1. ಸುದ್ದಿಗಳು

Second PUC result 2023 : ನಾಳೆ 2nd ಪಿಯುಸಿ ಫಲಿತಾಂಶ ಪ್ರಕಟ! ಇಲ್ಲಿದೆ ಡಿಟೇಲ್ಸ್‌..

Kalmesh T
Kalmesh T
Second PUC result 2023 : result will be announced tomorrow

Second PUC result 2023: ರಾಜ್ಯದ ಬಹುಪಾಲು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದಿದ್ದು ವಿದ್ಯಾರ್ಥಿಗಳಿಗೆ ನಾಳೆ ಸಿಹಿ ಮತ್ತು ಕಹಿ ಸುದ್ದಿಗಳು ದೊರೆಯಲಿವೆ. ನಾಳೆ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಬರಲಿದೆ.

ರಾಜ್ಯದ ಬಹುಪಾಲು ದ್ವಿತೀಯ ಪಿಯುಸಿ (2nd PUC Result 2023) ಪರೀಕ್ಷೆಯನ್ನು ಬರೆದಿದ್ದು ವಿದ್ಯಾರ್ಥಿಗಳಿಗೆ ನಾಳೆ ಸಿಹಿ ಮತ್ತು ಕಹಿ ಸುದ್ದಿಗಳು ದೊರೆಯಲಿವೆ. ನಾಳೆ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಬರಲಿದೆ.

ಪಿಯುಸಿ ವಿದ್ಯಾರ್ಥಿಗಳು ಇಷ್ಟು ದಿನದಿಂದ ಕಾತುರದಿಂದ ಕಾಯುತಿದ್ದ ದಿನ ನಾಳೆಗೆ ಮುಕ್ತಾಯವಾಗಲಿದೆ. ಹೌದು, ನಾಳೆ ಅಂದರೆ 21/04/2013 ರಂದು ದ್ವಿತೀಯ ಪಿಯುಸಿ ಪರೀಕ್ಷೆ ಪ್ರಕಟವಾಗಲಿದೆ.

ನಾಳೆ ಬೆಳಿಗ್ಗೆ ಸುಮಾರು 11 ಗಂಟೆ ಹೀಗೆ ಸರ್ಕಾರಿ ವೆಬ್ ಸೈಟ್‌ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. 

ಕಳೆದ ಮಾರ್ಚ್ ತಿಂಗಳಿನಲ್ಲಿ ದ್ವಿತೀಯ ಪಿಯುಸಿ (2nd PUC Result 2023) ಪರೀಕ್ಷೆಯನ್ನು ನಡೆಸಲಾಗಿತ್ತು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಇದರ ಬಗ್ಗೆ ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ. 

ಈ ಕುರಿತು ನಾಳೆ ಶುಕ್ರವಾರ ಮುಂಜಾನೆ 10 ಗಂಟೆಗೆ ಸುದ್ದಿಗೋಷ್ಟಿಯಲ್ಲಿ ಈ ಕುರಿತಾಗಿ ವಿಷಯ ಪ್ರಕಟವಾಗಲಿದೆ.

ಪಿಯುಸಿ ವಿದ್ಯಾರ್ಥಿಗಳು ನಿಮ್ಮ ಫಲಿತಾಂಶಕ್ಕಾಗಿ ಪರಿಶೀಲಿಸಬೇಕಾದರೆ, ಈ www.karresults.nic.in  ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

2023ಕ್ಕೆ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಅಂಕಿ-ಸಂಖ್ಯೆ ರಾಜ್ಯದಲ್ಲಿ ಈ ಬಾರಿ 5,716 ಪಿಯು ಕಾಲೇಜುಗಳಿಂದ ಒಟ್ಟು 7,26,195 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿದ್ದು, ಇವರಲ್ಲಿ 3,63,698 ವಿದ್ಯಾರ್ಥಿಗಳು ಮತ್ತು 3,62.497 ವಿದ್ಯಾರ್ಥಿನಿಯರು ಇದ್ದಾರೆ.

ಇದರಲ್ಲಿ 6.29 ಲಕ್ಷ ವಿದ್ಯಾರ್ಥಿಗಳು ಹೊಸಬರು (Freshers) , 25,847 ಖಾಸಗಿ (Private) ಮತ್ತು 70,589 ಪುನರಾವರ್ತಿತ (Repeated) ವಿದ್ಯಾರ್ಥಿಗಳಿದ್ದಾರೆ.
ಕಲಾ ವಿಭಾಗದಿಂದ (Arts) 2,34,815, ವಾಣಿಜ್ಯ (Commerce)- 2,47,260 ಮತ್ತು ವಿಜ್ಞಾನದಿಂದ (Science) 2,44,120 ಇಷ್ಟೆಲ್ಲ ವಿದ್ಯಾರ್ಥಿಗಳಾಗಿದ್ದಾರೆ.

ಪರೀಕ್ಷಾ ಕಾರ್ಯಕ್ಕೆ 1,109 ಸಹ ಮುಖ್ಯ ಅಧೀಕ್ಷಕರು, 64 ಜಿಲ್ಲಾ ಜಾಗೃತ ದಳ, 525 ತಾಲೂಕು ಜಾಗೃತ ದಳ ಮತ್ತು 2,373 ವಿಶೇಷ ಜಾಗೃತ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಈ ಹಿಂದೆ ಮೌಲ್ಯಮಾಪನದ ಸಮಯದಲ್ಲಿ KSEABಯ ಮೂಲಗಳ ಪ್ರಕಾರ, ಹಿಂದಿನ ಯೋಜನೆಯು ಮೌಲ್ಯಮಾಪನ ಕಾರ್ಯವನ್ನು 10 ರಿಂದ 12 ದಿನಗಳಲ್ಲಿ ಪೂರ್ಣಗೊಳಿಸಿ ಏಪ್ರಿಲ್ ಅಂತ್ಯದ ವೇಳೆಗೆ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ ಎಂದು ತಿಳಿಸಲಾಗಿತ್ತು.

Published On: 20 April 2023, 07:15 PM English Summary: Second PUC result 2023 : result will be announced tomorrow

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.