1. ಸುದ್ದಿಗಳು

ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮ ಸಡಲಿ-ಜುಲೈ 31ರವರೆಗೆ ಖಾತೆ ತೆರೆಯಲು ಅವಕಾಶ

ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಅರ್ಹತಾ ಮಾನದಂಡಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಕೊರೋನಾ ವೈರಸ್‌ ಲಾಕ್‌ಡೌನ್‌ ಕಾರಣದಿಂದಾಗಿ ಸುಕನ್ಯಾ ಸಮೃದ್ಧಿ ಯೋಜನೆ   ಖಾತೆ ತೆರೆಯದ ಪಾಲಕರಿಗೆ ಕೇಂದ್ರ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮಾವಳಿಗಳನ್ನು ಸಡಿಲಗೊಳಿಸಿ ಜುಲೈ 31ರವರೆಗೆ ಅವಕಾಶ ಮಾಡಿಕೊಟ್ಟಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಹೆಣ್ಣು ಮಗುವಿಗೆ 10 ವರ್ಷ ತುಂಬಿದ್ದರೂ ಕೂಡ ಆ ಮಗುವಿಗೆ ಸುಕನ್ಯಾ ಸಮೃದ್ಧಿ ಯಾಜನೆಯಡಿ ಖಾತೆ ತೆರೆಯಬಹುದು. ಆದರೆ, ಈ ಮಗುವಿಗೆ ಲಾಕ್‌ಡೌನ್‌ ಅವಧಿಯಲ್ಲಿ 10 ವರ್ಷ ಮೀರಿದ್ದರೆ ಮಾತ್ರವೇ ಈ ಸಡಿಲಿಕೆ ಅನ್ವಯವಾಗುತ್ತದೆ. ಇಂತಹ ಮಗುವಿನ ಪಾಲಕರು ಜುಲೈ 31ರೊಳಗೆ ಖಾತೆ ತೆರೆಯಬಹುದು. ಉಳಿದಂತೆ ಹೆಣ್ಣುಮಗುವಿಗೆ 10 ವರ್ಷ ತುಂಬುವ ಮೊದಲು ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ತೆರೆಯಬಹುದು.

ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ:

ಕೇಂದ್ರ ಸರಕಾರದ 'ಬೇಟಿ ಬಚಾವೊ ಬೇಟಿ ಪಡಾವೊ' ಅಭಿಯಾನದ ಅಂಗವಾಗಿ  2015 ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಪ್ರಾರಂಭಿಸಿತು., ಇದು ಹೆಣ್ಣು ಮಗುವಿಗಾಗಿ ಪಾಲಕರು  ಒಂದು ಸಣ್ಣ ಉಳಿತಾಯ ಮಾಡುವ ಠೇವಣಿ ಯೋಜನೆಯಾಗಿದೆ.  ಈ ಯೋಜನೆಯಡಿ ಹೂಡಿಕೆ ಮಾಡುವ ಹಣಕ್ಕೆ ತೆರಿಗೆ ವಿನಾಯಿತಿ ಇರುವ ಕಾರಣದಿಂದ ಇದು ಹೆಚ್ಚು ಜನಪ್ರಿಯವಾಗಿದೆ. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ಸಂದರ್ಭದಲ್ಲಿ ಪಾಲಕರನ್ನು ಪ್ರೋತ್ಸಾಹಿಸುವುದು ಈ ಉಳಿತಾಯ ಖಾತೆಯ ಪ್ರಮುಖ ಉದ್ದೇಶವಾಗಿದೆ. ಸುಕನ್ಯಾ ಸಮೃದ್ಧಿ ಖಾತೆಯನ್ನು ಯಾವುದೇ ಬ್ಯಾಂಕು ಅಥವಾ ಅಂಚೆ ಕಚೇರಿಗಳಲ್ಲಿ ತೆರೆಯಬಹುದಾಗಿದೆ.

ಅರ್ಹತೆಗಳು:
ಹೆಣ್ಣು ಮಕ್ಕಳೀಗೆ ಮಾತ್ರವೇ ಸುಕನ್ಯಾ ಸಮೃದ್ಧಿ ಖಾತೆ ಹೊಂದಲು ಅರ್ಹರಾಗಿರುತ್ತಾರೆ. ಖಾತೆ ತೆರೆಯುವ ಸಮಯದಲ್ಲಿ, ಹೆಣ್ಣು ಮಗುವಿಗೆ 10 ವರ್ಷಕ್ಕಿಂತ ಕಡಿಮೆ ಇರಬೇಕು. ಎಸ್‌ಎಸ್‌ವೈ ಖಾತೆ ತೆರೆಯುವಾಗ, ಹೆಣ್ಣು ಮಗುವಿನ ವಯಸ್ಸಿನ ಪುರಾವೆ (ಜನನ ಪ್ರಮಾಣಪತ್ರ) ಕಡ್ಡಾಯವಾಗಿರಬೇಕು. * ಆಧಾರ್ ಕಾರ್ಡ್ ಹೊಂದಿದ್ದರೆ ಒಳಿತು. ಗುರುತಿನ ಚೀಟಿ ಮತ್ತು ವಿಳಾಸ ದೃಢೀಕರಣ ದಾಖಲಾತಿ ಇರಬೇಕು. ಹೆಣ್ಣು ಮಗುವಿನ ಪಾಲಕರ ಫೋಟೋ ಅಗತ್ಯ

ಎರಡು ಖಾತೆ ಮಾತ್ರ ತೆಗೆಯಬಹುದು:

 ಸುಂಕನ್ಯ ಸಮೃದ್ಧಿ ಯೋಜನೆಯಡಿ ಪಾಲಕರು ಗರಿಷ್ಠ ಎರಡು ಖಾತೆಗಳನ್ನು ತೆರೆಯಬಹುದು. ಅಂದರೆ, ಪ್ರತಿ ಒಬ್ಬ ಮಗಳಿಗೆ ಒಂದು ಖಾತೆಯಂತೆ ಗರಿಷ್ಠ ಇಬ್ಬರು ಪುತ್ರಿಯರಿಗೆ ಖಾತೆ ತೆರೆಯಬಹುದು. ಒಂದು ವೇಳೆ ಮೊದಲ ಅಥವಾ ಎರಡನೆಯ ಹೆರಿಗೆಯಿಂದ ಅವಳಿ ಹೆಣ್ಣುಮಕ್ಕಳು ಜನಿಸಿದರೆ, ಈ ಯೋಜನೆಯು ಪೋಷಕರಿಗೆ ಮೂರನೇ ಖಾತೆ ತೆರೆಯಲು ಅನುವು ಮಾಡಿಕೊಡುಲಾಗುತ್ತದೆ.

 ಡಿಪಾಸಿಟ್ ಮಾಡಿದ ಹಣ ಯಾವಾಗ ಪಡೆಯಬೇಕು :

* ಕನಿಷ್ಠ ಡಿಪಾಸಿಟ್ ರೂ. 1೦೦೦ ಮತ್ತು ಗರಿಷ್ಠ 1 .5 ಲಕ್ಷ

* ಬಡ್ಡಿ ದರ ಶೇ. 8.1

* ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಸಲ್ಪ ಪ್ರಮಾಣದ ಹಣ ವಿತ್ ಡ್ರಾ ಮಾಡಬಹುದು.

* 21 ವರ್ಷ ಪೂರೈಸಿದ ನಂತರ ಸಂಪೂರ್ಣ ಹಣ ಡ್ರಾ ಮಾಡಲು ಅವಕಾಶ

* ಸೆಕ್ಷನ್ 80 ಸಿ ಅನ್ವಯ ತರಿಗೆ ವಿನಾಯಿತಿ

* ಸಾಲ ಸೌಲಭ್ಯ ಇರುವುದಿಲ್ಲ

ಖಾತೆ ವರ್ಗಾವಣೆ:

ಮೂಲ ವಾಸ್ತವ್ಯ ವಿಳಾಸದೊಂದಿಗೆ ಖಾತೆಯನ್ನು ಅಂಚೆ ಕಚೇರಿಯಿಂದ ಬ್ಯಾಂಕಿಗೆ ಅಥವಾ ಬ್ಯಾಂಕಿನಿಂದ ಅಂಚೆ ಕಚೇರಿಗೆ ವರ್ಗಾಯಿಸಲು ಅವಕಾಶವಿರುತ್ತದೆ. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಹಣಕಾಸು ವರ್ಷದಲ್ಲಿ ಎಷ್ಟು ಸಾರಿ ಬೇಕಾದರೂ ಡಿಪಾಸಿಟ್ ಮಾಡಬಹುದು.. ಖಾತೆ ತೆಗೆದು ಒಂದು ವರ್ಷ ಡಿಪಾಸಿಟ್ ಕಟ್ಟಲು ವಿಫಲರಾದರೆ 50 ರೂ. ದಂಡ ತುಂಬಬೇಕಾಗುತ್ತದೆ.

Published On: 06 July 2020, 06:54 PM English Summary: Sukanya Samriddhi Yojana: Centre provides new relaxations

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.