1. ಸುದ್ದಿಗಳು

Onion ರಾಜ್ಯದಲ್ಲಿ ಇಳಿಕೆಯಾಗದ ಈರುಳ್ಳಿ ಬೆಲೆ, ಬೆಲೆ ಏರಿಕೆಗೆ ಕಾರಣವೇನು ?

Hitesh
Hitesh
The price of onion in the state has not decreased, what is the reason for the price increase?

ಟೊಮೊಟೊ ಬೆಲೆಯ ನಂತರ ರಾಜ್ಯದಲ್ಲಿ ಇದೀಗ ಈರುಳ್ಳಿ ಬೆಲೆ ಗಗನಮುಖಿಯಾಗುತ್ತಿದೆ.

ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಭಾಗದಲ್ಲಿ ಈರುಳ್ಳಿ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ.

ಬೆಂಗಳೂರಿನಲ್ಲಿ ಈರುಳ್ಳಿ ಬೆಲೆಯು ಬಹುತೇಕ 100 ರೂಪಾಯಿ ಮುಟ್ಟುತ್ತಿದೆ.  

ಬೆಂಗಳೂರಿನ ಎಪಿಎಂಸಿಗಳಿಗೆ ಅವಶ್ಯ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗದ ಇರುವುದರಿಂದಾಗಿ ಚಿಲ್ಲರೆ

ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯು ಪ್ರತಿ ಕೆಜಿಗೆ 100 ರೂಪಾಯಿಗೂ ಹೆಚ್ಚಾಗಿದೆ.

ಇನ್ನು ಒಂದೇ ವಾರದಲ್ಲಿ ದೀಪಾವಳಿ ಹಬ್ಬ ಬರಲಿದ್ದು, ಈ ಸಂದರ್ಭದಲ್ಲಿ ಈರುಳ್ಳಿ

ಬೆಲೆಯು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.    

ರಾಜ್ಯದಲ್ಲಿ ಈ ಬಾರಿ ನೈರುತ್ಯ ಮುಂಗಾರಿನಲ್ಲಿ ಉತ್ತಮ ಮಳೆಯಾಗಿಲ್ಲ.

ಮಳೆ ಕೊರತೆಯಾಗಿರುವುದರಿಂದಾಗಿ ರೈತರು ಈರುಳ್ಳಿ ಬೆಳೆದಿಲ್ಲ ಅಲ್ಲದೇ ಮಾರುಕಟ್ಟೆಗೆ ಈರುಳ್ಳಿ ಪೂರೈಕೆಯಾಗುತ್ತಿಲ್ಲ.

ಹೀಗಾಗಿ, ಈರುಳ್ಳಿ ಬೆಲೆ ಶತಕದ ಸಮೀಪದಲ್ಲಿದೆ.  

ಕರ್ನಾಟಕದಲ್ಲಿ 2023ರ ಸಾಲಿನಲ್ಲಿ ಆಗಸ್ಟ್‌ನಿಂದ ಸಪ್ಟೆಂಬರ್‌ ತಿಂಗಳ ಅಂತರದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದೆ.

ಈ ಎಲ್ಲ ಕಾರಣಗಳಿಂದ ಈರುಳ್ಳಿ ಬೆಲೆ ಇಳಿಕೆಯಾಗುತ್ತಿಲ್ಲ.

ಸಾಮಾನ್ಯವಾಗಿ ಈರುಳ್ಳಿ ಬೆಲೆ 35 ರೂಪಾಯಿಗಳಿಂದ 45 ರೂಪಾಯಿಗಳ ಒಳಗೆ ಇರುತ್ತಿತ್ತು.

ಆದರೆ, ಇದೀಗ ಮಾರುಕಟ್ಟೆಯಲ್ಲಿ ಈರುಳ್ಳಿ ಇಳಿಕೆಯಾಗಿದ್ದು, ಬೆಲೆ ಹೆಚ್ಚಳವಾಗಿದೆ.

ಮಳೆ ಇಲ್ಲದೆ ಇಳುವರಿ ಹೊಡೆತ!

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಈರುಳ್ಳಿ ಕಡಿಮೆ ಪ್ರಮಾಣದಲ್ಲಿಯೇ ಬೆಳೆಯಲಾಗಿದೆ.

ಅಷ್ಟೇ ಅಲ್ಲ ಮಳೆ ಪ್ರಮಾಣ ಇಳಿಕೆಯಿಂದಾಗಿ ಇಳುವರಿಯ ಮೇಲೆಯೂ ಪ್ರಭಾವ ಬೀರಿದೆ.  

ಬೇಡಿಕೆ ಹೆಚ್ಚಳ, ಪೂರೈಕೆ ಕೊರತೆ

ರಾಜ್ಯದಲ್ಲಿ ಈ ಬಾರಿ ಈರುಳ್ಳಿ ಬೆಲೆ ಹೆಚ್ಚಳವಾಗಿರುವುದಕ್ಕೆ ಮುಖ್ಯವಾಗಿ ಬೇಡಿಕೆಗೆ ಅವಶ್ಯವಿರುವಷ್ಟು ಈರುಳ್ಳಿ ಪೂರೈಕೆ ಆಗುತ್ತಲ್ಲೇ ಇಲ್ಲ.

ರಾಜ್ಯದ ಹೋಟೆಲ್‌, ಬೇಕರಿ ಹಾಗೂ ಗ್ರಾಹಕರಿಂದ ಈರುಳ್ಳಿ ಪೂರೈಕೆಗೆ ಬೇಡಿಕೆ ಹೆಚ್ಚಳವಾಗುತ್ತಿದೆ.

ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿಲ್ಲ.

ಬೆಲೆ ಹೆಚ್ಚಳಕ್ಕೆ ಮುಖ್ಯ ಕಾರಣವೇನು ?

ದಿಢೀರ್‌ ಈರುಳ್ಳಿ ಬೆಲೆ ಏರಿಕೆಗೆ ಹಲವು ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ. ಈರುಳ್ಳಿ ಬೆಲೆ ಏರಿಕೆಗೆ ಮುಖ್ಯವಾಗಿ

ಈ ಬಾರಿ ಮಳೆ ಕೊರತೆಯಾಗಿರುವುದು ಹಾಗೂ ಬೇಡಿಕೆ ಹೆಚ್ಚಾಗಿದ್ದು, ಇಳುವರಿ ಕಡಿಮೆ ಆಗಿರುವುದು

ಸೇರಿದಂತೆ ಹೊರ ದೇಶದಿಂದ ಈರುಳ್ಳಿಗೆ ಹೆಚ್ಚು ಬೇಡಿಕೆ ಬರುತ್ತಿರುವುದೂ ಕಾರಣ ಎಂದು ವಿಶ್ಲೇಷಿಸಲಾಗಿದೆ.  

ಹೌದು ಬಾಂಗ್ಲಾದೇಶದಿಂದ ಈರುಳ್ಳಿಗೆ ಹೆಚ್ಚು ಬೇಡಿಕೆ ಹೆಚ್ಚಾಗುತ್ತಿದೆ. ಅಲ್ಲದೇ ನೆರೆಯ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಈರುಳ್ಳಿ

ಹೊಸ ಬೆಳೆಯು ಒಂದು ತಿಂಗಳು ವಿಳಂಬವಾಗಿದೆ ಎನ್ನಲಾಗಿದೆ. ಅಲ್ಲದೇ ಈಗಾಗಲೇ ಗೋದಾಮುಗಳಲ್ಲಿ

ಸಂಗ್ರಹವಾಗಿದ್ದ ಈರುಳ್ಳಿಯು ಖಾಲಿಯಾಗುತ್ತಿದ್ದು, ಈರುಳ್ಳಿ ಬೆಲೆ ಹೆಚ್ಚಳವಾಗುತ್ತಿದೆ.   

Published On: 02 November 2023, 05:12 PM English Summary: The price of onion in the state has not decreased, what is the reason for the price increase?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.