1. ಸುದ್ದಿಗಳು

ಸಿದ್ದರಾಮಯ್ಯ ನೆಕ್ಸ್ಟ್‌ ಸಿಎಂ ಬಹುತೇಕ ಕನ್ಫರ್ಮ್‌! ಘೋಷಣೆಯೊಂದೇ ಬಾಕಿ

Maltesh
Maltesh
Siddaramaiah next CM almost confirmed! Only announcement is pending

ಕಳೆದ 4 ದಿನಗಳಿಂದ ನಡೆಯುತ್ತಿದ್ದ ಮುಖ್ಯಮಂತ್ರಿಯ ಸ್ಥಾನಕ್ಕೆ ಇಂದು ತೆರೆಬೀಳುವ ಸಾಧ್ಯತೆಗಳಿವೆ.. ಹೌದು ಸಿದ್ದರಾಮಯ್ಯ ರಾಜ್ಯದ ಮುಂದಿನ ಸಿಎಂ ಅಆಗೋದು ಬಹುತೇಕ ಕನ್ಫರ್ಮ್‌ ಎನ್ನಲಾಗುತ್ತಿದೆ. ಸದ್ಯದ ಮಾಹಿತಿಯ ಪ್ರಕಾರ ಹೈಕಮಾಂಡ್‌ ಸಿದ್ದರಾಮಯ್ಯ ಅವರಿಗೆ ಸಿಎಂ ಆಗಲು ಗ್ರೀನ್‌ಸಿಗ್ನಲ್‌ ಸಿಕ್ಕಿದೆ ಅಧಿಕೃತ ಘೋಷಣೆಯೊಂದೆ ಬಾಕಿ ಎನ್ನಲಾಗುತ್ತಿದೆ.

ಸದ್ಯ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ 2 ವರ್ಷ ಮೊದಲು ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ ಆದರೆ, ಇನ್ನು ಮುಂದಿನ 2 ವರ್ಷದ ಅವಧಿಗೆ ಡಿ ಕೆ ಶಿವಕುಮಾರ್‌ ಸಿಎಂ ಆಗಿ ಮುಂದುವರೆಯಲು ಸೂಚಿಸಿದ್ದಾರೆ ಎನ್ನಲಾಗಿದೆ. ಸದ್ಯ ಸಿದ್ದರಾಮಯ್ಯ ಅವರ ಬೆಂಗಳೂರಿನ ಸರ್ಕಾರಿ ಕಚೇರಿ ಬಳಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. 

ಅವರ ಮನೆಯ ಹತ್ತಿರ ಸಾಕಷ್ಟು ಅಭಿಮಾನಿಗಳು ನೆರೆದಿದ್ದು, ಸಿಹಿ ಹಂಚಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಅವರು ಸಿದ್ದರಾಮಯ್ಯ ಅವರು ಸಿಎಂ ಆಗಿ ಆಯ್ಕೆ ಆಗಿರುವುದಮನ್ನು ಕನ್ಫರ್ಮ್‌ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಿಎಂ ಗಾದಿ ಒಲಿದಿದು ಅಧಿಕೃತ ಘೋಷಣೆಯೊಂದೆ ಬಾಕಿ ಇದ್ದು ನಾವು ಅವರಿಗೆ ಶುಭಾಶಯ ಕೋರಿದ್ದೇವೆ ಎಂದಿದ್ದಾರೆ.

Published On: 17 May 2023, 12:36 PM English Summary: Siddaramaiah next CM almost confirmed! Only announcement is pending

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.