1. ಸುದ್ದಿಗಳು

ಬಾಳೆ (Banana) ಬೆಳೆದು ವ್ಯಾಪಾರ ಮಾಡಿ ಕೈತುಂಬ ಕಾಸು ಪಡೆಯುತ್ತಿರುವ ಸೋಮಶೇಖರ

somashkar

ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಕಂಪನಿಗೆ (company) ರಾತ್ರೋರಾತ್ರಿ ಬೀಗಹಾಕಲಾಯಿತು. ಇದರಿಂದಾಗಿ ಹಲವಾರು ನೌಕರರಿಗೆ ಶಾಕ್ ಆಗಿ ಸಮಸ್ಯೆಯಲ್ಲಿ ಸಿಲುಕಿಕೊಂಡರು. ಆದರೆ ಸೋಮಶೇಖರ ಉಳಿದವರಂತೆ ಚಿಂತೆಯಲ್ಲಿ ಕಾಲ ಕಳೆಯದೆ ಊರಿಗೆ ಬಂದು ಕೃಷಿಯಲ್ಲಿ ತೊಡಗಿಕೊಂಡರು. ಬಡವರ ಹಣ್ಣೆಂದೇ ಹೆಸರಾದ ಬಾಳೆ (Banana) ಬೆಳೆದುದಲ್ಲದೆ ಸ್ವತ ಅವರೇ ವ್ಯಾಪಾರ ಮಾಡಿ ಸುತ್ತಮುತ್ತಲಿನ ರೈತರಿಗೆ ಆದರ್ಶರಾಗಿದ್ದಾರೆ ಸೋಮಶೇಖರ. ಅವರು ಫೆ. 19 ರಂದು ಬೆಳಗ್ಗೆ 11 ಗಂಟೆಗೆ ನಡೆದ ಕೃಷಿ ಜಾಗರಣ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದು ಹೀಗೆ.

ಹಳೇ ಪದ್ದತಿ ಪ್ರಕಾರ ವ್ಯವಸಾಯ ಮಾಡದೆ ಹೊಸದಾಗಿ ಏನಾದರೂ ಮಾಡಬೇಕೆಂಬ ವಿಚಾರ ಮನದಲ್ಲಿ ಹೊಳೆದಾಗ ಸುತ್ತಮುತ್ತಲಿನ ರೈತರ ಅನುಭುವ, ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಇಲಾಖೆ ಸೇರಿದಂತೆ ಕೃಷಿ ತಜ್ಞರೊಂದಿಗೆ ಚರ್ಚಿಸಿ ವಾರ್ಷಿಕ ಬೆಳೆಯಾಗಿ ಗೋಳಿಲ್ಲದೆ ಬೆಳೆಯುವ ಬೆಳೆ ಬಾಳೆ ಬೆಳೆಯಲು ನಿರ್ಧರಿಸಿದೆ. ಬಾಳೆಯಲ್ಲಿ ಸ್ವಲ್ಪ ಎಚ್ಚರಿಕೆವಹಿಸಿದರೆ ಸಾಕು, ಉತ್ತಮ ಲಾಭ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಬಹುದು. ಹಾನಿಯಾಗುವ ಸಾಧ್ಯತೆ ಕಡಿಮೆ. ಬಾಳೆಯೊಂದಿಗೆ ಅಂತರ್ ಬೆಳೆ ಬೆಳೆಸಿದರೆ ಬಾಳೆಗೆ ಬರುವ ಖರ್ಚನ್ನು ಅಂತರ್ ಬೆಳೆಯಿಂದ ತೆಗೆಯಬಹುದು ಎನ್ನುತ್ತಾರೆ ಸೋಮಶೇಖರ.

ಯಾವ ಸಮಯದಲ್ಲಿ (Time sense) ನಾಟಿ ಮಾಡಿದರೆ ಮಾರುಕಟ್ಟೆಯಲ್ಲಿ (Market) ಲಾಭ ಪಡೆಯಬೇಕೆಂಬುದು ಬಹಳ ಮುಖ್ಯ. ಯಾವ ತಿಂಗಳಲ್ಲಿ ಬೆಳೆಗೆ ಹೆಚ್ಚು ಬೇಡಿಕೆ ಇರುತ್ತದೆ ಎಂಬುದನ್ನು ರೈತರು ವ್ಯವಹಾರ ಜ್ಞಾನ ಬೆಳೆಸಿಕೊಂಡರೆ ಮಾತ್ರ ಲಾಭ ಪಡೆಯುತ್ತಾನೆ.  ರೈತ (farmer) ಬಾಧವರು ಒಂದೇ ಬೆಳೆ ಬೆಳೆದು ಹಾನಿಯಾದಾಗ ಆತ್ಮಹತ್ಯೆ ಮಾಡಿಕೊಳ್ಳಬಾರದು. ಅದಕ್ಕೆ ಪರ್ಯಾಯ ಮಾರ್ಗ ಹುಡಕಬೇಕು. ಒಂದೇ ಬೆಳೆಯಿಂದ ಹಾನಿಯಾಗುವುದನ್ನು ತಪ್ಪಿಸಲು ಅಂತರ ಬೆಳೆ ಮಾಡುವುದು ಸೂಕ್ತ.

ಏಪ್ರೀಲ್ ಮೇ. ಜೂನ್ ತಿಂಗಳಲ್ಲಿ ಬಿಸಿಲು ಇರುವುದರಿಂದ ಭೂಮಿ ಉಳುಮೆ ಮಾಡಬೇಕು. ಭೂಮಿಯ ಫಲವತ್ತತೆ ಹೆಚ್ಚಿಸಲು ಸೆಣಬನ್ನು ಬಿತ್ತಿ ಹೂವು ಬಿಡುವ ಸಂದರ್ಭದಲ್ಲಿ ಅರಗಬೇಕು. ಆಗ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ಕೊಟ್ಟಿಗೆ ಗೊಬ್ಬರ ಸೇರಿಸಿದರೆ ಇನ್ನೂ ಉತ್ತಮ. ಸಾಧ್ಯವಾದರೆ ಎರೆಹುಳ ಗೊಬ್ಬರವನ್ನೂ ಹಾಕಿ ಫಲವತ್ತತೆ ಹೆಚ್ಚಿಸಿಕೊಳ್ಳಬಹುದು. ಜುಲೈ, ಆಗಸ್ಟ್ ಸೆಪ್ಟೆಂಬಲ್ ತಿಂಗಳಲ್ಲಿ  ನಾಟಿ ಮಾಡುವುದು ಸೂಕ್ತ.

ತಳಿಗಳ ಆಯ್ಕೆ ಮುಖ್ಯ (Crop variety) : ಭೂಮಿಗೆ ಯಾವ ತಳಿ ಸೂಕ್ತವಾಗುತ್ತದೆ. ಹೆಚ್ಚು ಇಳುವರಿ ಕೊಡುವ ತಳಿಗಳನ್ನು ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಇಲಾಖೆಯಲ್ಲಿ ವಿಚಾರಿಸಿಕೊಂಡು ನಾಟಿ ಮಾಡಬೇಕು. ಏಲಕ್ಕಿ ಬಾಳೆ, ಪಚ್ಚ ಬಾಳೆ, ನೇಂದ್ರ ಬಾಳೆ, ಚುಕ್ಕಿ ಬಾಳೆ, ಬೂದು ಬಾಳೆ, ಕಾಡು ಬಾಳೆ ಹೀಗೆ ಬಾಳೆಯಲ್ಲಿ ಬೇಕಾದಷ್ಟು ತಳಿಗಳಿವೆ. ಯಾವುದು ಸೂಕ್ತವೆಂಬುದನ್ನು ರೈತರು ಕೃಷಿ ತಜ್ಞರಿಂದ ಮಾಹಿತಿ ಪಡೆದು ನಾಟಿ ಮಾಡಬೇಕು.

ಆರು ಅಡಿಗಳ ಅಂತರದಲ್ಲಿ ಸಾಲು ತೆಗೆದು ಆರು ಅಡಿ ಸುತ್ತಳತೆಯ ಗುಂಡಿ ತೆಗೆದು ಬಾಳೆ ನಾಟಿ ಮಾಡಬೇಕು. ಹೀಗೆ ನೆಟ್ಟರೆ ಒಂದು ಎಕರೆಯಲ್ಲಿ 1200 ಬಾಳೆಗಳನ್ನು ಹಾಕಬಹುದು. ಮಳೆಗಾಲದಲ್ಲಿ ಬುಡದಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಪ್ರತಿ ಬುಡಕ್ಕೆ ತಿಂಗಳಿಗೆ ಎರಡು ಕೆ.ಜಿಯಷ್ಟು ಕೊಟ್ಟಿಗೆ ಗೊಬ್ಬರ ನೀಡಿದರೆ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದು. ಜುಲೈನಲ್ಲಿ ನಾಟಿ ಮಾಡಿದರೆ ಅಧಿಕ ಇಳುವರಿ ಪಡೆಯಬಹುದು. ಡಿಸೆಂಬರ್ ತಿಂಗಳಲ್ಲಿ ಬಾಳೆಗೆ ಹೆಚ್ಚಿನ ಬೇಡಿಕೆಯಿರುತ್ತದೆ, ಅದೇ ಸಮಯದಲ್ಲಿ ಕಟಾವಿಗೆ ಬರುತ್ತದೆ.

ಆಧಾರಕ್ಕೆ ಕೋಲು ಕೊಡುವುದು: ಬಾಳೆ ನಿಜವಾದ ಕಾಂಡ ಹೊಂದಿರದೆ ಇರುವುದರಿಂದ ಗೊನೆಯಲ್ಲಿ ಹೆಚ್ಚು ಭಾರ ಇರುವುದರಿಂದ ಗಾಳಿಗೆ ಮುರಿಯಬಹುದು. ಬಿದಿರಿನ ಕೋಲು ಅಥವಾ ಬೇರೆ ಕೋಲುಗಳಿಂದ ಆಧಾರ ನೀಡಬಹುದು  ಒಣ ಎಲೆಯನ್ನು ಕಾಲ ಕಾಲಕ್ಕೆ ತೆಗೆಯುವುದರಿಂದ ರೋಗ ಮತ್ತು ಕೀಟಗಳ ತೀವ್ರತೆ ಕಡಿಮೆ ಮಾಡಬಹುದು. ಇದನ್ನು ಹೊದಿಕೆಯಾಗಿಯೂ ಉಪಯೋಗಿಸಬಹುದು.

ಅಂತರ ಬೆಳೆ (Inter crop):  ಬಾಳೆ ನಾಟಿ ಮಾಡಿದ ನಂತರ ಅಂತರ ಬೆಳೆ ಬೆಳೆದು ಹೆಚ್ಚು ಲಾಭ ಮಾಡಿಕೊಳ್ಳಬಹುದು.  ಬಾಳೆ ಮಧ್ಯದಲ್ಲಿ ಮಧ್ಯದಲ್ಲಿ ಒಂದುವರೆ ಅಡಿಯಲ್ಲಿ ಮಂಗಳೂರು ಸೌತೆಕಾಯಿ ನಾಟಿ ಮಾಡಬಹುದು. ಒಂದುವರೆ- ಎರಡು ತಿಂಗಳಲ್ಲಿ ಎಕರೆಗೆ ಸುಮಾರು 20 ಟನ್ ಸೌತೆಕಾಯಿ ಬೆಳೆಯಬಹುದು. ನಂತರ ಸೌತೆ ಬಳ್ಳಿಯ ಸೊಪ್ಪುಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ನಂತರ ಮೆಣಸಿನಕಾಯಿ, ಬೀನ್, ಅಂತರ ಬೆಳೆಯಾಗಿ ಬೆಳೆಯಬಹುದು. 4 ರಿಂದ 5 ತಿಂಗಳಲ್ಲಿ  ಎರಡು ಅಂತರ ಬೆಳೆ ಪಡೆಯಬಹುದು.

ರೈತ ವ್ಯಾಪಾರಸ್ಥನಾದರೆ ಲಾಭ (Business man):  ಬಾಳೆಯೊಂದಿಗೆ ತರಕಾರಿ, ಹೂವು, ಹಣ್ಣುಗಳನ್ನು ಬೆಳೆಸಿದ್ದೇನೆ. ಬದನಕಾಯಿ, ಬೆಂಡೇಕಾಯಿ, ಈರುಳ್ಳಿ, ಸೌತೆಕಾಯಿ, ಸೊಪ್ಪು ಸೇರಿದಂತೆ ಹಣ್ಣುಹಂಪಲಗಳನ್ನು ಸ್ವತಃ  ಮಾರಾಟ ಮಾಡಬೇಕು. ರಿಲಾಯನ್ಸ್, ಬಿಗ್ ಬಜಾರ್ ಸೇರಿದಂತೆ ಇತರ ಅಂಗಡಿಗಳಿಗೆ ರೈತರೇ ಪೂರೈಸಬೇಕು. ಅಂದಾಗ ಮಾತ್ರ ರೈತರಿಗೆ ಲಾಭ ಸಿಗುತ್ತದೆ. ಆದಾಯವೂ ದುಪ್ಪಟ್ಟಾಗುತ್ತದೆ.  ರೈತ ವಿಜ್ಞಾನಿಯೊಂದಿಗೆ ವ್ಯಾಪಾರಿಯೂ ಆಗಬೇಕು.  ತಾವು ಮಾಡಿದ್ದನ್ನೂ ರೈತ ಬಾಂಧವರಿಗೆ ಹೇಳುತ್ತಿದ್ದೇನೆ. ಎಲ್ಲಾ ರೈತರು ಇದೇ ರೀತಿ ವ್ಯಾಪಾರಿಯೂ ಆದರೆ ಖಂಡಿತವಾಗಿ ಲಾಭ ಗಳಿಸುತ್ತಾನೆ. ಎಂಬುದೇ ತಮ್ಮ ವಿಚಾರವೆಂದು ನಸುನಗುತ್ತಲೇ ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿಟ್ಟರು.

ಟಿ.ಎಸ್. ಸೋಮಶೇಖರ (Somashekar)

ಮೈಸೂರು ತಾಲೂಕು

ಮೊ.9342105899

ನೈಸರ್ಗಿಕ ಕೃಷಿ ಅಳವಡಿಸಿಕೊಂಡು ಮಾರಕ ರೋಗಗಳಿಂದ ಮುಕ್ತಿಹೊಂದಿ

Published On: 20 July 2020, 09:46 AM English Summary: Somasekhara is the banana (Banana) trading and earning a small bucket

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.