ಆಗಮಿಸಿದ್ದ ಎಲ್ಲಾ ಅತಿಥಿಗಳು ತಮ್ಮ ಅನುಭವ ಮತ್ತು ವಿಚಾರಗಳನ್ನು ಹಂಚಿಕೊಂಡರು.  ಕೃಷಿ ಜಾಗರಣ ಮಾಧ್ಯಮ ಅವರಿಗೆ ಎಲ್ಲ ಹಂತದಲ್ಲಿ ನೆರವಾಗಿದ್ದನ್ನು ಸ್ಮರಿಸಿಕೊಂಡರು.

ಪ್ರಗತಿಪರ ರೈತರ ಕ್ಲಬ್‌ನ ಅಧ್ಯಕ್ಷರಾದ ವಿಜೇಂದ್ರ ಸಿಂಗ್ ದಲಾಲ್ ಅವರು ಕೃಷಿ ಜಾಗರಣದ ಉಪಕ್ರಮ ಮತ್ತು ಸಹಕಾರದೊಂದಿಗೆ ಗ್ರಾಮೀಣ ರೈತರೊಂದಿಗೆ ಹೇಗೆ ಸಂಪರ್ಕ ಸಾಧಿಸುವುದು ಎಂಬುದರ ಕುರಿತು ವಿವರವಾದ ಮಾಹಿತಿಯನ್ನು ಹೇಳಿದರು.

ವಿಜೇಂದ್ರ ಸಿಂಗ್ ಅವರು ದೀರ್ಘಕಾಲದವರೆಗೆ ಕೃಷಿ ಜಾಗರಣದೊಂದಿಗೆ ಸಂಬಂಧ ಹೊಂದಿದ್ದಾರೆ. ಜೀವನದಲ್ಲಿ ಇದುವರೆಗೂ ಯಾವುದೇ ಕ್ಷೇತ್ರದಲ್ಲೂ ಪಂಚಾಯ್ತಿಯಾಗದ ಬಿಜೇಂದ್ರ ಅವರು ಕೃಷಿ ಜಾಗರಣ ಮತ್ತು ಹೊಸ ಆಲೋಚನೆಗಳ ಉಪಕ್ರಮಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಖುಷಿಯಿಂದ ಹೇಳಿದರು.

ವಿಜೇಂದ್ರ ಸಿಂಗ್ ಅವರು ವಿವಿಧ ಕೃಷಿ ಮೇಳಗಳಿಗೆ ರೈತರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ. ಬಿಜೇಂದ್ರ ಅವರು ತಮ್ಮ ಭಾಷಣದಲ್ಲಿ ಹೊಸ ಕೃಷಿ ವಿಧಾನಗಳನ್ನು ಬಳಸಿ ಬೆಳೆಗಳನ್ನು ಉತ್ಪಾದಿಸುವ ಮತ್ತು ವಿವಿಧ ಸ್ಥಳಗಳಿಗೆ ತಲುಪಿಸುವ ಕ್ಷೇತ್ರದಲ್ಲಿ ಅವರು ಹೇಗೆ ಶ್ರಮಿಸಿದ್ದಾರೆ ಎಂಬುದನ್ನು ಪ್ರಸ್ತಾಪಿಸಿದರು.

ಈ ಸಂದರ್ಭದಲ್ಲಿ ಕೃಷಿ ಜಾಗರಣ ಮಾಧ್ಯಮದ ಸಂಸ್ಥಾಪಕ ಎಂ.ಸಿ.ಡೊಮೆನಿಕ್‌, ನಿರ್ದೇಶಕಿ ಶೈನಿ ಡೊಮೆನಿಕ್‌, ಸಿಒಒ ಪಿ.ಕೆ. ಪಂಥ್‌, ಸಂಜಯಕುಮಾರ, ನಿಶಾಂತ, ಪಂಕಜ್‌ ಮುಂತಾದವರು ಇದ್ದರು.

Published On: 19 September 2022, 04:51 PM English Summary: Visit of progressive farmers to Krishi Jagran Office!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.