1. ಸುದ್ದಿಗಳು

Fix Deposit ಮೇಲಿನ ಬಡ್ಡಿ ದರ ಹೆಚ್ಚಿಸಿದ ಬ್ಯಾಂಕ್‌ಗಳು.. ಹೊಸ ದರಗಳು ಹೇಗಿರಲಿವೆ ಗೊತ್ತೆ?

Kalmesh T
Kalmesh T
The major banks that have increased interest rates on Fix Deposit

ಆರ್‌ಬಿಐ ರೆಪೋ ದರ ಹೆಚ್ಚಿಸಿದ ಬಳಿಕ ವಿವಿಧ ಬ್ಯಾಂಕ್ಗಳು ಕೂಡ ತಮ್ಮ ಬಡ್ಡಿದರ ಹೆಚ್ಚಿಸುವ ಪ್ರಕ್ರಿಯೆಯನ್ನು ಆರಂಭಿಸಿವೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ಇದನ್ನೂ ಓದಿರಿ: 7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್; ಶೇ.14% ರಷ್ಟು ತುಟ್ಟಿಭತ್ಯೆ ಹೆಚ್ಚಳ..!

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರ ಹೆಚ್ಚಿಸಿದ ಬಳಿಕ ವಿವಿಧ ಬ್ಯಾಂಕ್ ಗಳು ಬಡ್ಡಿದರ ಹೆಚ್ಚಿಸುವ ಪ್ರಕ್ರಿಯೆ ಆರಂಭಿಸಿವೆ. ಇದೀಗ ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್ ಕೂಡ ಬಡ್ಡಿ ದರದಲ್ಲಿ ಏರಿಕೆ ಘೋಷಿಸಿದೆ. ಕರ್ಣಾಟಕ ಬ್ಯಾಂಕ್ ಬಡ್ಡಿ ದರವನ್ನು ಎಷ್ಟು ಹೆಚ್ಚಿಸಿದೆ ಎಂಬ ವಿವಿರ ಇಲ್ಲಿದೆ.

ಇದೀಗ ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್ ಕೂಡ ನಿಶ್ಚಿತ ಠೇವಣಿ (ಎಫ್‌ಡಿ)ಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಈ ನಿರ್ಧಾರ ಇಂದಿನಿಂದ ಜಾರಿಗೆ ಬಂದಿದೆ. ಇದಕ್ಕೂ ಮುನ್ನ ಹಲವು ಬ್ಯಾಂಕ್‌ಗಳು ಠೇವಣಿ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವುದಾಗಿ ಘೋಷಿಸಿವೆ

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

Atal Pension Yojana: 4 ಕೋಟಿಗೂ ಹೆಚ್ಚು ಜನರಿಗೆ ಲಾಭವಾದ ಈ ಯೋಜನೆಯ ಲಾಭ ನೀವು ಪಡೆದಿದ್ದೀರಾ?

ಶೇ.0.15ರಷ್ಟು ಬಡ್ಡಿ ದರ ಏರಿಕೆ

ಕರ್ಣಾಟಕ ಬ್ಯಾಂಕ್ ದೇಶೀಯ ಮತ್ತು ಅನಿವಾಸಿ ಭಾರತೀಯರು ತಮ್ಮ ಖಾತೆಗಳಲ್ಲಿ ಇಟ್ಟಿರುವ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.0.15 ರಷ್ಟು ಹೆಚ್ಚಿಸಿದ್ದು, ವಾರ್ಷಿಕ ಶೇ.5.25ಕ್ಕೆ ಏರಿಕೆಯಾಗಿದೆ.

ಬ್ಯಾಂಕ್ ಪ್ರಕಾರ, ಈಗ ಅದರ ದೇಶೀಯ ಮತ್ತು NRE (ದೇಶದ ಹೊರಗೆ ವಾಸಿಸುವ ನಾಗರಿಕರು) ಗಳ ನಿಶ್ಚಿತ ಠೇವಣಿಗಳಿಗೆ ವಾರ್ಷಿಕ ಶೇ.5.25ರಷ್ಟು ಬಡ್ಡಿ ನೀಡಲಾಗುತ್ತದೆ. ಇದು 10 ಕೋಟಿ ರೂ. ವರೆಗಿನ ಠೇವಣಿಗಳಿಗೆ ವಾರ್ಷಿಕ ಶೇ.5.10ರ ಬಡ್ಡಿದರ ನೀಡಲಾಗುತ್ತದೆ.

ಹೊಸ ದರಗಳು 2022ರ ಮೇ 21ರಿಂದಲೇ ಜಾರಿಗೆ ಬಂದಿವೆ. ಮಾರುಕಟ್ಟೆಯ ಪ್ರವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಬಡ್ಡಿದರದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಕರ್ಣಾಟಕ ಬ್ಯಾಂಕ್‌ ಎಂಡಿ ಮತ್ತು ಸಿಇಒ ಎಂಎಸ್ ಮಹಾಬಲೇಶ್ವರ್ ಹೇಳಿದ್ದಾರೆ.

Bank Of India ದಲ್ಲೂ ಬದಲಾವಣೆಗೊಂಡ ಬಡ್ಡಿದರ

ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಇಂಡಿಯಾ (BOI) ಇತ್ತೀಚೆಗೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಬದಲಾಯಿಸಿದೆ. ಈ ಸಂಚಿಕೆಯಲ್ಲಿ, ಖಾಸಗಿ ವಲಯದ ಬ್ಯಾಂಕ್ ಡಿಸಿಬಿ ವಿವಿಧ ಅವಧಿಗಳ ಸ್ಥಿರ ಠೇವಣಿಗಳ (ಎಫ್‌ಡಿ) ಮೇಲಿನ ಬಡ್ಡಿದರಗಳಲ್ಲಿ ಪರಿಷ್ಕರಣೆ ಮತ್ತು ಹೆಚ್ಚಳವನ್ನು ಪ್ರಕಟಿಸಿದೆ.

ಡಿಸಿಬಿ ಬ್ಯಾಂಕ್ ತನ್ನ ಗ್ರಾಹಕರಿಗೆ ಸ್ಥಿರ ಠೇವಣಿಗಳ ಮೇಲೆ ವಾರ್ಷಿಕ ಶೇ. 6.75 ರವರೆಗೆ ಬಡ್ಡಿದರ ನೀಡಲು ನಿರ್ಧರಿಸಿದೆ. ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತ ಮತ್ತು ಕಡಿಮೆ ಅಪಾಯವೆಂದು ಪರಿಗಣಿಸಲಾಗಿದೆ.

ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಕಾಲೇಜು ಪ್ರವೇಶಕ್ಕೆ 25,000 ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ₹8 ಲಕ್ಷ ನೀಡಲಿದೆ ಸರ್ಕಾರ!

ಸಿಹಿಸುದ್ದಿ: ರೈತರ ಖಾತೆಗೆ ಬರಲಿದೆ Pm Kisan 11 ನೇ ಕಂತಿನ ಹಣ! ಈ ದಾಖಲೆಗಳನ್ನು ಇನ್ನೊಮ್ಮೆ ಪರಿಶೀಲಿಸುವುದು ಉತ್ತಮ..

ಈ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಗೆ ಹೆಚ್ಚಿನ ಬಡ್ಡಿ

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (SFB) ತನ್ನ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವನ್ನು ಸಹ ಪರಿಷ್ಕರಿಸಿದೆ. ಈಗ ಈ ಬ್ಯಾಂಕ್‌ನ ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿನ ಎಫ್‌ಡಿಗಳಿಗೆ ಗರಿಷ್ಠ ಶೇ.7ರ ಬಡ್ಡಿಯನ್ನು ಪಡೆಯುತ್ತಾರೆ.

ಇದರ ಹೊರತಾಗಿ, ಬ್ಯಾಂಕ್ 1 ಲಕ್ಷದವರೆಗಿನ ಉಳಿತಾಯ ಖಾತೆಗಳಿಗೆ ಶೇ. 3.5 ಬಡ್ಡಿಯನ್ನು ಮುಂದುವರಿಸಿದೆ. 1-5 ಲಕ್ಷದವರೆಗಿನ ಉಳಿತಾಯಕ್ಕೆ ಶೇ.6ರಷ್ಟು ಬಡ್ಡಿ ನೀಡುತ್ತದೆ. ಅದೇ ಸಮಯದಲ್ಲಿ, ₹5 ಲಕ್ಷದಿಂದ ₹1 ಕೋಟಿಯಷ್ಟು ಉಳಿತಾಯ ಹೊಂದಿರುವ ಗ್ರಾಹಕರಿಗೆ ಗರಿಷ್ಠ ಶೇ. 7ರಷ್ಟು ಬಡ್ಡಿ ನೀಡಲಾಗುತ್ತದೆ.

PMUY: Good News ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ದೊರೆಯಲಿದೆ ಉಚಿತ ಗ್ಯಾಸ್ ಸಿಲೆಂಡರ್..!

 Subsidy: ಎರೆಹುಳು ತೊಟ್ಟಿ ನಿರ್ಮಾಣಕ್ಕೆ ರೈತರಿಗೆ ಸಿಗಲಿದೆ ₹27000 ಸಹಾಯಧನ..!

Published On: 23 May 2022, 10:02 AM English Summary: The major banks that have increased interest rates on Fix Deposit

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.