1. ಸುದ್ದಿಗಳು

ರಸ್ತೆಯಲ್ಲಿ ಸಿಗರೇಟ್‌ ಸೇದಿದರೆ ಬೀಳಲಿದೆ ದಂಡ; ಬಂತು ಹೊಸ ಆ್ಯಪ್!

Hitesh
Hitesh
Smoking on the road will be fined; A new app has arrived!

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮಾಡುತ್ತಿದ್ದೀರ ಆಗಿದ್ದರೆ ಜೋಕೆ ಮುಂದೆ ನಿಮಗೂ ದಂಡ ಬೀಳಬಹುದು.

ತಮಿಳುನಾಡಿನಲ್ಲಿ ಭಾರೀ ಮಳೆ ಸಾಧ್ಯತೆ: ಹೈಅಲರ್ಟ್‌ ಘೋಷಣೆ!

ಹೌದು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ತಡೆಗೆ ಆರೋಗ್ಯ ಇಲಾಖೆಯು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದು, ಇಷ್ಟರಲ್ಲೇ ಬಳಕೆಗೆ ಬರಲಿದೆ.

Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ! 

ಸ್ಟಾಪ್ ಟೊಬ್ಯಾಕೊ ಎಂಬ ಮೊಬೈಲ್ ಆ್ಯಪ್ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು, ಶೀಘ್ರದಲ್ಲಿಯೇ ಲೋಕಾರ್ಪಣೆ ಆಗಲಿದೆ.

ಸರ್ಕಾರವು ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಯನ್ನು ತಡೆಗಟ್ಟುವ ಉದ್ದೇಶದಿಂದ ಕೋಟ್ಪಾ ಕಾಯ್ದೆ ಜಾರಿ ಮಾಡಿದೆ.

ಆದರೆ, ಈ ಕಾಯ್ದೆಯನ್ನು ಉಲ್ಲಂಘಿಸುವವರ ಸಂಖ್ಯೆಯೇ ಹೆಚ್ಚಾಗಿದೆ.

ಕೆಲವರು ಈ ಕಾಯ್ದೆಯನ್ನು ಉಲ್ಲಂಘಿಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.

ಕೆಲವರು ಸಾರ್ವಜನಿಕ ಪ್ರದೇಶದಲ್ಲಿ ತಂಬಾಕು ಸೇವಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಆ್ಯಪ್ ಪರಿಚಯಿಸಲಾಗಿದೆ.  

ಸಾರ್ವಜನಿಕರು  ಮೊಬೈಲ್ ಮೂಲಕ ಚಿತ್ರಗಳನ್ನು ತೆಗೆದು, ಅಪ್ಲೋಡ್ ಮಾಡುವ ಅವಕಾಶ ಇರಲಿದೆ.

ಈ ಆಧಾರದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತಂಡ ಸ್ಥಳಕ್ಕೆ ಭೇಟಿ ನೀಡಿ, ದಂಡ ವಿಧಿಸಲಿದೆ.   

Smoking on the road will be fined; A new app has arrived!

ಕೆಲವೆಡೆ ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.

ಅದೇ ರೀತಿ, ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ.

ನೂತನ ಆ್ಯಪ್‌ಈಗಾಗಲೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಅಧಿಕೃತವಾಗಿ ಶೀಘ್ರದಲ್ಲಿಯೇ ಲೋಕಾರ್ಪಣೆ ಆಗಲಿದೆ ಎನ್ನಲಾಗಿದೆ.   

ಆ್ಯಪ್‌ ಜಿಪಿಎಸ್‌ ತಂತ್ರಜ್ಞಾನವನ್ನು ಆಧರಿಸಿದೆ. ಛಾಯಾಚಿತ್ರ ತೆಗೆದ ಸ್ಥಳ ನಿಖರವಾಗಿ ತಿಳಿಯಲಿದೆ.

ಸ್ಥಳಕ್ಕೆ ಭೇಟಿ ನೀಡಿದಾಗ ಕೋಟ್ಪಾ ಕಾಯ್ದೆ ಉಲ್ಲಂಘಿಸಿ, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು

ದೃಢಪಟ್ಟಲ್ಲಿ ಪ್ರತಿ ವ್ಯಕ್ತಿಗೆ 200 ರೂಪಾಯಿಯಂತೆ ದಂಡ ವಿಧಿಸಲು ನಿರ್ಧರಿಸಲಾಗಿದೆ.  

Published On: 07 December 2022, 12:21 PM English Summary: Smoking on the road will be fined; A new app has arrived!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.