1. ಸುದ್ದಿಗಳು

Good news ಬೀಜ-ಬಂಡವಾಳ; ಸ್ವ-ಸಹಾಯ ಗುಂಪಿಗೆ 380 ಕೋಟಿ ರೂ ಸಹಾಯಧನ!

Hitesh
Hitesh
ಪ್ರಧಾನಿ ನರೇಂದ್ರ ಮೋದಿ ಅವರು ವರ್ಲ್ಡ್ ಫುಡ್ ಇಂಡಿಯಾ ಶೃಂಗಸಭೆಯಲ್ಲಿ ಮಾತನಾಡಿದರು

ಭಾರತದಲ್ಲಿ ಆಹಾರ ಬೀಜಗಳ ಉತ್ಪಾದನೆಗೆ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.  

ಹೌದು, ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮಳೆ, ಆಹಾರ ಉತ್ಪನ್ನ ಬೀಜಗಳು ಹಾಗೂ ಗೊಬ್ಬರ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತವೆ.

ಕಳಪೆ ಬೀಜಗಳನ್ನು ಬಳಸಿ, ಬೆಳಗಳ ಉತ್ಪಾದನೆಯಾಗದೆ ರೈತರು ಸಂಕಷ್ಟ ಅನುಭವಿಸಿದ್ದನ್ನು ಹಾಗೂ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಸಿಗದೆ ಇರುವುದನ್ನು

ನೀವು ಗಮನಿಸಿರಬಹುದು. ಇದೀಗ ಕೇಂದ್ರ ಸರ್ಕಾರವು ರೈತರಿಗೆ ಬೀಜಗಳನ್ನು ಪಡೆದುಕೊಳ್ಳುವಲ್ಲಿ ಆಗುತ್ತಿರುವ ಸಮಸ್ಯೆಯನ್ನು ತಪ್ಪಿಸಲು ಪ್ರಮುಖ ಕ್ರಮ ಕೈಗೊಳ್ಳುತ್ತಿದೆ. 

ಭಾರತದ ಆಹಾರ ಸಂಸ್ಕರಣಾ ಉದ್ಯಮವನ್ನು ಗುರುತಿಸುವ ಜಾಗತಿಕ ಕಾರ್ಯಕ್ರಮವಾದ ವರ್ಲ್ಡ್ ಫುಡ್ ಇಂಡಿಯಾ ಶೃಂಗಸಭೆಯಲ್ಲಿ 100,000 ಕ್ಕೂ

ಹೆಚ್ಚು ಸ್ವ-ಸಹಾಯ ಗುಂಪು (SHG) ಸದಸ್ಯರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ  ಬರೋಬ್ಬರಿ 380 ಕೋಟಿ ಬೀಜ-ಬಂಡವಾಳ ಸಹಾಯವನ್ನು ವಿತರಿಸಿದ್ದಾರೆ.

ಈ ಮೂಲಕ ಸುಧಾರಿತ ಪ್ಯಾಕೇಜಿಂಗ್ ಮತ್ತು ಗುಣಮಟ್ಟದ ತಯಾರಿಕೆಯ ಮೂಲಕ ಉತ್ತಮ

ಬೆಲೆಯ ಬೀಜಗಳನ್ನು ಪಡೆಯಲು ಸ್ವಸಹಾಯ ಗುಂಪುಗಳಿಗೆ ಸಹಾಯವಾಗಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ಆಹಾರ ಸಂಸ್ಕರಣಾ

ವಲಯವು ಬರೋಬ್ಬರಿ 50,000 ಕೋಟಿ ವಿದೇಶಿ ನೇರ ಹೂಡಿಕೆಯನ್ನು (ಎಫ್‌ಡಿಐ) ಆಕರ್ಷಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. 

ಅಲ್ಲದೇ ದೇಶದ ಆಹಾರ ವೈವಿಧ್ಯತೆಯನ್ನು ಜಾಗತಿಕ ಹೂಡಿಕೆದಾರರಿಗೆ ಆಕರ್ಷಕ ಪ್ರತಿಪಾದನೆಯಾಗಿದೆ ಎಂದರು.   

ಆಹಾರವು ನಮ್ಮ ದೈಹಿಕ ಆರೋಗ್ಯವನ್ನು ರೂಪಿಸುವಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸುವುದಲ್ಲದೇ  ನಮ್ಮ ಮಾನಸಿಕ ಆರೋಗ್ಯಕ್ಕೂ ಇದು ಸಂಬಂಧಿಸಿದೆ.

ಆಯುರ್ವೇದವು ಸಮತೋಲಿತ ಆಹಾರ, ಆರೋಗ್ಯಕರ ಆಹಾರ ಮತ್ತು ಋತುಮಾನಕ್ಕೆ ಅನುಗುಣವಾಗಿ ಆಹಾರ ಸೇವಿಸುವುದರ ಬಗ್ಗೆ ತಿಳಿಸುತ್ತದೆ ಎಂದಿದ್ದಾರೆ.  

ಇನ್ನು ಆಹಾರ ಸಂಸ್ಕರಣಾ ವಲಯದಲ್ಲಿ ಉತ್ಪಾದನಾ ಸಂಬಂಧಿತ ಪ್ರೋತ್ಸಾಹ ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿ,   

ಉದ್ಯಮವನ್ನು ಹೊಸದಾಗಿ ಪ್ರಾರಂಭಿಸುವವರಿಗೂ ಇದು ದೊಡ್ಡ ನೆರವು ನೀಡಲಿದೆ ಎಂದರು.

ಕೇಂದ್ರ ಸರ್ಕಾರವು ಕೃಷಿ-ಇನ್‌ಫ್ರಾ ನಿಧಿಯಡಿಯಲ್ಲಿ  ಮೂಲಸೌಕರ್ಯಕ್ಕಾಗಿ ಅಂದಾಜು 50,000 ಕೋಟಿ ಹೂಡಿಕೆಯನ್ನು ಮಾಡಿದ್ದು,

ಇದರಿಂದ ದೇಶದಲ್ಲಿ ಸಾವಿರಾರು ಯೋಜನೆಗಳ ಕೆಲಸಗಳು ನಡೆಯುತ್ತಿವೆ.

ಮೀನುಗಾರಿಕೆ ಮತ್ತು ಪಶುಸಂಗೋಪನೆ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಸಂಸ್ಕರಿಸಲು ಸಹ ಸಾವಿರಾರು ಕೋಟಿ ರೂಪಾಯಿಗಳ

ಹೂಡಿಕೆಯೊಂದಿಗೆ ಪ್ರೋತ್ಸಾಹಿಸಲಾಗುತ್ತಿದೆ.   

ಸರ್ಕಾರದ ಹೂಡಿಕೆದಾರ ಸ್ನೇಹಿ ನೀತಿಗಳು ಆಹಾರ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿವೆ ಎಂದರು.  

ಕಳೆದ ಒಂಬತ್ತು ವರ್ಷಗಳಲ್ಲಿ, ಭಾರತದ ಕೃಷಿ ರಫ್ತುಗಳಲ್ಲಿ ಸಂಸ್ಕರಿತ ಆಹಾರಗಳ ಪಾಲು 13% ರಿಂದ 23% ಕ್ಕೆ ಬೆಳೆದಿದೆ.

ಇದು 150% ರಷ್ಟು ಹೆಚ್ಚಳವಾಗಿದೆ.

ಅಲ್ಲದೇ ಆಹಾರ ಸಂಸ್ಕರಣಾ ಉದ್ಯಮದಲ್ಲಿ ಭಾರತವು ಅಭೂತಪೂರ್ವ ಬೆಳವಣಿಗೆ  ಸಾಧಿಸಿದೆ.   

21 ನೇ ಶತಮಾನದಲ್ಲಿ ಆಹಾರ ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ವರ್ಲ್ಡ್ ಫುಡ್ ಇಂಡಿಯಾದಂತಹ ಮೇಳಗಳು ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತವೆ.

ಭಾರತೀಯ ಆರ್ಥಿಕತೆಯ ಭವಿಷ್ಯಕ್ಕಾಗಿ ರುಚಿ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ಪ್ರಾಮುಖ್ಯತೆ ಸಾಧಿಸಿದೆ ಎಂದರು.   

Published On: 05 November 2023, 01:43 PM English Summary: seed-capital; Rs 380 crore subsidy for self-help groups!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.