ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾನುವಾರ (ಮುಂದಿನ 24 ಗಂಟೆಗಳು) ಕರಾವಳಿಯ ಬಹುತೇಕ ಕಡೆಗಳಲ್ಲಿ: ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ
ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಸೋಮವಾರ ಹಾಗೂ ಮಂಗಳವಾರ (ಮುಂದಿನ 48 ಘಂಟೆಗಳು:) ಕರಾವಳಿಯ ಬಹುತೇಕ ಕಡೆಗಳಲ್ಲಿ:
ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಕೆಲವು
ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಭಾರೀ ಮಳೆ ಮುನ್ನೆಚರಿಕೆ
ಮುಂದಿನ 24 ಘಂಟೆಗಳು: ಕರಾವಳಿಯ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ ಮತ್ತು ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರ್ಗಿ
ಮತ್ತು ದಕ್ಷಿಣ ಒಳನಾಡಿನ, ಚಿಕ್ಕಮಗಳೂರು,ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಮುಂದಿನ 48 ಘಂಟೆಗಳು: ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಗುಡುಗು/ಬಿರುಗಾಳಿಯ ಮುನ್ನೆಚರಿಕೆ
ಮುಂದಿನ 48 ಘಂಟೆಗಳು: ರಾಜ್ಯದಲ್ಲಿ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದೆ, ಬಿರುಗಾಳಿಯ ವೇಗವು ಘಂಟೆಗೆ 30-40 ಕಿ.ಮೀ. ಇರುವ ಸಾಧ್ಯತೆ ಇದೆ.
ಮೀನುಗಾರರಿಗೆ ಎಚ್ಚರಿಕೆ: ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ 45-55 ಕಿ.ಮೀ ವೇಗದಲ್ಲಿ 65 ಕಿ.ಮೀ ವೇಗದಲ್ಲಿ ಗಾಳಿ
ಬೀಸುವ ಚಂಡಮಾರುತದ ವಾತಾವರಣ ಇರುತ್ತದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ.
02ನೇ ಅಕ್ಟೋಬರ್ 2023 ರ ಬೆಳಗ್ಗೆವರೆಗಿನ ಬೆಂಗಳೂರು ಮತ್ತು ಸುತಮುತ್ತಲಿನ ಪ್ರದೇಶಗಳ ಮುನ್ಸೂಚನೆ
ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ.
ಒಂದೆರಡು ಕಡೆಗಳಲ್ಲಿ ಹಗುರ/ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಕೆಲವೊಮ್ಮೆ ಬಲವಾದ ಮೇಲ್ಮ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ
28 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆ ಇದೆ.
ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ.
ಒಂದೆರಡು ಕಡೆಗಳಲ್ಲಿ ಹಗುರ/ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಕೆಲವೊಮ್ಮೆ ಬಲವಾದ ಮೇಲ್ಮ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ
28 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಶನಿವಾರ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.
ನೈರುತ್ಯ ಮುಂಗಾರು ಕರಾವಳಿಯಲ್ಲಿ ಪ್ರಬಲವಾಗಿದೆ ಹಾಗೂ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು.
ಕರಾವಳಿಯಲ್ಲಿ ವ್ಯಾಪಕವಾಗಿ ಮಳೆಯಾಗಿದೆ ಮತ್ತು ಒಳನಾಡಿನ ಕೆಲವು ಸ್ಥಳಗಳಲ್ಲಿ ಮಳೆಯಾಗಿರುವುದು ವರದಿ ಆಗಿದೆ.
ಭಾರಿ ಮಳೆ ಪ್ರಮಾಣ (ಸೆಂ.ಮೀ, ನಲ್ಲಿ ಕೊಟ್ಟಿಗೆಹಾರ (ಚಿಕ್ಕಮಗಳೂರು ಡಿಟಿ) 11; ಬೇಲಿಕೇರಿ, ಕ್ಯಾಸಲ್ ರಾಕ್
(ಎರಡೂ ಉತ್ತರ ಕನ್ನಡ ಡಿಟಿ) 10; ಕದ್ರಾ (ಉತ್ತರ ಕನ್ನಡ ಡಿಟಿ) 8; ಉಪ್ಪಿನಂಗಡಿ (ದಕ್ಷಿಣ ಕನ್ನಡ ಡಿಟಿ),
ಕಾರವಾರ, ಗೋಕರ್ಣ (ಉತ್ತರ ಕನ್ನಡ ಡಿಟಿ) ತಲಾ 7 ಸೆಂ.ಮೀ ಮಳೆಯಾಗಿದೆ.
ಮುಖ್ಯ ಮಳೆ ಪ್ರಮಾಣ (ಸೆಂ.ಮೀ. ನಲ್ಲಿ: ಮಣಿ (ದಕ್ಷಿಣ ಕನ್ನಡ ಜಿಲ್ಲೆ), ಅಂಕೋಲಾ
(ಉತ್ತರ ಕನ್ನಡ ಜಿಲ್ಲೆ), ಔರಾದ್ (ಬೀದರ್ ಜಿಲ್ಲೆ) ತಲಾ 6 ಸೆಂ.ಮೀ ಮಳೆಯಾಗಿದೆ.
ಬೆಳ್ತಂಗಡಿ, ಪುತ್ತೂರು ಎಚ್‌ಎಂಎಸ್ (ದಕ್ಷಿಣ ಕನ್ನಡ ಜಿಲ್ಲೆ), ಕೊಲ್ಲೂರು (ಉಡುಪಿ ಜಿಲ್ಲೆ), ಹುಮನಾಬಾದ್ (ಬೀದರ್ ಜಿಲ್ಲೆ)
ತಲಾ 5;ಸಿದ್ದಾಪುರ, ಕೋಟ (ಎರಡೂ ಉಡುಪಿ ಜಿಲ್ಲೆ), ಮಂಗಳೂರು ವಿಮಾನ ನಿಲ್ದಾಣ
ಧರ್ಮಸ್ಥಳ (ದಕ್ಷಿಣ ಕನ್ನಡ ಜಿಲ್ಲೆ), ಜಗಲಬೆಟ್ (ಉತ್ತರ ಕನ್ನಡ ಜಿಲ್ಲೆ), ಖಜೂರಿ
(ಕಲಬುರ್ಗಿ ಜಿಲ್ಲೆ), ಬೀದರ್, ನಿರ್ಣಾ (ಬೀದರ್ ಜಿಲ್ಲೆ), ಭಾಗಮಂಡಲ (ಕೊಡಗು ಜಿಲ್ಲೆ)
ಕಮ್ಮರಡಿ, ಕಳಸ, ಶೃಂಗೇರಿ (ಎಲ್ಲಾ ಚಿಕ್ಕಮಗಳೂರು ಜಿಲ್ಲೆ) ತಲಾ 4 ಸೆಂ.ಮೀ
ಮಂಕಿ, ಮಂಚಿಕೆರೆ, ಕುಮಟಾ, ಜೋಯಿಡಾ (ಎಲ್ಲವೂ ಉತ್ತರ ಕನ್ನಡ ಜಿಲ್ಲೆ), ಪಣಂಬೂರು, ಮಂಗಳೂರು (ದಕ್ಷಿಣ ಕನ್ನಡ ಜಿಲ್ಲೆ)
ಮಂಠಾಳ (ಬೀದರ್ ಜಿಲ್ಲೆ), ವಿರಾಜಪೇಟೆ (ಕೊಡಗು ಜಿಲ್ಲೆ) ತಲಾ 3; ಹೊನಾವರ, ಶಿರಾಲಿ, ಕುಂದಾಪುರ, ಉಡುಪಿ (ಎರಡೂ ಉಡುಪಿ ಜಿಲ್ಲೆ)
ಯಲ್ಲಾಪುರ, ಗೇರ್ಸೊಪ್ಪ (ಎರಡೂ ಉತ್ತರ ಕನ್ನಡ ಜಿಲ್ಲೆ), ಬೆಳಗಾವಿ ವಿಮಾನ ನಿಲ್ದಾಣ, ಲೋಂಡಾ, ಗುಂಜ್ (ಎರಡೂ ಬೆಳಗಾವಿ ಜಿಲ್ಲೆ)
ಭಾಲ್ಕಿ (ಬೀದರ್ ಜಿಲ್ಲೆ), ಅಫಜಲಪುರ (ಕಲಬುರ್ಗಿ ಜಿಲ್ಲೆ), ಕೊಪ್ಪ (ಚಿಕ್ಕಮಗಳೂರು ಜಿಲ್ಲೆ), ಮಡಿಕೇರಿ, ನಾಪೋಕ್ಲು ಮೂರ್ನಾಡು (ಎರಡೂ ಕೊಡಗು ಜಿಲ್ಲೆ)
ಅಗ್ರಹಾರ(ಕೋಣಂದೂರು) (ಶಿವಮೊಗ್ಗ ಜಿಲ್ಲೆ) ತಲಾ 2: ಮೂಲ್ಕಿ (ದಕ್ಷಿಣ ಕನ್ನಡ ಜಿಲ್ಲೆ), ಬೆಳಗಾವಿ ನಗರ, ಆಳಂದ, ಅಡಕಿ, ಯಡ್ರಾಮಿ
ಕಮಲಾಪುರ (ಎಲ್ಲಾ ಕಲಬುರ್ಗಿ ಜಿಲ್ಲೆ), ಹುಂಚದಕಟ್ಟೆ, ಲಿಂಗನಮಕ್ಕಿ, ತಾಳಗುಪ್ಪ (ಎಲ್ಲಾ ಶಿವಮೊಗ್ಗ ಜಿಲ್ಲೆ)
ಪೊನ್ನಂಪೇಟೆ (ಕೊಡಗು ಜಿಲ್ಲೆ), ಸೋಮವಾರಪೇಟೆ (ಕೊಡಗು ಜಿಲ್ಲೆ), ಚಿಕ್ಕಮಗಳೂರು ತಲಾ 1 ಸೆಂ.ಮೀ ಮಳೆಯಾಗಿದೆ
ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
Share your comments