1. ಸುದ್ದಿಗಳು

ಕಬ್ಬು ಬೆಳೆಗಾರರ ಪ್ರತಿಭಟನೆ 16ನೇ ದಿನಕ್ಕೆ: ರೈತರ ಎಚ್ಚರಿಕೆ ಏನು ?

Hitesh
Hitesh
Sugarcane growers' protest for 16th day: What is the farmers' warning?

ರಾಜ್ಯದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ಬರೋಬ್ಬರಿ 16ನೇ ದಿನಕ್ಕೆ ಕಾಲಿರಿಸಿದೆ.

ಗ್ರಾಮ ಪಂಚಾಯ್ತಿ “ರೆಸಾರ್ಟ್‌” ರಾಜಕೀಯ: ವಿಮಾನದಲ್ಲಿ ಬಂದು ವೋಟ್‌ ಮಾಡಿದ್ರು!

ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಹಾಗೂ ಕಬ್ಬಿನ ಉಪ ಉತ್ಪನ್ನಗಳಿಗೆ ದರ ನಿಗದಿ ಮಾಡಬೇಕು ಎನ್ನುವುದು

ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರು ರೈತಪರ ಸಂಘಟನೆಗಳ

ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್ಯ ಕಬ್ಬು ಬೆಳೆಗಾರ ಸಂಘದ 16ನೇ ದಿನದ ಹೋರಾಟ ಸರಳವಾಗಿ ಸರ್ಕಾರಕ್ಕೆ ತಿಳಿಸುವುದು ನಮ್ಮ ಉದ್ದೇಶವಾಗಿದೆ

ಎಂದು ಕುರುಬೂರು ಶಾಂತಕುಮಾರ್‌ ಅವರು ತಿಳಿಸಿದ್ದಾರೆ. 

ತಮಿಳುನಾಡಿನಲ್ಲಿ ಭಾರೀ ಮಳೆ ಸಾಧ್ಯತೆ: ಹೈಅಲರ್ಟ್‌ ಘೋಷಣೆ! 

ಕೇಂದ್ರ ಸರ್ಕಾರ ನಿಗದಿ ಮಾಡಿರುವ ಪ್ರಸಕ್ತ ಸಾಲಿನ ಎಫ್‌ಆರ್ಪಿ ದರ ಟನ್‌ಗೆ 3050ರಂತೆ ಕಳೆದ ವರ್ಷಕ್ಕಿಂತ 150 ರೂಪಾಯಿ ಏರಿಕೆಯಾಗಿರುವ

ಹಣ ಎಲ್ಲ ಕಾರ್ಖಾನೆಗಳಿಂದ ಹೆಚ್ಚುವರಿಗಾಗಿ ಕಬ್ಬು ಬೆಳೆಗಾರರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.   

ಮೈಸೂರು ಜಿಲ್ಲೆಯ ಬಣ್ಣಾರಿ ಸಕ್ಕರೆ ಕಾರ್ಖಾನೆ ಕಳೆದ ವರ್ಷ ಟನ್‌ಗೆ 2824 ನೀಡುತ್ತಿತ್ತು, ಈ ವರ್ಷ ಕೇಂದ್ರ ಸರ್ಕಾರ ಹೆಚ್ಚುವರಿ

ಎಫ್‌ಆರ್‌ಪಿ ನಿಗದಿ ಮಾಡಿರುವ0 150ರೂಪಾಯಿ  ಸೇರಿಸಿ, 2974ರೂ ರೈತರಿಗೆ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಳಿಯಾಳದಲ್ಲಿ ಇಐಡಿ ಪ್ಯಾರಿ ಕಾರ್ಖಾನೆ ಕಳೆದ ವರ್ಷ 2590 ನೀಡುತ್ತಿತ್ತು. ಈ ವರ್ಷ ಎಫ್‌ಆರ್‌ಪಿ ಹೆಚ್ಚುವರಿ 150 ಸೇರಿದರೆ 2740ರೂ ರೈತರಿಗೆ

ಕೊಡಿಸಲಿ ಇದೇ ನಮ್ಮ ಒತ್ತಾಯ. ಆದರೆ, ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷಕ್ಕಿಂತ ಕಡಿಮೆ ಹಣ ಕೊಡುತ್ತಿದ್ದಾರೆ ಯಾಕೆ ಎಂದು ತಿಳಿಸಬೇಕು ಎಂದು ಆಗ್ರಹಿಸಿದರು.

Sugarcane growers' protest for 16th day: What is the farmers' warning?

ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚವನ್ನು ಕಳೆದ ವರ್ಷಕ್ಕಿಂತ ಹೆಚ್ಚುವರಿಯಾಗಿ ಪ್ರತಿ ಟನ್‌ಗೆ 200 ರಿಂದ 300 ರೈತರ 

ಹಣದಲ್ಲಿ ಮುರಿದು ಕೊಳ್ಳುತ್ತಿದ್ದಾರೆ. ಇದನ್ನು ಕಡಿಮೆ ಮಾಡಲು ಕ್ರಮಕೈಗೊಂಡು ಬಾಕಿ ಸರ್ಕಾರ ನಿಗದಿಪಡಿಸಿರುವ ಹಣ

ರೈತರಿಗೆ ಕೂಡಿಸಲಿ, ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.  

ಕೇಂದ್ರ ಸರ್ಕಾರ ನಿಗದಿ ಮಾಡುವ ಎಫ್ ಆರ್ ಪಿ ದರ ಪ್ರತಿ ಶೇಕಡ ಒಂದು ಇಳುವರಿಗೆ 300ರೂ, ಕಬ್ಬಿನಿಂದ ಬರುವ ಸಕ್ಕರೆ

ಇಳುವರಿಯನ್ನ ಸಕ್ಕರೆ ಕಾರ್ಖಾನೆ ಮಾಲೀಕರೇ ವರದಿ ಕೊಡುವ ಕಾರಣ  ಸಕ್ಕರೆ ಇಳುವರಿ ಕಡಿಮೆ ತೋರಿಸಿ ರೈತರಿಗೆ ವಂಚಿಸಲಾಗುತ್ತಿದೆ.

ಇದು ರೈತರಿಗೆ ನಷ್ಟವನ್ನುಂಟು ಮಾಡುತ್ತಿದೆ ಇದನ್ನು ತಪ್ಪಿಸಬೇಕು. ಸಕ್ಕರೆ ಕಾರ್ಖಾನೆಗಳು ಮಾರಾಟ ಮಾಡುವ ಸಕ್ಕರೆ ತೂಕ

ಮಾಡಲು ಒಂದು ತೂಕದ ಯಂತ್ರ, ರೈತರ ಕಬ್ಬು ತೂಕ ಮಾಡಲು ಮತ್ತೊಂದು ತೂಕ ಯಂತ್ರ ಯಾಕೆ ಇಟ್ಟುಕೊಂಡಿದ್ದಾರೆ,

ಸರ್ಕಾರ ಈ ಬಗೆ ಗಂಭೀರವಾಗಿ ಚಿಂತಿಸಬೇಕು. ಇದು ಮೋಸದ ಜಾಲ ಎಂದರು.  

Sugarcane growers' protest for 16th day: What is the farmers' warning?

ಕಬ್ಬಿನಿಂದ ಬರುವ ಇತರೆ ಉತ್ಪನ್ನಗಳ ಲಾಭಾಂಶ ಕೆಲವೇ ಕಾರ್ಖಾನೆಗಳು ರೈತರಿಗೆ ಹಂಚಿಕೆ ಮಾಡುತ್ತಿವೆ, ಎಫ್‌ಆರ್ಪಿಗಿಂತ ಹೆಚ್ಚುವರಿ ಹಣ ನೀಡುತ್ತಿದ್ದಾರೆ,

ಬೇರೆ ಕಾರ್ಖಾನೆಗಳಿಗೆ ಯಾಕೆ ಸಾಧ್ಯವಿಲ್ಲ. ಎಥನಾಲ್ ಲಾಭಾಂಶದಲ್ಲಿ ಹೆಚ್ಚುವರಿ 50 ಕೊಡುತ್ತೇವೆ ಎಂದರೆ ರೈತರಿಗೆ ಕೊಡುವುದು ಭಿಕ್ಷೆಯಲ್ಲ,

ಸರಿಯಾದ ಮಾರ್ಗದಲ್ಲಿ ಕ್ರಮ ಕೈಗೊಂಡು ನ್ಯಾಯ ಕೊಡಲಿ, ಕಬ್ಬಿನಿಂದ ಬರುವ ಸಕ್ಕರೆ ಇಳುವರಿಯನ್ನ  ಹಿಂದಿನ ವರ್ಷದ ಇಳುವರಿ ಆಧರಿಸಿ

ಪ್ರಸಕ್ತ ಸಾಲಿನ ಕಬ್ಬು ಸರಬರಾಜು ಮಾಡಿದ ರೈತರಿಗೆ ಎಫ್ ಆರ್‌ಪಿ ದರ ಲೆಕ್ಕಾಚಾರ ಮಾಡಿ ಪಾವತಿಸುವುದು ನ್ಯಾಯವೇ,

ಆಯಾ ವರ್ಷ ಕಬ್ಬು ಸರಬರಾಜು ಮಾಡಿದ ರೈತರಿಗೆ ಆಯಾ ರೈತರಿಂದ ಬರುವ ಸಕ್ಕರೆ ಇಳುವರಿ ಆದಾರದಂತೆ ದರ ನೀಡುವುದು ಎಲ್ಲರಿಗೂ ಒಳ್ಳೆಯದಲ್ಲವೆ ಈ ಬಗ್ಗೆ ಸರ್ಕಾರ ಯಾಕೆ ಚಿಂತಿಸುತ್ತಿಲ್ಲ ಎಂದರು.

ವೈಜ್ಞಾನಿಕ ಪದ್ಧತಿಯಲ್ಲಿ ನೀರು ಕಡಿಮೆ ಮಾಡಿ, ಒಂಟಿ ಕಣ್ಣು ನಾಟಿ ಪದ್ಧತಿಯಲ್ಲಿ ಕಬ್ಬು ಬೆಳೆಯುವ ರೈತರಿಗೆ ಸರ್ಕಾರದ ಎನ್ಆರ್‌ಜಿ ಯೋಜನೆ

ಸಹಾಯಧನ ಸವಲತ್ತು ಲಿಂಕ್ ಮಾಡಿದರೆ ರೈತರಿಗೆ ಉತ್ಪಾದನಾ ವೆಚ್ಚ ಕಡಿಮೆಯಾಗುವುದಿಲ್ಲವೆ ಎಂದು ಪ್ರಶ್ನಿಸಿದರು.  

ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಗಂಭೀರ ಕ್ರಮಗಳನ್ನು ಕೈಗೊಳ್ಳಲಿ, ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಒತ್ತಾಯವಾಗಿದೆ

ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದ್ದಾರೆ. 

Published On: 07 December 2022, 03:30 PM English Summary: Sugarcane growers' protest for 16th day: What is the farmers' warning?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.