ರೈತರ ಬಗ್ಗೆ ದೂರದೃಷ್ಟಿ ಹೊಂದಿದ್ದ ನಾಯಕ ಉಮೇಶ್ ಕತ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಉಮೇಶ್ ಕತ್ತಿ ನಮ್ಮ ಜೊತೆ ಇಲ್ಲ. ಅವರು ಸ್ವರ್ಗದಿಂದಲೇ ನಿಖಿಲ್ ಕತ್ತಿಗೆ, ರಮೇಶ್ ಕತ್ತಿಗೆ ಆಶೀರ್ವಾದ ಮಾಡುತ್ತಿದ್ದಾರೆ. ನೀವೂ ಇವರಿಗೆ ಆಶೀರ್ವಾದ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಉಮೇಶ್ ಕತ್ತಿ ಅವರು ಸೋಲಿಲ್ಲದ ಸರದಾರ ಆಗಿದ್ದರು. ವಿಶ್ವನಾಥ್ ಕತ್ತಿಯವರ ಆಕಸ್ಮಿಕ ಸಾವಿನಿಂದ ಉಮೇಶ್ ಕತ್ತಿ ಅವರಿಗೆ ವಿಧಾನ ಸಭೆಗೆ ಪ್ರವೇಶಿಸುವ ಅನಿವಾರ್ಯವಾಗಿ ಸಂದರ್ಭ ಇತ್ತು.
ಒಂಬತ್ತು ಬಾರಿ ನಿರಂತರವಾಗಿ ಹುಕ್ಕೇರಿಯನ್ನು ಪ್ರತಿನಿಧಿಸಿ ವಿಧಾನಸಭೆಗೆ ಆಯ್ಕೆ ಆಗಿದ್ದರು. ನಿಮ್ಮೆಲ್ಲರ ಆಶೀರ್ವಾದದಿಂದ ಅವರು ಹಿಂತಿರುಗಿ ನೋಡಲಿಲ್ಲ.
ಹುಕ್ಕೇರಿ ಅಭಿವೃದ್ಧಿಗೆ ಕಂಕಣ ಕಟ್ಟಿಕೊಂಡು ನಿರಂತವಾಗಿ ಶ್ರಮಿಸಿದರು. ಯಾವುದೇ ಖಾತೆ ಕೊಟ್ಟರೂ ಯಶಸ್ವಿಯಾಗಿ ನಿಭಾಯಿಸಿದವರು ಉಮೇಶ್ ಕತ್ತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ರೈತರ ಬಗ್ಗೆ ದೂರದೃಷ್ಟಿ ಹೊಂದಿದ್ದರು
ಉಮೇಶ್ ಕತ್ತಿ ಅವರಿಗೆ ರೈತರ ಬಗ್ಗೆ ಅಪಾರ ಕಾಳಜಿ ಇತ್ತು. ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಕಬ್ಬು ತಾಲ್ಲೂಕಿನಿಂದ ಹೊರ ಹೋಗಕೂಡದೆಂದು ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ ಇಲ್ಲಿನ ಕಬ್ಬನ್ನು ಇಲ್ಲಿಯೇ ನುರಿಸಿದರು.
ಅವರು ಆಹಾರ ಸಚಿವರಾಗಿ ಅಕ್ಕಿ ಜೊತೆ ಉತ್ತರ ಕರ್ನಾಟಕದ ಪಡಿತರಿಗೆ ಜೋಳ ಖರೀದಿ ಮಾಡಬೇಕು ದಕ್ಷಿಣ ಕರ್ನಾಟಕದ ಪಡಿತರಿಗೆ ರಾಗಿ ಖರೀದಿ ಮಾಡಬೇಕು ಎಂದು ಹಠ ಮಾಡಿದರು.
ಕರ್ನಾಟಕದ ರೈತರಿಗೆ ಅನುಕೂಲ ಮಾಡಿಕೊಡಲು ಪಡಿತರದಲ್ಲಿ ಜೋಳ, ರಾಗಿ ಖರೀದಿಗೆ ಯಡಿಯೂರಪ್ಪ ಅವರಿಂದ ಆದೇಶ ಮಾಡಿಸಿದರು ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.
ಏತ ನೀರಾವರಿ ಮಂಜೂರು ಮಾಡಿಸಿದ್ದರು
ನಾನು ನೀರಾವರಿ ಸಚಿವನಾಗಿದ್ದಾಗ ಸಂಗಮ್ ಡ್ಯಾಮ್ ಯೋಜನೆಗೆ ಅನುಮತಿ ನೀಡಲಾಗಿತ್ತು. ಘಟಪ್ರಭಾ ಕೆನಾಲ್ ನ 32 ಕಿಲೋ ಮೀಟರ್ ಸಂಪೂರ್ಣ ಆಧುನಿಕರಣ ಮಾಡಿದ್ದು ಉಮೇಶ್ ಕತ್ತಿ.
ಅಡವಿ ಸಿದ್ದೇಶ್ವರ, ಶಂಕರ ಲಿಂಗ ಏತ ನೀರಾವರಿಗೂ ಉಮೇಶ್ ಕತ್ತಿ ಮಂಜೂರಾತಿ ಮಾಡಿಸಿದ್ದರು. ನಾನು ಮುಖ್ಯಮಂತ್ರಿ ಆಗಿ ಅಲ್ಲ ಒಬ್ಬ ಸಹೋದರನಾಗಿ ನಿನ್ನ ಕೆಲಸ ಮಾಡಿಕೊಡುವುದಾಗಿ ಉಮೇಶ್ ಕತ್ತಿಗೆ ಹೇಳಿದ್ದೆ.
ನನಗೆ ಅವರಿಗೆ ಮೂರನೇ ತಲೆಮಾರಿನ ಸಂಬಂಧ ಇದೆ. ಈಗ ಅವರ ಕಾರ್ಯವನ್ನು ರಮೇಶ್ ಕತ್ತಿ ಹಾಗೂ ನಿಖಿಲ್ ಕತ್ತಿ ಮುಂದುವರೆಸಿಕೊಂಡು ಹೋಗುತ್ತಾರೆ. ಅವರಿಗೆ ನೀವು ಆಶೀರ್ವಾದ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಚಿತ್ರ ಕೃಪೆ : PTI/ANI
Share your comments