1. ಸುದ್ದಿಗಳು

ಉದ್ಧವ್ ಠಾಕ್ರೆಗೆ ಸಿಎಂ ಸ್ಥಾನ ಹೋಗುವ ಭೀತಿ, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಅನಿವಾರ್ಯತೆ ಎದುರಾಗಿದೆ

ನಾಟಕೀಯ ತಿರುವುಗಳನ್ನು ಕಂಡು, ಮಹಾರಾಷ್ಟ್ರ ಮುಖ್ಯಮಂತ್ರಿ ಗದ್ದುಗೆ ಏರಿದ್ದ ಉದ್ಧವ್‌ ಠಾಕ್ರೆಗೆ ಈಗ ಹುದ್ದೆ ಕಳೆದುಕೊಳ್ಳುವ ಭೀತಿ ಎದುರಾಗಿದೆ.  ಅತ್ತ ವಿಧಾನಸಭೆ, ಇತ್ತ ವಿಧಾನ ಪರಿಷತ್ತನ್ನೂ ಪ್ರತಿನಿಧಿಸದ ಠಾಕ್ರೆ, 6 ತಿಂಗಳ ಗಡುವಿನ ಅಂಚಿನಲ್ಲಿದ್ದು, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಅನಿವಾರ್ಯತೆ ಎದುರಾಗಿದೆ.

ಉದ್ಧವ್‌ ಠಾಕ್ರೆ ಸಿಎಂ ಆಗಿ ಮೇ 28ಕ್ಕೆ 6 ತಿಂಗಳು ಪೂರ್ಣ­ಗೊಳ್ಳುತ್ತದೆ. ಮಹಾರಾಷ್ಟ್ರದ ಎರಡೂ ವಿಧಾನ­ಸಭೆಗಳಲ್ಲಿ ಸದಸ್ಯರಾಗದೆ, ಎನ್‌ಸಿಪಿ- ಕಾಂಗ್ರೆಸ್‌ ಪಕ್ಷಗಳ ಬೆಂಬಲದೊಂದಿಗೆ ಸಿಎಂ ಪದವಿ ಸ್ವೀಕರಿಸಿದ್ದರು.

ಚುನಾವಣೆ ದೂರದ ಮಾತು: 164ನೇ ವಿಧಿಯಂತೆ ಅವರಿಗೆ ಶಾಸಕ ಸ್ಥಾನ ಹೊಂದಲು 6 ತಿಂಗಳ ಅವಕಾಶವಿತ್ತು. ಆದರೆ, ನಿರ್ಣಾಯಕ ಘಟ್ಟದಲ್ಲೇ ಕೋವಿಡ್ 19 ವೈರಸ್, ಮಹಾರಾಷ್ಟ್ರದಲ್ಲಿ ಅಟ್ಟಹಾಸ ಮೆರೆದಿದೆ. ಇಂಥ ಸಂದಿಗ್ಧತೆಯಲ್ಲಿ ಚುನಾವಣೆ ದೂರದ ಮಾತು.

ಕೊರೋನಾ ವೈರಸ್ ಬಿಕ್ಕಟ್ಟಿನಿಂದಾಗಿ ಎಲ್ಲಾ ಚುನಾವಣೆಗಳನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದ್ದು, ಮಹಾರಾಷ್ಟ್ರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆಯಿದೆ.

ದಾರಿಗಳೇ ಇಲ್ಲ: ಕೋವಿಡ್ 19 ವೈರಸ್ ಪೂರ್ವದಲ್ಲಿಯೇ ಠಾಕ್ರೆ, ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ಸ್ಪರ್ಧಿಸಿ ಗೆಲ್ಲ­ಬೇಕಿತ್ತು. ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಪ್ರಸ್ತುತ 2 ಶಾಸಕ ಹುದ್ದೆಗಳು ಖಾಲಿ ಇವೆ. ರಾಜ್ಯಪಾಲರು ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ, ಆಂದೋಲನ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಅಲ್ಲಿಗೆ ಆರಿಸು­ತ್ತಾರೆ. ಈ ಯಾವ ಕ್ಷೇತ್ರಗಳಿಗೂ ಉದ್ಧವ್‌ ಹೊಂದುವುದೇ ಇಲ್ಲ.

ಮರು ಆಯ್ಕೆ?: ಉದ್ಧವ್‌ ಮೇ 28ಕ್ಕೆ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ, ಪುನಃ ಅಧಿಕಾರ ಹಿಡಿಯಬಹುದೇ ಎಂಬ ಜಿಜ್ಞಾಸೆಯೂ ಇದೆ. ಆದರೆ ಇದು ಸಾಧ್ಯವಾಗದ ಮಾತು. ಹೀಗಾಗಿ ಉದ್ಧವ್‌ ಸಿಎಂ ಸ್ಥಾನಕ್ಕೆ ಕೋವಿಡ್ 19 ವೈರಸ್ ಕುತ್ತು ತರುವ ಸಾಧ್ಯತೆಯೇ ದಟ್ಟವಾಗಿದೆ.

Published On: 25 April 2020, 04:29 PM English Summary: Uddhav Thackeray fears going to CM, resigns as CM

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.