1. ಸುದ್ದಿಗಳು

PM Modi ಸಮುದ್ರ ಆಹಾರ ಮಾರುಕಟ್ಟೆ ಹೆಚ್ಚಳಕ್ಕೆ ಕ್ರಮ: ಪ್ರಧಾನಿ ಮೋದಿ

Hitesh
Hitesh
ಪ್ರಧಾನಿ ನರೇಂದ್ರ ಮೋದಿ ಮಾತು

ರೈತರಿಗೆ ದಿನದ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್‌ ಪರಿಚಯಿಸಿದೆ.

ಇಂದಿನ ಪ್ರಮುಖ ಸುದ್ದಿಗಳನ್ನು ನೋಡುವುದಾದರೆ…..

ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಎರಡು ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಶಕ್ತಿ ಯೋಜನೆಯ ಟಿಕೇಟ್‌ ಒಟ್ಟು ಮೌಲ್ಯ 3 ಸಾವಿರ ಕೋಟಿ ತಲುಪಿದೆ.

ಉಜ್ವಲ ಯೋಜನೆಯ ಫಲಾನುಭವಿಗೆ ಪಿ.ಎಂ ಪತ್ರ ಬರೆದಿದ್ದಾರೆ ಈ ಎಲ್ಲ ಸುದ್ದಿಗಳ ವಿವರ ನೋಡೋಣ ಮೊದಲಿಗೆ ಮುಖ್ಯಾಂಶಗಳು.  

1. ಸಮುದ್ರ ಆಹಾರ ಮಾರುಕಟ್ಟೆ ಹೆಚ್ಚಳಕ್ಕೆ ಕ್ರಮ: ಪ್ರಧಾನಿ ಮೋದಿ
2. ಶಕ್ತಿ ಯೋಜನೆಯ ಟಿಕೇಟ್‌ ಬೆಲೆ 3000 ಸಾವಿರ ಕೋಟಿ ರೂ.
3. ಉಜ್ವಲ ಯೋಜನೆಯ ಫಲಾನುಭವಿಗೆ ಪತ್ರ ಬರೆದ ಮೋದಿ
4. ಉತ್ತರ ಭಾರತದಲ್ಲಿ ಶೀತ ವಾತಾವರಣ
5. ಬೆಂಗಳೂರಿನಲ್ಲಿ ಇಂದು ಆಲೂಗಡ್ಡೆ ಕ್ಷೇತ್ರೋತ್ಸವ
6. ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎರಡು ದಿನ ಮಳೆ: ಐಎಂಡಿ ವರದಿ 

ಈ ಎಲ್ಲ ಸುದ್ದಿಗಳ ವಿವರ ಹಾಗೂ ಚುಟುಕು ಮಾಹಿತಿ ಈ ಮುಂದಿನಂತಿದೆ.   

ಸಮುದ್ರ ಆಹಾರ ಮಾರುಕಟ್ಟೆಯನ್ನು ಹೆಚ್ಚಿಸಲು ಸರ್ಕಾರ ಶ್ರಮಿಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಇನ್ನು ಜಾಗತಿಕ ಸಮುದ್ರ ಆಹಾರ ಮಾರುಕಟ್ಟೆಯಲ್ಲಿ ಪ್ರಬಾವವನ್ನು ಹೆಚ್ಚಿಸಲು ಮುಂದಾಗಿದ್ದೇವೆ.

ಸಮುದ್ರದ ಆಹಾರ ಬೆಳೆಯುವಲ್ಲಿ ಲಕ್ಷದ್ವೀಪ ಹೆಚ್ಚೆಚ್ಚು ಕೊಡುಗೆ ನೀಡಲು ಅವಕಾಶ ಇದೆ.

ಸಮುದ್ರ ಕಳೆ ಕೃಷಿಯ ಬಗ್ಗೆಯು ಸಂಶೋಧನೆ ನಡೆದಿದೆ ಎಂದಿದ್ದಾರೆ.
----------------------------

ಶಕ್ತಿ ಯೋಜನೆಗೆ ರಾಜ್ಯದ ಹೆಣ್ಣು ಮಕ್ಕಳಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಕಳೆದ ಆರು ತಿಂಗಳ ಅವಧಿಯಲ್ಲಿ ನಾಡಿನ ಹೆಣ್ಣುಮಕ್ಕಳು 126 ಕೋಟಿಗೂ ಅಧಿಕ ಉಚಿತ ಟಿಕೇಟ್ ಪಡೆದು ಪ್ರಯಾಣ ಬೆಳೆಸಿದ್ದಾರೆ.

ಈ ವರೆಗಿನ ಒಟ್ಟು ಟಿಕೇಟ್ ಮೌಲ್ಯ 3,000 ಸಾವಿರ ಕೋಟಿ ದಾಟಿದೆ ಎಂದಿದ್ದಾರೆ.

ಯೋಜನೆಯಿಂದ ಲಾಭ ಪಡೆದು ಮತ್ತಷ್ಟು ಹೆಣ್ಣುಮಕ್ಕಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಲಿ ಎಂದಿದ್ದಾರೆ.
----------------------------
ಉಜ್ವಲ ಯೋಜನೆಯ ಫಲಾನುಭವಯೊಬ್ಬರ ಮನೆಗೆ ಈಚೆಗೆ ಪ್ರಧಾನಿ ಭೇಟಿ ನೀಡಿದ್ದರು.

ಇದೀಗ ಉಜ್ವಲ ಯೋಜನೆಯ 10ನೇ ಕೋಟಿ ಫಲಾನುಭವಿ ಮೀರಾ ಮಾಝಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ.

ರಾಮ ಮಂದಿರ ಉದ್ಘಾಟನೆಗು ಮುನ್ನ ಅವರು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಲು

ಅಯೋಧ್ಯೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೀರಾ ಮಾಝಿ ಅವರ ಮನೆಗೆ ಭೇಟಿ ನೀಡಿದ್ದರು.
----------------------------

ಇನ್ನು ಎರಡು ದಿನಗಳ ಮಟ್ಟಿಗೆ ಉತ್ತರ ಭಾರತದಲ್ಲಿ ತೀವ್ರ ಚಳಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ವಿವಿಧ ಭಾಗದಲ್ಲಿ ಶೀತ ವಾತಾವರಣ ಮುಂದುವರಿಯಲಿದೆ.

ವಾಯುವ್ಯ ಹಾಗೂ ಪೂರ್ವ ಭಾರತದ ಬಯಲು ಪ್ರದೇಶಗಳಲ್ಲಿ ಹಾಗೂ ವಿವಿಧೆಡೆ ದಟ್ಟವಾದ ಮಂಜು ಆವರಿಸಿರಲಿದೆ

ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  
----------------------------
 ಬೆಂಗಳೂರಿನಲ್ಲಿ ಗುರುವಾರ “ಎ.ಆರ್.ಸಿ. ಆಲೂಗಡ್ಡೆ ಕ್ಷೇತ್ರೋತ್ಸವ”ವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ತೋಟಗಾರಿಕೆ

ಇಲಾಖೆಯ ನಿರ್ದೇಶಕ ಡಿ.ಎಸ್.ರಮೇಶ್ ಉದ್ಘಾಟಿಸಲಿದ್ದಾರೆ. ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ

ಸಂಶೋಧನಾ ನಿರ್ದೇಶಕ ಡಾ.ಎಚ್.ಪಿ. ಮಹೇಶ್ವರಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
----------------------------

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ಬುಧವಾರ ಕರಾವಳಿಯಲ್ಲಿ ಮಳೆಯಾಗಿರುವುದು ವರದಿ ಆಗಿದೆ.

ಇನ್ನು ಗುರುವಾರ ಹಾಗೂ ಶುಕ್ರವಾರ ಕರಾವಳಿಯ ಜಿಲ್ಲೆಗಳು ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಮಳೆಯಾಗಲಿದೆ.

ಉತ್ತರ ಕರ್ನಾಟಕದಲ್ಲಿ ಒಣಹವೆ ಹಾಗೂ ಚಳಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.

ಇನ್ನು ಕರಾವಳಿಯಲ್ಲಿ ಗುಡುಗು ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ಇನ್ನು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರ

ಇರಲಿದ್ದು, ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
----------------------------

ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ಮತ್ತೆ ಬಂದಿದೆ. ಈ ಬಾರಿ ಫೆಬ್ರವರಿ 29ಕ್ಕೆ ವಿಧಾನಸೌಧದ ಮುಂಭಾಗದಲ್ಲಿ

ಬೆಂಗಳೂರು 15ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಇದೇ ಮಾರ್ಚ್ 1 ರಿಂದ 7 ರವರೆಗೆ ಚಲನಚಿತ್ರ ಪ್ರದರ್ಶನ ನಡೆಯಲಿದೆ. ಮಾರ್ಚ್ 7 ರಂದು ಸಮಾರೋಪ ಸಮಾರಂಭ

ನಡೆಯಲಿದ್ದು,  ರಾಜ್ಯಪಾಲ ಥಾವರ್‌ಚೆಂದ್ ಗೆಹ್ಲೋಟ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ

ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ತಿಳಿಸಿದ್ದಾರೆ.
----------------------------
ವಿಜಯಪುರದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಭೂಮಿ ನೀಡಿರುವ ರೈತರ ಜಮೀನಿಗೆ ಹೆಚ್ಚುವರಿಯಾಗಿ ಪ್ರತಿ

ಎಕರೆಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲು ನಿರ್ದೇಶನ ನೀಡಲಾಗಿದೆ.

ಅಲ್ಲದೇ ಭೂಮಿ ನೀಡಿದ ರೈತರ ಕುಟುಂಬಗಳಿಗೆ ಉದ್ಯೋಗ ನೀಡುವಂತೆ ಸಚಿವ ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.     
---------------------------- 

ಜನವರಿ 13ಕ್ಕೆ  “ಕೆ-ಸೆಟ್”- ಪರೀಕ್ಷೆ ನಡೆಯಲಿದ್ದು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು kea.kar.nic.in ವೆಬ್‌ಸೈಟ್‌ಗೆ

ಭೇಟಿ ನೀಡಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ. 

Published On: 04 January 2024, 03:43 PM English Summary: Steps to increase seafood market: PM Modi

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.