1. ಸುದ್ದಿಗಳು

ತುಟ್ಟಿ ಟೊಮೆಟೊ ರಕ್ಷಣೆಗೆ ಬೌನ್ಸರ್‌ಗಳ ನೇಮಕ ಮಾಡಿಕೊಂಡ ವ್ಯಾಪಾರಿ

Kalmesh T
Kalmesh T
Tomato seller hired bouncers as people are indulging in violence & even looting tomatoes

Tomato seller hired bouncers : ಇತ್ತೀಚೆಗೆ ಟೊಮೆಟೊ ಬೆಲೆ ಏರಿಕೆಯಾಗಿದ್ದು ನಮಗೆಲ್ಲ ತಿಳಿದಿರುವ ಸಂಗತಿ. ಈ ಬೆಲೆ ಹೆಚ್ಚಳದ ನಂತರ ಟೊಮೆಟೊ ವ್ಯಾಪಾರಿಯೊಂದಿಗೆ ಗ್ರಾಹಕರು ಬೆಲೆಯ (tomato price hike) ಸಲುವಾಗಿ ಜಗಳವಾಡುತ್ತಿದ್ದು, ಕೆಲವೊಂದು ಸಲ ಕದಿಯುವುದು ಕೂಡ ಮಾಡುತ್ತಿದ್ದಾರೆ. ಇದಕ್ಕೆ ಬೇಸತ್ತು ವಾರಣಾಸಿಯ ವ್ಯಾಪಾರಿಯೊಬ್ಬರು ಇಬ್ಬರು ಬೌನ್ಸರ್ಸ್‌ಗಳನ್ನು ನೇಮಕ ಮಾಡಿಕೊಂಡಿದ್ದಾರೆ.

Tomato seller hired bouncers : ವಿವಿಧ ಕಾರಣಗಳಿದಾಗಿ ಪ್ರಸ್ತುತ ದೇಶಾದ್ಯಂತ ಟೊಮೆಟೊ ಬೆಲೆ ತುಸು ಹೆಚ್ಚೆ ಇದೆ. ಗಗನಕ್ಕೇರಿರುವ ಬೆನ್ನಲ್ಲೇ ಟೊಮೆಟೋ ಕದಿಯುವವರ ಸಂಖ್ಯೆಯೂ ಏರಿಕೆಯಾಗಿದೆ. ಗ್ರಾಹಕರಿಂದ ತನ್ನ ಬೆಲೆಬಾಳುವ ಟೊಮೆಟೋಗಳನ್ನು ರಕ್ಷಿಸಿಕೊಳ್ಳಲು ಉತ್ತರ ಪ್ರದೇಶದ ವಾರಾಣಸಿಯ ತರಕಾರಿ ವ್ಯಾಪಾರಿಯೊಬ್ಬ ತನ್ನ ಅಂಗಡಿಯಲ್ಲಿ ಇಬ್ಬರು ಬೌನ್ಸರ್‌ಗಳನ್ನು (Tomato seller hired bouncers) ನೇಮಿಸಿಕೊಂಡಿದ್ದಾನೆ.

ಹಲವಾರು ಪ್ರದೇಶಗಳಲ್ಲಿ ಮಳೆಯಿಂದಾಗಿ ಸೀಮಿತ ಪೂರೈಕೆಯಿಂದಾಗಿ, ದೇಶಾದ್ಯಂತ ಟೊಮೆಟೊ ಬೆಲೆಯಲ್ಲಿ (tomato price hike) ಗಮನಾರ್ಹ ಏರಿಕೆ ಕಂಡುಬಂದಿದೆ.

ಜಿಗೆ ₹160 ರೂಪಾಯಿಗಳನ್ನು ದಾಟಿ 200ರ ವರೆಗೂ ತಲುಪಿದೆ. ಮೆಟ್ರೋಪಾಲಿಟನ್ ನಗರಗಳ ಪೈಕಿ, ಕೋಲ್ಕತ್ತಾ, ದೆಹಲಿ, ಮುಂಬೈಗಳಲ್ಲಿ ದಾಖಲೆಯ ಬೆಲೆಯಲ್ಲಿ ಟೊಮೆಟೊ ಮಾರಾಟವಾಗಿದೆ.

tomato price hike ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ವಾರಣಾಸಿಯ ತರಕಾರಿ ಮಾರಾಟಗಾರರೊಬ್ಬರು ಟೊಮೆಟೊ ಬೆಲೆ ಗಗನಕ್ಕೇರಿರುವ ನಡುವೆ ಗ್ರಾಹಕರ ನಡುವೆ ಘರ್ಷಣೆಯನ್ನು ತಡೆಯಲು ಮತ್ತು ತಮ್ಮ ಟೊಮೆಟೊ ಕಾಪಾಡಿಕೊಳ್ಳಲು ಬೌನ್ಸರ್‌ಗಳನ್ನು ನೇಮಿಸುಕೊಳ್ಳುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ವ್ಯಾಪಾರಿ ಅಜಯ್‌ ಫೌಜಿ, ‘ಟೊಮೆಟೋ ಬೆಲೆ ಗಣನೀಯ ರೂಪದಲ್ಲಿ ಹೆಚ್ಚಾಗಿದೆ. ಹೀಗಾಗಿ ಅಂಗಡಿಗೆ ಬರುವ ಗ್ರಾಹಕರು ಬೆಲೆ ಕುರಿತು ಕಡಿಮೆ ಮಾಡುವಂತೆ ವಾಗ್ವಾದ ಆರಂಭಿಸುತ್ತಾರೆ. ಅಷ್ಟೇ ಅಲ್ಲದೇ ಟೊಮೆಟೋ ಕಳ್ಳತನವನ್ನು ಕೂಡ ಮಾಡುತ್ತಾರೆ.

ವ್ಯಾಪರವನ್ನೆ ನೆಚ್ಚಿಕೊಂಡು ಬದುಕುವ ನಾನು ಇದರಿಂದ ಸುಸ್ತಾಗಿ ಹೋಗಿದ್ದೇವೆ. ಹೀಗಾಗಿ ಬೇರೆ ಉಪಾಯ ತಿಳಿಯದೇ  ಬೌನ್ಸರ್‌ಗಳನ್ನು ನೇಮಕ ಮಾಡಿಕೊಂಡಿದ್ದೇನೆ.

ವಾರಾಣಸಿಯಲ್ಲಿ ಸದ್ಯ ಟೊಮೆಟೋ ಬೆಲೆ ಕೇಜಿಗೆ 160 ರುಪಾಯಿಯಿದ್ದು ಜನರು ಕೇವಲ 50 ಮತ್ತು 100 ಗ್ರಾಂ ಟೊಮೆಟೋ ಖರೀದಿ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಟೊಮೆಟೊ ಕಾಯಲು ಬೌನ್ಸರ್‌ಗಳನ್ನ ನೇಮಕ (Tomato seller hired bouncers) ಮಾಡಿಕೊಂಡಿರುವ ಫೌಜಿ, ಬೌನ್ಸರ್‌ಗಳಿಗೆ ನೀಡುತ್ತಿರುವ ಸಂಬಳದ ಕುರಿತು ತಿಳಿಸಿಲ್ಲ.  

Published On: 11 July 2023, 11:29 AM English Summary: Tomato seller hired bouncers as people are indulging in violence & even looting tomatoes

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.