1. ಸುದ್ದಿಗಳು

ಜಾಗತಿಕ ತಾಪಮಾನ ಏರಿಕೆಗೆ ಅವೈಜ್ಞಾನಿಕ ಕೃಷಿ ಪದ್ಧತಿಗಳೂ ಕಾರಣ: ಡಾ.ಆರ್.ಎಚ್.ಪಾಟೀಲ

ಭಾರತದ ಆಹಾರ ಉತ್ಪಾದನೆ ಮಳೆ ಆಧಾರದ ಮೇಲೆ ನಿಂತ್ತಿದ್ದು, ಮುಂದಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದ ಮಳೆಯ ಹಂಚಿಕೆಯಲ್ಲಿ ವ್ಯತ್ಯಾಸವಾಗಿ (ಪ್ರಾದೇಶಿಕ ಅಸಮತೋಲನ) ಬೆಳೆಯ ಉತ್ಪಾದನೆಯ ಮೇಲೆ ಗಣನೀಯ ಪರಿಣಾಮ ಉಂಟಾಗಲಿದೆ ಎಂದು ಧಾರವಾಡ ಕೃಷಿ ಮಹಾವಿದ್ಯಾಲಯದ ಕೃಷಿ ಹವಾಮಾನಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ. ಆರ್.ಎಚ್. ಪಾಟೀಲ ಅವರು ಕಳವಳ ವ್ಯಕ್ತಪಡಿಸಿದರು.

ಹಾವೇರಿ ಜಿಲ್ಲೆ ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದಿAದ ಹಮ್ಮಿಕೊಂಡಿದ್ದ ‘ಹವಾಮಾನ ಬದಲಾವಣೆ-ಕಾರಣಗಳು ಹಾಗೂ ಅನುಸರಿಸಬೇಕಾದ ಕೃಷಿ ಪದ್ಧತಿಗಳು’ ಕುರಿತ ಅಂತರ್ಜಾಲ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಗತಿಕ ತಾಪಮಾನದ ಏರಿಕೆಯು ಜಗತ್ತು ಇಂದು ಎದುರಿಸುತ್ತಿರುವ ಅತೀ ದೊಡ್ಡ ಸಮಸ್ಯೆಯಾಗಿದೆ. ಭೂಮಿಯ ಸಾಮಾನ್ಯ ತಾಪಮಾನಕ್ಕಿಂತ ಅಧಿಕ ತಾಪಮಾನ ಇದ್ದರೆ ಅದನ್ನು ಜಾಗತಿಕ ತಾಪಮಾನ ಎನ್ನುತ್ತಾರೆ. ಮಾನ ನಿರ್ಮಿತ ಚಟುವಟಿಕೆಗಳಿಂದ ಅಂದರೆ ಜನಸಂಖ್ಯಾ ಸ್ಪೋಟ, ಅತೀಯಾದ ಇಂಧನ ಬಳಕೆ, ಆಧುನಿಕ ಜೀವನ ಶೈಲಿ, ಅರಣ್ಯ ನಾಶ, ಅವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸುವುದರಿಂದ ವಾತಾವರಣದಲ್ಲಿ ಹಸಿರು ಮನೆಯ ಅನಿಲಗಳ ಸಾಂದ್ರತೆ ಹೆಚ್ಚಾಗಿ ಭೂಮಿಯ ಮೇಲ್ಮೈ ತಾಪಮಾನ ಅಧಿಕವಾಗಿ ಹವಾಮಾನದ ಬದಲಾವಣೆಗೆ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕೃಷಿ ವಲಯದ ಕೊಡುಗೆ ಶೇ.25

ಜಾಗತಿಕ ತಾಪಮಾನ ಏರಿಕೆಯಲ್ಲಿ ಕೃಷಿ ಪಾತ್ರವೂ ಇದ್ದು, ಒಟ್ಟು ಹಸಿರು ಮನೆ ಅನಿಲ ಹೊರ ಸೂಸುವಿಕೆಯ ಶೇ.25ರಷ್ಟು ಕೃಷಿ, ಅರಣ್ಯ ಮತ್ತು ಭೂಬಳಕೆಯ ಬದಲಾವಣೆಯಿಂದ ಆಗುತ್ತದೆ. ಅತೀಯಾದ ಉಳುಮೆ, ಬೆಳೆ ಸಸ್ಯಾವಶೇಷಗಳ ಸುಡುವಿಕೆಯಿಂದ ಮಣ್ಣಿನಲ್ಲಿರುವ ಸಾವಯವ ಪಧಾರ್ಥಗಳು ಸುಟ್ಟು ಇಂಗಾಲದ ಡೈ ಆಕ್ಸೆöಡ್ ಆಗಿ ವಾತವರಣ ಸೇರುತ್ತದೆ. ಅವೈಜ್ಞಾನಿಕ ರಸಗೊಬ್ಬರಗಳ ಬಳಕೆಯಿಂದ ನೈಟ್ರಸ್ ಆಕ್ಸೆöÊಡ್ ಹಾಗೂ ನೀರು ನಿಲ್ಲಿಸಿ ಭತ್ತದ ಕೃಷಿ ಮಾಡುವುದರಿಂದ ಮಿಥೇನ್ ಅನಿಲ ಬಿಡುಗಡೆಯಾಗಿ ತಾಪಮಾನದ ಏರಿಕೆಗೆ ಕಾರಣವಾಗುತ್ತದೆ. ತಾಪಮಾನದ ಏರಿಕೆಯ ಪರಿಣಾಮದಿಂದ ಬೆಳೆಯ ಬೆಳವಣಿಗೆ ತ್ವರಿತಗೊಂಡು, ಬೆಳೆಗೆ ನೀರಿನ ಬೇಡಿಕೆ ಹೆಚ್ಚಾಗಿ ಅಥವಾ ತೇವಾಂಶದ ಕೊರತೆಯಿಂದ ಪೋಷಕಾಂಶಗಳ ಕೊರತೆ ಉಂಟಾಗಿ, ಕಡಿಮೆ ದಿನಗಳಲ್ಲಿ ಬೆಳೆ ಕೋಯ್ಲಿಗೆ ಬರುವುದರಿಂದ ಇಳುವರಿ ಕಡಿಮೆಯಾಗುತ್ತದೆ ಎಂದು ವಿವರಿಸಿದರು.

ಜಾಗತಿಕ ತಾಪಮಾನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಇದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನವೀಕರಿಸಬಹುದಾದ ಸಂಪನ್ಮೂಲಗಳ ಬಳಕೆ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸುವುದು ಅಅತ್ಯಗತ್ಯವಾಗಿದೆ. ಕೃಷಿಯಲ್ಲಿ ಬೆಳೆ ಅವಶೇಷಗಳನ್ನು ಸುಡುವ ಪದ್ಧತಿಯನ್ನು ಬಿಟ್ಟು, ಆ ಅವಶೇಷಗಳನ್ನು ಮಣ್ಣಿನ ಮೇಲೆ ಹೊದಿಕೆ ರೀತಿ ಹಾಕುವುದರಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಬಹುದು. ಜೊತೆಗೆ, ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. ರಸಾಯನಿಕ ಗೊಬ್ಬರಗಳ ಅವೈಜ್ಞಾನಿಕ ಬಳಕೆಯಿಂದ ವಿಮುಖರಾಗಿ ಸಾವಯವ ಗೊಬ್ಬರದ ಬಳಕೆ ಕಡೆ ನಮ್ಮ ಚಿತ್ತವಿರಬೇಕು. ನೀರು ನಿಲ್ಲಿಸಿ ಕೆಸರು ಗದ್ದೆ ಮಾಡಿ ಭತ್ತ ಬಿತ್ತನೆ ಮಾಡುವುದನ್ನು ನಿಲ್ಲಿಸಿ ಕೂರಿಗೆ ಅಥವಾ ನೇರ ಬಿತ್ತನೆಗೆ ಒತ್ತು ಕೊಡಬೇಕು ಎಂದು ಸಸಲಹೆ ನೀಡಿದರು.

ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮ ನಿಭಾಯಿಸಲು ಮತ್ತು ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಒಡ್ಡುಗಳನ್ನು ಹಾಕುವುದು ಅಥವಾ ಚೌಕು ಮಡಿಗಳನ್ನು ಮಾಡಿ ಮಳೆ ನೀರು ನಿಲ್ಲಿಸಿ ಇಳಿಜಾರಿಗೆ ಅಡ್ಡಲಾಗಿ ಬೇಸಾಯ ಮಾಡಬೇಕು ಜೊತೆಗೆ ಧೀರ್ಘಕಾಲಿಕ ಹಸಿರು ಹೊದಿಕೆಯನ್ನು ಹೆಚ್ಚಿಸಲು ಕೃಷಿ ಅರಣ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ರೈತರ ಎಲ್ಲಾ ಕೃಷಿ ಚಟುವಟಿಕೆಗಳು ಹವಾಮಾನ ಆಧಾರಿತವಾಗಿವೆ. ಹೀಗಾಗಿ ಕೃಷಿಕರು ಹವಾಮಾನ ಮುನ್ಸೂಚನೆ ಆಧಾರಿತ ‘ಮೌಸಮ್’ ಹಾಗೂ ‘ಮೇಘದೂತ’ ಆ್ಯಪ್‌ಗಳನ್ನು ಬಳಸಬೇಕು ಎಂದು ಡಾ.ಆರ್.ಎಚ್.ಪಾಟೀಲ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಡಾ. ಅಶೋಕ ಪಿ. ಅವರು, ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ಮೇಲಿಂದ ಮೇಲೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂಭವಿಸುತ್ತಿರುವುದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹವಾಮಾನ ಬದಲಾವಣೆಗೆ ತಕ್ಕಂತೆ ಹವಾಮಾನ ಮೂನ್ಸೂಚನೆಯನ್ನು ಗಮನಿಸಿ ಸೂಕ್ತ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಷಯ ತಜ್ಞರಾದ ಡಾ. ಶಾಂತವೀರಯ್ಯ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ಸಸತವಾಗಿ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ರೈತರು ಯಾವ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಲಹೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸುಮಾರು 96 ರೈತರು ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದರು.

Published On: 29 July 2021, 08:11 PM English Summary: unscientific farming practices are also main rasons for global warming

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.