1. ಸುದ್ದಿಗಳು

ಮಳೆ ಬರುವುದಕ್ಕಿಂತ ಮುಂಚಿತವಾಗಿ ಮುನ್ಸೂಚನೆ ನೀಡುತ್ತದೆ ಮೇಘದೂತ ಆ್ಯಪ್

ಹವಾಮಾನ ಆಧಾರಿತ ಕೃಷಿ ಸಲಹೆಗಳ ವಿತರಣೆ ಮತ್ತು ಧೀರ್ಘಾವದಿ ಹವಾಮಾನದ ಎಚ್ಚರಿಕೆ ನೀಡಲು, ಹವಾಮಾನ ಮುನ್ಸೂಚನೆಯ ಪಾತ್ರ ಮಹತ್ವದಾಗಿದ್ದು, ನೈಸರ್ಗಿಕ ವಿಪತ್ತುಗಳಿಂದ ಬೆಳೆ ಹಾನಿಯನ್ನು ತಡೆಗಟ್ಟುವದಲ್ಲದೆ ಕೃಷಿ ಚಟುವಟಿಕೆಗಳನ್ನು ಮುನ್ನಡೆಸಲು ಅಥವಾ ಮೂಂದೂಡಲೂ ಸಹ ಸಹಾಯ ಮಾಡುತ್ತದೆ.

ಎಲೆಕ್ಟ್ರಾನಿಕ್ ಮಾಧ್ಯಮದ ಸಹಾಯದಿಂದ ನೈಜ ಸಮಯದ ಆಧಾರದ ಮೇಲೆ ಅಂತಿಮ ಬಳಕೆದಾರರಿಗೆ ಹವಾಮಾನ ಮೂನ್ಸೂಚನೆ ಪ್ರಸಾರ ಮಾಡುವುದರಿಂದ ಬೆಳೆ ಉತ್ಪಾದನೆ ಮತ್ತು ರಕ್ಷಣೆಯಲ್ಲಿ ಸಹಾಯವಾಗುತ್ತದೆ. ರೈತ ಹವಾಮಾನದೊಂದಿಗೆ ಹೋರಾಡಲು ಸಾಧ್ಯವಿಲ್ಲ. ಆದರೆ ಹವಮಾನದ ನಿಖರವಾದ ಮಾಹಿತಿ ದೊರೆತರೆ ಆ ಹವಾಮಾನದ ಪರಿಸ್ಥಿತಿಗೆ ತಕ್ಕಂತೆ ಕೃಷಿ ನಿರ್ವಹಣಾ ಯೋಜನೆಗಳನ್ನು ರೂಪಿಸಿಕೊಂಡು ಬೆಳೆ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಆದ್ದರಿಂದ ಹವಾಮಾನ ಮೂನ್ಸೂಚನೆಯ ನಿಖರ ಮಾಹಿತಿ. ಅವಶ್ಯಕವಾಗಿದೆ. ರೈತರು ಲಾಭದಾಯಕ ಬೆಳೆ ಬೆಳೆಯಲು ಏಕೈಕ ಮಾರ್ಗವೆಂದರೆ ನಿಖರವಾದ ಹವಾಮಾನ ಮೂನ್ಸೂಚನೆ ಮತ್ತು ಹವಾಮಾನ ಆಧಾರಿತ ಕೃಷಿ ಸಲಹೆಗಳು, ಈ ಸಲಹೆಗಳನ್ನು ಸಮೂಹ ಸಂವಹನ ಮಾಧ್ಯಮಗಳ ಮೂಲಕ (ರೇಡಿಯೋ, ಟಿವ್ಹಿ, ಮೊಬೈಲ್) ಒದಗಿಸಿದರೆ ರೈತರಿಗೆ ಹೆಚ್ಚಿನ ಮೌಲ್ಯವನ್ನು ನೀಡಿದಂತಾಗುತ್ತದೆ.

ಈ ದಿಶೆಯಲ್ಲಿ ಸ್ಥಳೀಯ ಹವಾಮಾನ ಮುನ್ಸೂಚನೆ ಮತ್ತು ಕೃಷಿ ಆಧಾರಿತ ಸಲಹೆಗಳನ್ನು ಪ್ರಾದೇಶಿಕ ಭಾಷೆಯಲ್ಲಿ ರೈತರಿಗೆ ಮುಟ್ಟಿಸುವ ಪ್ರಯತ್ನದಲ್ಲಿ ಭಾರತೀಯ ಹವಮಾನ ಇಲಾಖೆ (India Meteorological Department) ಭಾರತೀಯ ಕೃಷಿ ಸಂಶೊಧನಾ ಮಂಡಳಿ (Indian Council of Agricultural Research) ಮತ್ತು ಭಾರತೀಯಉಷ್ಣವಲಯದ ಹವಾಮಾನ ಸಂಸ್ಥೆ ((Indian Institute Tropical Meteorology)  ಜಂಟಿಯಾಗಿ “ಮೇಘದೂತ” ಮೊಬೈಲ ಅಪ್ಲಿಕೇಶನನ್ನು ಹೊರತಂದಿದೆ. ಈ ಆ್ಯಪ್‌ ರೈತರಿಗೆ ಮತ್ತು ಆಸಕ್ತ ಬಳಕೆದಾರರಿಗೆ ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ತಿಳಿದುಕೊಳ್ಳಲು ಬಳಕೆದಾರ ಸ್ನೇಹಿ ರೂಪದಲ್ಲಿ ಅನುವು ಮಾಡಿಕೊಟ್ಟಿದೆ. ಇದುರೈತರಿಗೆ ಪ್ರಾದೇಶಿಕ ಪ್ರಮುಖ ಬೆಳೆಗಳ ಮತ್ತು ಜಾನುವಾರುಗಳಿಗೆ ಹವಾಮಾನಆಧಾರಿತ ಕೃಷಿ ಸಲಹೆಗಳನ್ನು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಮಾಹಿತಿ ಒದಗಿಸುತ್ತದೆ. ಈ ಬಳಗವು (ಆ್ಯಪ್) ರೈತರಿಗೆ ಹವಾಮಾನ ಆಧಾರಿತ ನಿಯತಾಂಕಗಳಾದ ಮಳೆ, ಉಷ್ಣಾಂಶ, ಆಧ್ರತೆ, ಗಾಳಿಯ ವೇಗ, ಮತ್ತು ಗಾಳಿಯ ದಿಕ್ಕಿನ ಮುನ್ಸೂಚನೆಯನ್ನು ನೀಡುತ್ತದೆ.

ಈ ನಿಯತಾಂಕಗಳ ಮುನ್ಸೂಚನೆಯು ರೈತರ ಕೃಷಿ ಚಟುವಟಿಕೆಗಳಲ್ಲಿ ಮತ್ತು ಜಾನುವಾರಗಳ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಮಾಹಿತಿಯನ್ನು ವಾರಕ್ಕೆಎರಡು ಬಾರಿ (ಪ್ರತಿ ಮಂಗಳವಾರ ಮತ್ತು ಶುಕ್ರವಾರ) ಜಿಲ್ಲಾಕೃಷಿ ಹವಾಮಾನಘಟಕದಿಂದ ನವೀಕರಿಸಲಾಗುತ್ತದೆ. ಮೊದಲನೇಯ ಹಂತದಲ್ಲಿದೇಶದ ವಿವಿಧ ಭಾಗಗಳಲ್ಲಿ 150 ಜಿಲ್ಲೆಗಳಿಗೆ ಈ ಸೇವೆ ಆರಂಭವಾಗಿದ್ದು, ಮುಂದಿನ ಒಂದು ವರ್ಷದಲ್ಲಿಇದನ್ನು ಹಂತ ಹಂತವಾಗಿದೇಶದ ಉಳಿದ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು.

Android ಮೊಬೈಲ್‌ ಉಪಯೋಗಿಸುವ ಎಲ್ಲ ರೈತರು ಪ್ಲೆಸ್ಟೋರನಲ್ಲಿ MEGHADOOT ಎಂದುಟೈಪ್ ಮಾಡಿ ಈ ಬಳಗವನ್ನು (ಆ್ಯಪ್) ಡೌನಲೋಡ್ ಮಾಡಿಕೊಂಡು ರೈತರು ತಮ್ಮ ಹೆಸರು, ದೂರವಾಣಿ ಸಂಖ್ಯೆ, ರಾಜ್ಯ ಮತ್ತು ಜಿಲ್ಲೆಯನ್ನು ನಮೂದನೆ ಮಾಡಿ ನೋಂದಾಯಿಸಬೇಕು. ನಂತರ ನೊಂದಾಯಿತ ಬಳಕೆದಾರರು ಆಯಾಜಿಲ್ಲೆಯ ನಿರ್ದಿಷ್ಟ ಹವಮಾನ ಮುನ್ಸೂಚನೆ ಮತ್ತು ಕೃಷಿ ಆಧಾರಿತ ಸಲಹೆಗಳ ಮಾಹಿತಿಯನ್ನು ಪಡೆಯಬಹುದು.  ಈ ಬಳಗದಲ್ಲಿ ಹಿಂದಿನ ದಿನಗಳ ಆಯಾ ಜಿಲ್ಲೆಗಳ ಹವಾಮಾನ ಮಾಹಿತಿ ಮತ್ತು ಮುಂದಿನ 5 ದಿನಗಳ ಹವಾಮಾನ ಮುನ್ಸೂಚನೆಯನ್ನು ತಿಳಿಯಬಹುದು ಮತ್ತು ಈ ಹವಾಮಾನ ಮುನ್ಸೂಚನೆ ಆಧಾರಿಸಿ ಜಿಲ್ಲಾವಾರು ಪ್ರಮುಖ ಬೆಳೆಗಳಿಗೆ ವಿವಿಧ ಹಂತಗಳಲ್ಲಿ ಪ್ರಚಲಿತ ಹವಾಮಾನ ಅಂಶಗಳಿಂದ ಬೆಳೆಗಳ ಮೇಲಾಗುವ ಪರಿಣಾಮಗಳ ಬಗ್ಗೆ ಹಾಗೂ ಅದಕ್ಕನುಗುಣವಾಗಿ ಅವುಗಳಿಗೆ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಲಭ್ಯವಿರುತ್ತದೆ. ಇದಲ್ಲದೆ ಪ್ರಚಲಿತ ಹವಾಮಾನವನ್ನಾಧರಿಸಿ ರೈತರು ತುರ್ತಾಗಿ ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳ ಬಗ್ಗೆ ಚುಟುಕು ಸಂದೇಶಗಳನ್ನು ಈ ಆ್ಯಪ್‌ನಲ್ಲಿಕಾಣಬಹುದು.

ರೈತರಿಗೆ ಈ ಆ್ಯಪ್‌ನ ಸುಲಭ ಬಳಕೆಗಾಗಿ ನಕ್ಷೆ ಮತ್ತು ಚಿತ್ರಗಳ ರೂಪದಲ್ಲಿ ಮಾಹಿತಿಯನ್ನು ಒದಗಿಸಲಾಗುತ್ತದೆ. ಬದಲಾಗುತ್ತಿರುವ ಹವಾಮಾನ ಮತ್ತು ವೈಪರಿತ್ಯದಿಂದರೈತರು ಸಾಕಷ್ಟು ತೊಂದರೆ ಮತ್ತು ನಷ್ಟವನ್ನುಅನುಭವಿಸುತ್ತಿದ್ದು, ಮೇಲಿಂದ ಮೇಲೆ ಅನಾವೃಷ್ಠಿ ಇಲ್ಲವೆ ಅತಿವೃಷ್ಠಿ ಸಂಭವಿಸುತ್ತಿರುವುದರಿಂದ ಇವತ್ತಿನ ರೈತರು ಹವಾಮಾನ ಮುನ್ಸೂಚನೆಯನ್ನು ಆಧರಿಸಿ ಕೃಷಿ ಚಟುವಟಿಕೆಗಳನ್ನು ಮಾಡುವುದು ಅತ್ಯವಶ್ಯಕವಾಗಿದೆ. ರೈತರು ಈ ಮೊಬೈಲ್ ಸೇವೆಯನ್ನು ಸದುಪಯೋಗಪಡಿಸಿಕೊಂಡು ಹವಮಾನದಿಂದಾಗುವ ಬೆಳೆ ನಷ್ಟವನ್ನು ಕಡಿಮೆ ಮಾಡಿಕೊಂಡು ಆದಾಯವನ್ನು ಹೆಚ್ಚಿಸಿಕೊಳ್ಳಬೇಕಾಗಿ ವಿನಂತಿ.

ಲೇಖನ: ಡಾ. ಶಿಲ್ಪಾ ವಿ. ಚೋಗಟಾಪೂರ, ಶ್ರೀ ಹಣಮಂತ. ಶ್ರೀ ಶಾರುಖಾನ್ ನಾಡಗೌಡ ಮತ್ತುಡಾ. ಅಮರೇಶ ವೈ. ಎಸ್., ಕೃಷಿ ವಿಜ್ಞಾನಕೇಂದ್ರ ,ಕವಡಿಮಟ್ಟಿ (ಯಾದಗಿರ), ತಾ: ಸುರಪುರ   ಜಿ: ಯಾದಗಿರ

Published On: 11 May 2021, 04:29 PM English Summary: Use Meghadoot app for weather notice

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.