1. ಸುದ್ದಿಗಳು

ಇಂದು ಸಂಜೆ 4 ಗಂಟೆ ಪಿಯು ಫಲಿತಾಂಶ ಫಲಿತಾಂಶ onlineನಲ್ಲೂ ಲಭ್ಯ

ಕೊರೋನಾ ಹಿನ್ನೆಲೆಯಲ್ಲಿ ಪರೀಕ್ಷೆಯಿಲ್ಲದೆ ಪಾಸ್ ಆಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಜುಲೈ 20 ರಂದು ಮಂಗಳವಾರ ಪ್ರಕಟವಾಗಲಿದೆ.

2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಫಲಿತಾಂಶ ಸಾಯಂಕಾಲ 4 ಗಂಟೆಗೆ ಪ್ರಕಟವಾಗಲಿದೆ.  ಕೊರೋನಾದಿಂದಾಗಿ ಈ ವರ್ಷ ಎಸ್ಎಸ್ಎಲ್ಸಿ ಮತ್ತು ಪ್ರಥಮ ಪಿಯುಸಿ ಹಾಗೂ ಶೈಕ್ಷಣಿಕ ಚಟುವಟಿಕೆಗೆ ನೀಡಿದ ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡಲು ನಿರ್ಣಯಿಸಲಾಗಿದೆ.

ಕೊರೊನಾ ಹಿನ್ನೆಲೆ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದೇ ಎಲ್ಲಾ ವಿದ್ಯಾರ್ಥಿಗಳನ್ನ ಪಾಸ್ ಮಾಡಲಾಗಿತ್ತು. ಅಂಕಗಳನ್ನು ನೀಡಲು ವಿದ್ಯಾರ್ಥಿಯು ಎಸ್‍ಎಸ್‍ಎಲ್‍ಸಿಯಲ್ಲಿ ಪಡೆದ ಅಂಕಗಳಲ್ಲಿ ಶೇ.45 ಅಂಕ, ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳಲ್ಲಿ ಶೇ.45 ಅಂಕ ಹಾಗೂ ಶೇ.10 ಅಂಕ ಇಂಟರ್ನಲ್ ಅಸೆಸ್ಮೆಂಟ್ ಅಂಕಗಳನ್ನು ಸೇರಿಸಿ ಫಲಿತಾಂಶ ನೀಡಲಾಗ್ತಿದೆ

ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶಕುಮಾರ ಪಿಯುಸಿ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ https://karresults.nic.in/ ವೆಬ್ ಸೈಟ್ ನಲ್ಲಿ ಸಾಯಂಕಾಲ 4 ರ ನಂತರ ಮೊಬೈಲ್ ನಲ್ಲಿಯೇ ವೀಕ್ಷಿಸಬಹುದು.

ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ನಮೂದಿಸಬೇಕು. ಫಲಿತಾಂಶಕ್ಕಾಗಿ ಅಗತ್ಯವಾದ ನೋಂದಣಿ ಸಂಖ್ಯೆಯನ್ನು ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗಿದೆ. ಒಂದು ವೇಳೆ ನೋಂದಣಿ ಸಂಖ್ಯೆ ಸಿಗದಿದ್ದರೆ ವಿದ್ಯಾರ್ಥಿಗಳು http://pue.kar.nic.in  ಈ ಲಿಂಕ್ ಮೇಲೆ ಕ್ಲಿಕ್ ಮಾಡಿ know my register number  ಒತ್ತಿ ಕಲಿಯುತ್ತಿರುವ ಜಿಲ್ಲೆ, ಕಾಲೇಜು ಆಯ್ಕೆ ಮಾಡಿಕೊಂಡು ನೋಂದಣಿ ಸಂಖ್ಯೆ ಪಡೆಯಬಹುದು. ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷೆ ಬಳಿಕ ಫಲಿತಾಂಶ ಪ್ರಕಟವಾಗಲಿದೆ.

ಪ್ರಸಕ್ತ ವರ್ಷ ಪಿಯುಸಿ ದ್ವಿತೀಯ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಲ್ಲದೆ ಪಾಸ್ ಮಾಡಲಾಗಿದೆ.  ಹೊಸ (ಪ್ರೇಷರ್ಸ್) ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಈ ಬಾರಿಯ ದ್ವಿತಿಯೀ ಪಿಯುಸಿ ಪರೀಕ್ಷೆ ರದ್ದುಪಡಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಆ ಮಕ್ಕಳ ಎಸ್ಎಸ್ಎಲ್ಸಿ  ಮತ್ತು ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶ ಆಧರಿಸಿ ದ್ವಿತಿಯೀ ಪಿಯುಸಿ ಫಲಿತಾಂಶ ಸಿದ್ದಪಡಿಸಿದೆ.

ಫ್ರೆಷರ್ ಅಭ್ಯರ್ಥಿಗಳು ಮತ್ತು ರಿಪೀಟರ್ಸ್ ಅಭ್ಯರ್ಥಿಗಳು ಸೇರಿ ಸುಮಾರು 5.5 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಇಂದು ಪ್ರಕಟವಾಗಲಿದೆ.

Published On: 20 July 2021, 10:43 AM English Summary: Secondary PUC result

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.