ವಿಶ್ವದಾದ್ಯಂತ ಅಕ್ಕಿ ಪೂರೈಕೆಯಲ್ಲಿ ಏರಿಳಿತವಾಗಿದ್ದು, ಅಕ್ಕಿ ಬೆಲೆ ಗಗನಮುಖಿ ಆಗುತ್ತಿದೆ. ಇದರೊಂದಿಗೆ ಗೋಧಿ ಬೆಲೆಯೂ ಹೆಚ್ಚಳವಾಗಲಿದೆ!
ಈಗಾಗಲೇ ದೇಶದಲ್ಲಿ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದ್ದು, ಜನ ಸಾಮಾನ್ಯರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಇದರ ಬೆನ್ನಲ್ಲೇ ದೇಶದಲ್ಲಿ ಅಕ್ಕಿ ಹಾಗೂ ಗೋಧಿ ಮತ್ತು ಬೇಳೆಕಾಳುಗಳ ಬೆಲೆಯೂ ಹೆಚ್ಚಳವಾಗುವ ಆತಂಕ ಶುರುವಾಗಿದೆ.
20 ವರ್ಷಗಳಲ್ಲೇ ಅಕ್ಕಿ ಉತ್ಪಾದನೆಯಲ್ಲಿ ಕುಸಿತ !
ಕಳೆದ 20 ವರ್ಷಗಳಲ್ಲೇ ಅಕ್ಕಿ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಅಕ್ಕಿ ಉತ್ಪಾದನೆ ಕುಸಿತ ಕಂಡಿದ್ದು,
ಅಕ್ಕಿ ರಫ್ತನ್ನೇ ಅವಲಂಬಿಸಿರುವ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿವೆ.
ಇದೀಗ ಭಾರತವೂ ಸಹ ಕೆಲವು ನಿರ್ದಿಷ್ಟ ಅಕ್ಕಿ ರಫ್ತು ಮಾಡುವುದನ್ನು ನಿರ್ಬಂಧಿಸಿದ್ದು, ಜನ ಸಂಕಟ ಎದುರಿಸುವಂತಾಗಿದೆ.
ಭಾರತವು ವಿಶ್ವಕ್ಕೆ ಅಕ್ಕಿಯನ್ನು ಭಾರೀ ಪ್ರಮಾಣದಲ್ಲಿ ಅಂದರೆ ಶೇ 40ರಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡುತ್ತದೆ.
ಆದರೆ, ಇದೀಗ ಭಾರತದಲ್ಲೇ ಉತ್ಪಾದನೆ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿರುವುದು
ವಿಶ್ವಕ್ಕೆ ಅಕ್ಕಿ ಪೂರೈಕೆ ಮಾಡುವುದು ಅಂದರೆ ರಫ್ತು ಮಾಡುವ ಪ್ರಮಾಣದಲ್ಲಿ ಇಳಿಕೆ ಆಗಿದೆ.
ಇದಕ್ಕೆ ಎಲ್ ನಿನೊ ಪ್ರಭಾವದಿಂದಾಗಿ ಮಳೆ ಕೊರತೆ ಉಂಟಾಗಿತ್ತು.
Rice Export Ban: ಅಮೆರಿಕಾದಲ್ಲಿ ಅಕ್ಕಿಗೆ ಹಾಹಾಕಾರ ಸೃಷ್ಟಿ: ಭಾರತದಲ್ಲಿನ ಈ ಬೆಳವಣಿಗೆಯೇ ಕಾರಣ!
ಇದಕ್ಕೂ ಮುನ್ನ ಬಂದ ಸಾಂಕ್ರಾಮಿಕ ರೋಗ ಜಗತ್ತನ್ನೇ ಹೈರಾಣಾಗಿಸಿದ್ದಲ್ಲದೇ ಈ ಸಂದರ್ಭದಲ್ಲಿ ಅಕ್ಕಿ ಉತ್ಪಾದನೆಯಲ್ಲಿ ಏರಿಳಿತವಾಗಿದೆ.
ಇದರೊಂದಿಗೆ ಜಗತ್ತು ಸಾಂಕ್ರಾಮಿಕ ರೋಗದ ನೋವಿನಿಂದ ಸುಧಾರಿಸಿಕೊಳ್ಳುವ ಸಂದರ್ಭದಲ್ಲಿಯೇ ರಷ್ಯಾ ಹಾಗೂ ಉಕ್ರೇನ್ ಯುದ್ಧ ಪ್ರಾರಂಭವಾಗಿ,
ವಿಶ್ವದ ಆರ್ಥಿಕತೆಗೆ ಸಾಕಷ್ಟು ಪೆಟ್ಟು ನೀಡಿದೆ. ಅಲ್ಲದೇ ಜಾಗತಿಕ ತಾಪಮಾನದಲ್ಲಿ ಆಗಿರುವ ಹಲವು ಬದಲಾವಣೆಗಳು ಅಕ್ಕಿ ಉತ್ಪಾದನೆಯಲ್ಲಿ ಕುಸಿತವಾಗುವಂತಾಗಿದೆ.
ವಿಶ್ವದಲ್ಲಿ ಅಕ್ಕಿ ಉತ್ಪಾದನೆಯಲ್ಲಿ ಇಳಿಕೆ ಆಗುತ್ತಿರುವುದಕ್ಕೆ ಪರೋಕ್ಷವಾಗಿ ಭಾರವೂ ಕಾರಣವಾಗಿದೆ ಎಂದೇ ಹೇಳಬಹುದು.
ಭಾರತವು ವಿಶ್ವಕ್ಕೆ ಹೆಚ್ಚು ಪ್ರಮಾಣದಲ್ಲಿ ಅಕ್ಕಿಯನ್ನು ಪೂರೈಕೆ ಮಾಡುತ್ತದೆ.
ಚೀನಾದ ನಂತರದಲ್ಲಿ ವಿಶ್ವಕ್ಕೆ ಹೆಚ್ಚು ಅಕ್ಕಿ ಪೂರೈಕೆಯು ಭಾರತದಿಂದಲೇ ಆಗುತ್ತದೆ.
ಆದರೆ, ಈ ಬಾರಿ ಕಳೆದ 20 ವರ್ಷಗಳಲ್ಲೇ ಅಕ್ಕಿಯ ಉತ್ಪಾದನೆಯು ಕುಸಿತ ಕಂಡಿದ್ದು, ಅಕ್ಕಿಗೆ ಹಾಹಾಕಾರ ಸೃಷ್ಟಿಯಾಗುತ್ತಿದೆ.
Rain Today ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದುವರಿದ ಧಾರಾಕಾರ ಮಳೆ!
ಹೀಗಾಗಿ, ಬಾಸುಮತಿ ಮತ್ತು ಕುಚಲಕ್ಕಿಯನ್ನು ಹೊರತುಪಡಿಸಿ ಉಳಿದ ಯಾವುದೇ ಮಾದರಿಯಅಕ್ಕಿಗಳನ್ನು ರಫ್ತು
ಮಾಡದಂತೆ ಕೇಂದ್ರ ಸರ್ಕಾರವು ನಿರ್ಬಂಧ ವಿಧಿಸಿದೆ. ಇದರಿಂದಾಗಿ ಅಕ್ಕಿ ಬೆಲೆ ಹೆಚ್ಚಳವಾಗುತ್ತಿದೆ.
ಭಾರತದಲ್ಲಿ ಅಕ್ಕಿಯ ಬೆಲೆ ಶೇ 14ರಿಂದ 15ರಷ್ಟು ಹೆಚ್ಚಾಗಿದೆ. ಗೋಧಿ ಹಾಗೂ ಸಕ್ಕರೆ ರಫ್ತು ಪ್ರಮಾಣವನ್ನು ಕಡಿಮೆ ಮಾಡಿದ್ದು,
ಮುಂದಿನ ದಿನಗಳಲ್ಲಿ ಇಲ್ಲಿಯೂ ಬೆಲೆ ಹೆಚ್ಚಳವಾಗಲಿದೆ ಎನ್ನಲಾಗಿದೆ.
ಹೋಟೆಲ್ ತಿನಿಸು ಸಹ ಹೆಚ್ಚಳ!
ವಿದ್ಯುತ್ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದರಿಂದ ಹೋಟೆಲ್ ಊಟ ಮತ್ತು ತಿಂಡಿಯ
ಬೆಲೆಯನ್ನು ಹೆಚ್ಚಳ ಮಾಡುವುದಕ್ಕೆ ಹೋಟೆಲ್ ಮಾಲೀಕರ ಸಂಘ ಮುಂದಾಗಿದೆ.
Siddaramaiah ಕರ್ನಾಟಕ ರಫ್ತಿನಲ್ಲಿ ಪ್ರಥಮ ಸ್ಥಾನಕ್ಕೇರಲು ಕ್ರಮ: ಸಿದ್ದರಾಮಯ್ಯ!
ಕೆಲವೇ ದಿನಗಳಲ್ಲಿ ತರಕಾರಿ, ಅಕ್ಕಿ, ಬೇಳೆ, ಗೋಧಿ, ಹಾಲು ಹಾಗೂ ವಿದ್ಯುತ್ ದರ ಸೇರಿದಂತೆ ಹಲವು ವಸ್ತುಗಳ ಬೆಲೆ ಹೆಚ್ಚಳವಾಗಿದೆ.
ಹೀಗಾಗಿ, ಹೋಟೆಲ್ ಊಟ ಮತ್ತು ತಿಂಡಿಗಳ ಬೆಲೆಯನ್ನು ಶೇ 10ರಷ್ಟು ಹೆಚ್ಚಳ ಮಾಡಲು ಹೋಟೆಲ್ ಮಾಲೀಕರ ಸಂಘ ಮುಂದಾಗಿದೆ.
ಹೀಗಾಗಿ, ಆಗಸ್ಟ್ ಒಂದರಿಂದಲೇ ಊಟ 10ರೂ ಹಾಗೂ ತಿಂಡಿಯಲ್ಲಿ 5 ರೂಪಾಯಿ ಹಾಗೂ ಕಾಫಿ ಮತ್ತು
ಟೀ ಬೆಲೆಯಲ್ಲಿ 2ರೂಪಾಯಿಯಿಂದ 3 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ.
Share your comments