1. ಸುದ್ದಿಗಳು

Yash 3 ಯುವ ಯಶ್‌ ಅಭಿಮಾನಿಗಳ ದಾರುಣ ಸಾವು: ಸಾವಿಗೆ ಇದೇ ಕಾರಣ!

Hitesh
Hitesh
ನಟ ಯಶ್‌

ಯಶ್‌ ಅವರ ಜನ್ಮದಿನದಂದೇ ರಾಜ್ಯದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಅಭಿಮಾನಿಗಳ ಸಾವು ಯಶ್‌ಗೆ ಕಹಿ ಅನುಭೂತಿಯನ್ನು ನೀಡಿದೆ.

ಯಶ್‌ Yash (actor) ಅವರ ಬರ್ತಡೇಯಂದೇ ಮೂರು ಜನ ಅಭಿಮಾನಿಗಳು ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿದ್ದಾರೆ.   

ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಲಕ್ಷೇಶ್ವರ ತಾಲ್ಲೂಕಿನ   ಸೂರಣಗಿ ಗ್ರಾಮದ ಅಂಬೇಡ್ಕರ ನಗರದ ಹತ್ತಿರ ಚಿತ್ರನಟ ಯಶ್

ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಯಶ್ (Naveen Kumar Gowda) ಅವರ ಭಾವಚಿತ್ರದ ಕಟೌಟ್‌

ಅನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಸಲುವಾಗಿ ರಾತ್ರಿ 12.30 ಸಂದರ್ಭದಲ್ಲಿ ವಿದ್ಯುತ್ ತಂತಿ ಸ್ಪರ್ಷವಾಗಿ

ಅಭಿಮಾನಿಗಳು ಸ್ಥಳದಲ್ಲೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. 

ನಟ ಯಶ್‌ ಜನುಮದಿನವೇ ಈ ಘಟನೆ ನಡೆದಿರುವುದು ಅವರಿಗೆ ಅರಗಿಸಿಕೊಳ್ಳಲಾಗದಂತಾಗಿದೆ. 

ಘಟನೆಯ ಹಿನ್ನೆಲೆ ಏನು

ಜನವರಿ 8ರಂದು ಯಶ್‌ (Yash)  ಅವರ ಹ್ಯಾಪಿ ಬರ್ತಡೇ ಇದೆ.

ಆದರೆ, ಈ ಬಾರಿ ನಾನು ನಿಮ್ಮೊಂದಿಗೆ ಕಾಲ ಕಳೆಯಲು ಸಾಧ್ಯವಾಗುತ್ತಿಲ್ಲ.

ನಾನು ಹೊರಗೆ ಇರುತ್ತೇನೆ. ಹೀಗಾಗಿ, ಅಭಿಮಾನಿಗಳು ಸಹಕಾರ ಕೊಡಬೇಕು ಎಂದು ಈಗಾಗಲೇ ನಟ ಯಶ್‌ ಹೇಳಿದ್ದರು.

ಆದರೆ, ಕರ್ನಾಟಕದ ವಿವಿಧ ಭಾಗದಲ್ಲಿ ಯಶ್‌ನ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದು,

ಯಶ್‌ ಅವರ ಕಟೌಟ್‌ಗಳು ಹಾಗೂ ಭಾವಚಿತ್ರ ಅಳವಡಿಸುವುದರಲ್ಲಿ ನಿರತರಾಗಿದ್ದರು.

ಇನ್ನು ಭಾನುವಾರ ತಡರಾತ್ರಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಆರಕ್ಕೂ ಹೆಚ್ಚು ಜನ ಕಟೌಟ್‌ ಕಟ್ಟುವಾಗ ವಿದ್ಯುತ್‌ ಸ್ಪರ್ಶಿಸಿದೆ.

ಈ ಸಂದರ್ಭದಲ್ಲಿ ಸ್ಥಳದಲ್ಲೇ ಮೂವರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಅಲ್ಲದೇ ಇನ್ನೂ ಮೂವರು ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾವನ್ನಪ್ಪಿದವರೆಲ್ಲ ಯುವಕರು

ಸಾವನ್ನಪ್ಪಿರುವ ಯಶ್‌ನ  (Yash fans )ಮೂರು ಜನ ಅಭಿಮಾನಿಗಳೇಲ್ಲರೂ ಯುವಕರೇ ಆಗಿದ್ದಾರೆ.

ಹನುಮಂತಪ್ಪ ಮಜ್ಜೂರಪ್ಪ ಹರಿಜನ(21 ವರ್ಷ), ಮುರಳಿ ನೀಲಪ್ಪ ನಡುವಿನಮನಿ(20 ವರ್ಷ) ಹಾಗೂ ನವೀನ ನೀಲಪ್ಪ ಗಾಜಿ (19 ವರ್ಷ) ವರ್ಷ ಈ ಮೂರು ಜನ ವಿದ್ಯುತ್‌ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ.

ಅಲ್ಲದೇ ಇನ್ನೂ ಮೂರು ಜನ ಯುವಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡ ಯುವಕರ ವಿವರ ಈ ರೀತಿ ಇದೆ.  ಮಂಜುನಾಥ ಸಿದ್ದಪ್ಪ ಹರಿಜನ,

ಹನಮಂತ ಗಾಳೆಪ್ಪ ಹರಿಜನ ಹಾಗೂ ಪ್ರಕಾಶ ಶಿವಪ್ಪ ಮ್ಯಾಗೇರಿ.

ಸರ್ಕಾರದಿಂದ ಪರಿಹಾರ ಘೋಷಣೆ

ಯಶ್‌ ಅಭಿಮಾನಿಗಳಿಗೆ ರಾಜ್ಯದ ವಿವಿಧ ಭಾಗದಿಂದ ಸಂತಾಪ, ಬೇಸರ ಹಾಗೂ ಅಜಾಗುರುಕತೆಗೆ ಅಸಮಾಧಾನವೂ ಸಹ ವ್ಯಕ್ತವಾಗಿದೆ.

ಈ ನಡುವೆಯೇ ಸರ್ಕಾರವು ಮೃತ ಯುವಕರು ಹಾಗೂ ಗಾಯಗೊಂಡ ಯುವಕರ ಕುಟುಂಬಗಳಿಗೆ ಪರಿಹಾರ ಘೋಷಿಸಿದೆ.

ಮೃತಪಟ್ಟ ಯುವಕರು ಹಾಗೂ ಗಾಯಗೊಂಡವರು ಬಡಕುಟುಂಬಕ್ಕೆ ಸೇರಿದವರಾಗಿದ್ದು, ಪರಿಶಿಷ್ಟ ವರ್ಗಕ್ಕೆ ಸೇರಿದ್ದಾರೆ.

ಇಂಥ ಸಂಕಷ್ಟದ ಸಂದರ್ಭದಲ್ಲಿ ಬಡ ಕುಟುಂಬಗಳ ನೆರವಿಗೆ ಸರ್ಕಾರದ ವತಿಯಿಂದ ಅಗತ್ಯ ಪರಿಹಾರ ನೀಡಬೇಕು

ಎಂದು ಸಚಿವ ಎಚ್‌.ಕೆ ಪಾಟೀಲ ಅವರು ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ ಕುಟುಂಬದವರಿಗೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. 

ಸಿ.ಎಂ ಸಿದ್ದರಾಮಯ್ಯ ಸಂತಾಪ ಸೂಚನೆ

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಚಿತ್ರನಟ ಯಶ್ ಅವರ ಜನ್ಮದಿನದ ಫ್ಲೆಕ್ಸ್ ಕಟ್ಟುವ ವೇಳೆ

ವಿದ್ಯುತ್ ಪ್ರವಹಿಸಿ ಮೂವರು ಯುವಕರು ಮೃತಪಟ್ಟ ಸುದ್ದಿ ತಿಳಿದು ಬೇಸರವಾಯಿತು ಎಂದು

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಬದುಕಿ ಬಾಳಬೇಕಿದ್ದ ಹುಡುಗರು ಹೀಗೆ ಅಚಾತುರ್ಯದಿಂದ ಸಾವಿಗೀಡಾಗಿದ್ದಾರೆ, ಅವರನ್ನು ನಂಬಿದ್ದ ಕುಟುಂಬವೀಗ ಸಂಕಷ್ಟಕ್ಕೆ

ಸಿಲುಕಿದ್ದು ಆ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ಮೃತ ದುರ್ದೈವಿಗಳಿಗೆ ತಲಾ 2 ಲಕ್ಷ

ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.   

ನಟ ಯಶ್‌ ಬರೆದ ಪತ್ರ

ಮೃತರ ಮನೆಗೆ ಯಶ್‌ ಭೇಟಿ

ಮೃತ ಅಭಿಮಾನಿಗಳ ಮನೆಗೆ ಯಶ್‌ ಭೇಟಿ ನೀಡಬೇಕು ಎಂದು ಯಶ್‌ ಅಭಿಮಾನಿಗಳು (Yash fans insist) ಒತ್ತಾಯಿಸಿದ್ದರು.

ಇದೀಗ ಸೋಮವಾರ ಸಂಜೆಯೇ ಯಶ್‌ ಅವರು ಗದಗ ಭೇಟಿ ನೀಡಲಿದ್ದಾರೆ. ಮೃತ ಯುವಕರ ಕುಟುಂಬದವರಿಗೆ

ಸಾಂತ್ವಾನ ಹೇಳಲಿದ್ದಾರೆ ಎಂದು ವರದಿ ಆಗಿದೆ.

 ಪ್ರೀತಿಯ ಅಭಿಮಾನಿಗಳೇ ಕ್ಷಮಿಸಿ ಎಂದಿದ್ದರು ಯಶ್‌!

ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ...

ನಿಮ್ಮ ಕಲ್ಮಶವಿಲ್ಲದ ಪ್ರೀತಿ, ಸಾಟಿಯೇ ಇಲ್ಲದ ಅಭಿಮಾನ, ನನ್ನ ಹೃದಯ ತುಂಬುವಂತೆ ಮಾಡಿದೆ...

ನನಗೆ ಗೊತ್ತು ನೀವೆಲ್ಲಾ ಕಾಯುತ್ತಿದ್ದೀರಾ... ಎನ್ನುವ ಸಾಲುಗಳೊಂದಿಗೆ ಯಶ್‌ ಅವರು ಅವರ

ಅಭಿಮಾನಿಗಳಿಗೆ ಈಚೆಗೆ ಸುದೀರ್ಘವಾದ ಪತ್ರವೊಂದನ್ನು ಬರೆದಿದ್ದರು.

ನಟ ಯಶ್‌

ಅದರಲ್ಲಿ ಮುಂದುವರಿದು, ಹುಟ್ಟಿದ ದಿನ ತುಂಬಾ ವಿಶೇಷ ಅಂತ ನನಗೆ ಅನ್ನಿಸೋಕೆ ಶುರುವಾಗಿದೆ

ಇತ್ತೀಚಿನ ವರ್ಷಗಳಲ್ಲಿ... ಯಾವಾಗ ನೀವು ನನ್ನ ದಿನವನ್ನ ನಿಮ್ಮ ದಿನವನ್ನಾಗಿಸಿಕೊಂಡು ಆಚರಿಸಿ ವಿಜೃಂಭಿಸೋಕೆ ಶುರು ಮಾಡಿದ್ದರಿಂದ...

ಹಾಗಾಗಿ ನಾನು ಕೂಡ ಈ ವರ್ಷದ ಹುಟ್ಟುಹಬ್ಬದಂದು ನಿಮ್ಮನ್ನ ನೋಡಬೇಕು.. ನಿಮ್ಮೊಂದಿಗೆ ಸಮಯ ಕಳೆಯಬೇಕು ಅಂದುಕೊಂಡಿದ್ದೆ

ಆದರೆ ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ...

ನಿಮಗಾಗಿ ವಿಭಿನ್ನವಾಗಿರೋದೆನನ್ನೂ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ..

ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬದ ನಿಮ್ಮ ಉಡುಗೊರೆ ...

... ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ ಆದರೆ ಆದಷ್ಟು ಬೇಗ ನಿಮಗೆ ಸಿಗುತ್ತೇನೆ

ಮತ್ತು ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ.

ನಿಮ್ಮ ಪ್ರೀತಿಯ ಯಶ್  ಎಂದು ಹೇಳಿದ್ದರು.  

Published On: 08 January 2024, 05:07 PM English Summary: The tragic death of 3 young Yash fans: This is the cause of death!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.