1. ಸುದ್ದಿಗಳು

ಹಾಲ್‌ಮಾರ್ಕ್ ಇಲ್ಲದ ಚಿನ್ನಾಭರಣಗಳ ಮಾರಾಟಕ್ಕೆ ಬೀಳಲಿದೆ ಬ್ರೇಕ್‌

KJ Staff
KJ Staff
Shockimg news for gold lover

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್‌ ಗೋಯಲ್‌ ಅವರು ಬಿಐಎಸ್‌ ಕುರಿತ ಸಭೆ ನಡೆಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಬಿಐಎಸ್‌ ಸರ್ಟಿಫಿಕೇಟ್‌ಗೆ ಶುಲ್ಕದ ಮೇಲೆ ಶೇ.80 ರಷ್ಟು ರಿಯಾಯ್ತಿ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಸಾಮಾನ್ಯವಾಗಿ ಕಳ್ಳತನ ಆದಾಗ ಅಥವಾ ಹಲ್ಲೆ, ಜಗಳ ಆದಾಗ ನಾವು ಪೊಲೀಸ್‌ ಕಂಪ್ಲೇಟ್‌ ಕೊಡೊದನ್ನ ನೋಡಿದ್ದೀವಿ. ಆದರೆ ಛತ್ತೀಸ್‌ಗಢದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕೋಳಿಗೆ ಪ್ರಾಣ ಬೆದರಿಕೆ ಇದೆ ಎಂದು ಮಹಿಳೆಯೊಬ್ಬರು ಇದೀಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಇಂತಹ ಘಟನೆಯೊಂದು ನಿಜಕ್ಕೂ ನಡೆದಿದೆ. ತನ್‌ಪುರ ನಗರದ ಜಾಂಕಿ ಬಾಯಿ ಎಂಬುವವರಿಗೆ ಕೋಳಿ ಅಂದ್ರೆ ಪ್ರೀತಿ. ಅವರು ಸಾಕಷ್ಟು ಕೋಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಇದೀಗ ತಾನು ಸಾಕಿದ ಪ್ರೀತಿಯ ಕೋಳಿಗಳ ಮೇಲೆ ಖದೀಮರ ವಕ್ರದೃಷ್ಟಿ ಬಿದ್ದಿದೆ ಎಂದು ಆರೋಪಿಸಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು, ಮಹಿಳೆಯರಿಗೆ ಭರ್ಜರಿ ರಿಯಾಯಿತಿ ನೀಡಿದೆ. ಸರ್ಕಾರಿ ಸ್ವಾಮ್ಯದಲ್ಲಿರುವ ವಸತಿ ಸಮುಚ್ಛಯಗಳಿಗೆ ಭೇಟಿ ನೀಡುವ ಮಹಿಳೆಯರಿಗೆ ವಿಶೇಷ ಕೊಡುಗೆಯನ್ನು ನೀಡಿದೆ. ರೂಮ್ ಬುಕ್ಕಿಂಗ್‌ಗಳಲ್ಲಿ ಶೇಕಡಾ 50 ರಷ್ಟು ಡಿಸ್ಕೌಂಟ್‌ ನೀಡಿದೆ. ಇನ್ನು ಊಟದ ಮೆನುವಿನಲ್ಲೂ ಕೂಡಹ ಶೇಕಡಾ 20 ರಷ್ಟು ರೀಯಾಯಿತಿ ನೀಡಿದೆ.

pan card update online ಇನ್ಮುಂದೆ ಸರ್ಕಾರಿ ಸಂಸ್ಥೆಗಳ ಡಿಜಿಟಲ್ ವ್ಯವಸ್ಥೆಗೆ ಸಾಮಾನ್ಯ ಗುರುತಿನ ಚೀಟಿಯಾಗಿ ಪ್ಯಾನ್ ಕಾರ್ಡ್ !

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮುಂದಿನ ತಿಂಗಳಿಂದ ಶುಲ್ಕ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏಪ್ರಿಲ್ 1ರಿಂದ ಕಾರು ಮತ್ತು ಇನ್ನಿತರ ಲಘು ವಾಹನಗಳಿಗೆ ಶೇ.5 ಮತ್ತು ಭಾರಿ ವಾಹನಗಳಿಗೆ ಶೇ.10 ಶುಲ್ಕ ಏರಿಕೆ ಆಗಬಹುದು ಎಂದು NHAI ಮೂಲಗಳು ತಿಳಿಸಿವೆ. NHAI 2008ರ ದರ ಮತ್ತು ಶುಲ್ಕ ನಿಗದಿ ನಿಯಮದಂತೆ ಪ್ರತಿವರ್ಷ ಏಪ್ರಿಲ್‌ನಲ್ಲಿ ಪರಿಷ್ಕರಣೆ ನಡೆಯಲಿದೆ. ಈ ಕುರಿತ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿಗಳ ಯೋಜನಾ ಜಾರಿ ಘಟಕಗಳು ಮಾರ್ಚ್ 25 ರೊಳಗೆ ರವಾನಿಸಬೇಕು. ಈ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವಾಲಯ ಮಾರ್ಚ್ ಅಂತ್ಯದಲ್ಲಿ ನಡೆಸುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತದೆ.

ವೇತನ ಹೆಚ್ಚು ಮಾಡುವಂತೆ ಆಗ್ರಹಿಸಿ KSRTC ನೌಕರರು ಇದೇ ಮಾರ್ಚ್ 24 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರವು ತಮ್ಮ ವೇತನ ಹೆಚ್ಚಳ ದೀರ್ಘ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆ ನೌಕರರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ಒಕ್ಕೂಟದ ಅಧ್ಯಕ್ಷಆರ್.ಚಂದ್ರಶೇಖರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನೌಕರರ ಈ ನಿರ್ಧಾರದಿಂದ KKRTC, NWKSRTC, KSRTC ಸಾರಿಗೆಗಳ ಸಂಚಾರದಲ್ಲಿ ವ್ಯತ್ಯಯ ಆಗಲಿದೆ.

ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿನ ಒಟ್ಟು 17 ಹೊಸ ಕಟ್ಟಡಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉದ್ಘಾಟನೆ ಮಾಡಲಿದ್ದಾರೆ. 8 ಹೊಸ ಕಚೇರಿ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನೂ ಇದೇ ಸಮಯದಲ್ಲಿ ನೆರವೇರಿಸಲಿದ್ದಾರೆ. ಬೆಂಗಳೂರು ನಗರ, ರಾಮನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ತುಮಕೂರು, ಜಿಲ್ಲೆಗಳಲ್ಲಿ.77.15 ಕೋಟಿ ವೆಚ್ಚದಲ್ಲಿ ಬೆಸ್ಕಾಂನ ಹೊಸ ಉಪ ವಿಭಾಗೀಯ ಕಚೇರಿ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಹಾಲ್‌ಮಾರ್ಕ್ ಇಲ್ಲದ ಬಂಗಾರದ ಆಭರಣಗಳ ಮಾರಾಟವನ್ನು ಏ.1 ರಿಂದ ನಿರ್ಬಂಧಿಸಲಾಗಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್‌ ಗೋಯಲ್‌ ಅವರು ಬಿಐಎಸ್‌ ಕುರಿತ ಸಭೆ ನಡೆಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಬಿಐಎಸ್‌ ಸರ್ಟಿಫಿಕೇಟ್‌ಗೆ ಶುಲ್ಕದ ಮೇಲೆ ಶೇ.80 ರಷ್ಟು ರಿಯಾಯ್ತಿ ನೀಡಲು ಕ್ರಮ ಕೈಗೊಳ್ಳಲಾಗಿದೆ.

Published On: 06 March 2023, 05:04 PM English Summary: Shockimg news for gold lover

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.