ಚಿನ್ನದ ಬೆಲೆಯಲ್ಲಿ ಪ್ರತಿದಿನವೂ ಏರಿಳಿತವಾಗುತ್ತಿರುತ್ತದೆ. ಇದೀಗ ಚಿನ್ನದ ಬೆಲೆ ಕಳೆದ ವಾರಕ್ಕೆ ಹೋಲಿಕೆ ಮಾಡಿ ನೋಡುವುದಾದರೆ, ಗಣನೀಯ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ.
ಚಿನ್ನ ಹಾಗೂ ಬೆಳ್ಳಿಯನ್ನು ಮಧ್ಯಮ ವರ್ಗದ ಜನರು ಹೆಚ್ಚಾಗಿ ಬೆಲೆ ಕಡಿಮೆ ಇದ್ದಾಗಲೇ ಖರೀದಿ ಮಾಡುತ್ತಾರೆ.
ಉಳಿದಂತೆ ಮದುವೆ ಯಾವುದಾದರೂ ಶುಭ ಸಮಾರಂಭಗಳಲ್ಲಿ ಚಿನ್ನ ಖರೀದಿ ಮಾಡುವುದು ಹೆಚ್ಚು.
ಇದೇ ಕಾರಣಕ್ಕೆ ಚಿನ್ನ ಮತ್ತು ಬೆಳ್ಳಿ ಪ್ರಿಯರು ಇದರ ದರವನ್ನೂ ನಿರಂತರವಾಗಿ ಗಮನಿಸುತ್ತಲೇ ಇರುತ್ತಾರೆ.
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏನಾದರೂ ಇಳಿಕೆ ಕಂಡು ಬಂದರೆ ಅವರಿಗೆ ಸಂತೋಷ.
ಏರಿಕೆ ಕಂಡು ಬಂದರೆ ದರ ಇಳಿಯುವ ವರೆಗೂ ಅದಕ್ಕಾಗಿ ಕಾದು ನೋಡುತ್ತಾರೆ.
ಇನ್ನು ಚಿನ್ನ ಮತ್ತು ಬೆಳ್ಳಿಯ ಈಗ ಇರುವ ದರವನ್ನು ಗಮನಿಸುವುದಾದರೆ, ಕಳೆದ ವಾರಕ್ಕೆ ಹೋಲಿಕೆ ಮಾಡಿ ನೋಡಿದರೆ,
ಈ ವಾರ ಚಿನ್ನದ ಬೆಲೆಯು ಏರಿಕೆ ಆಗಿದೆ. ಅಷ್ಟೇ ಅಲ್ಲದೇ ಬೆಳ್ಳಿ ಪ್ರತಿ ಕೆಜಿಗೆ 76,0000 ಸಾವಿರದಿಂದ ಇದೀಗ 78000 ಸಾವಿರಕ್ಕೂ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಸೋಮವಾರ 22 ಕ್ಯಾರಟ್ ಚಿನ್ನದ ಬೆಲೆಯು 10 ಗ್ರಾಂಗೆ 55,150 ಆಗಿದೆ.
ದೆಹಲಿಯಲ್ಲಿ ಸೋಮವಾರ ಚಿನ್ನದ ಬೆಲೆ 55,300 ರೂ. ತಲುಪಿರುವುದು ವರದಿ ಆಗಿದೆ.
ಒಂದು ಗ್ರಾಂ ಚಿನ್ನದ ಬೆಲೆಯು ಮಾರುಕಟ್ಟೆಯಲ್ಲಿ 22 ಕ್ಯಾರಟ್ ಆಭರಣ ಚಿನ್ನದ ಬೆಲೆಯು 5,515 ರೂಪಾಯಿ ಇದ್ದರೆ,
24 ಕ್ಯಾರಟ್ ಚಿನ್ನದ ಅಪರಂಜಿ ಬೆಲೆಯು 6,016 ರೂಪಾಯಿ ಆಗಿರುವುದು ವರದಿ ಆಗಿದೆ.
ಅದೇ ರೀತಿ ಎಂಟು ಗ್ರಾಂ 8GM 22 ಕ್ಯಾರಟ್ ಜ್ಯೂವೆಲರಿ ಚಿನ್ನದ ಬೆಲೆಯು 44,120 ರೂಪಾಯಿ ಆಗಿದೆ.
24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 48,128 ರೂಪಾಯಿ ತಲುಪಿದೆ.
ಅದೇ ರೀತಿ 10 ಗ್ರಾಂ 22 ಕ್ಯಾರಟ್ ಜ್ಯುವೆಲರಿ ಚಿನ್ನದ ದರವು 55,150 ಸಾವಿರ ರೂಪಾಯಿ,
24 ಕ್ಯಾರಟ್ ಚಿನ್ನದ ದರವು (ಅಪರಂಜಿ) 60,160 ಸಾವಿರ ತಲುಪಿದೆ!
ನೂರು ಗ್ರಾಂ 100GMನ 22 ಕ್ಯಾರಟ್ ಜ್ಯುವೆಲರಿ ಬಂಗಾರದ ಮೊತ್ತವು ಬರೋಬ್ಬರಿ 5,51,500 ಆಗಿದೆ.
24 ಕ್ಯಾರಟ್ ಚಿನ್ನದ ಬೆಲೆ (ಅಪರಂಜಿ)ಯ ದರವನ್ನು ನೋಡುವುದಾದರೆ ಅದು 6,01,600 ರೂಪಾಯಿಯನ್ನು ಮುಟ್ಟಿದೆ.
ಬೆಳ್ಳಿ ಬೆಲೆ ಹೇಗಿದೆ ?
ಚಿನ್ನದ ದರವು ದುಬಾರಿ ಆಗುವುದರೊಂದಿಗೆ ಇದೀಗ ಬೆಳ್ಳಿ ಬೆಲೆಯು ಹೆಚ್ಚಳವಾಗುತ್ತಿದೆ.
ಚಿನ್ನದ ಬೆಲೆ ದುಬಾರಿ ಆಗಿದ್ದು, ಇದರೊಂದಿಗೆ ಬೆಳ್ಳಿ ಬೆಲೆಯು ಸಹ ಹೆಚ್ಚಳವಾಗುತ್ತಿದೆ.
ಇದೀಗ ಒಂದು ಕೆ.ಜಿ ಬೆಳ್ಳಿ ಬೆಲೆಯು 78,000 ಸಾವಿರ ರೂಪಾಯಿ ಆಗಿದೆ.
ಇನ್ನು ದೇಶದಲ್ಲಿ ಬೆಳ್ಳಿಯ ಬೆಲೆಯು ಅಂತರರಾಷ್ಟ್ರೀಯ ದರವನ್ನು ಆಧರಿಸಿರುತ್ತದೆ.
ಬೆಂಗಳೂರಿನಲ್ಲಿ ಹೇಗಿದೆ ಬೆಳ್ಳಿಯ ಬೆಲೆ ?
ಬೆಂಗಳೂರಿನಲ್ಲಿಯೂ ಬೆಳ್ಳಿಯ ಬೆಲೆಯಲ್ಲಿ ಏರಿಳಿತವಾಗಿದೆ.
ಆದರೆ, ಭಾನುವಾರ ಬೆಂಗಳೂರಿನಲ್ಲಿ ಇದ್ದ ಬೆಲೆಯನ್ನು ನೋಡುವುದಾದರೆ, ಬೆಳ್ಳಿ ಬೆಲೆಯು ಭಾನುವಾರಕ್ಕಿಂತ ಇಳಿಕೆ ಆಗಿದೆ.
ಸೋಮವಾರ ಬೆಳ್ಳಿಯ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಆಗಿದೆ.
ಬೆಳ್ಳಿ ಬೆಲೆಯು ಸೋಮವಾರ ಪ್ರತಿ 10gm, 100gm, 1000gm ಬೆಳ್ಳಿ ಬೆಲೆಗೆ ಈ ರೀತಿ ಇದೆ.
765 ರೂಪಾಯಿ, 7,650 ರೂಪಾಯಿ ಹಾಗೂ 76,500 ರೂಪಾಯಿ ಇರುವುದು ವರದಿ ಆಗಿದೆ.
ದೇಶದ ಉಳಿದ ಮಹಾನಗರಗಳಲ್ಲೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿರುವುದು ವರದಿ ಆಗಿದೆ.
Share your comments