1. ಸುದ್ದಿಗಳು

ನಾವು ಬಳಸುತ್ತಿರುವ ಕಳೆ ನಾಶಕ ಮುಂದೊಂದು ದಿನ ಕೃಷಿಯನ್ನೇ ನಾಶ ಮಾಡಬಹುದು!

ರೈತರು ರಾಸಾಯನಿಕ ಕೃಷಿ ಪದ್ಧತಿಯ ದಾಸರಾಗಿದ್ದಾರೆ. ರಾಸಾಯನಿಕ ಕೃಷಿ ಎಂಬುದು ಭಾರತೀಯ ಕೃಷಿ ಪದ್ಧತಿಯಲ್ಲಿ ಕೃಷಿಕರನ್ನು ಆವರಿಸಿಕೊಂಡಿರುವ ಅತಿ ದೊಡ್ಡ ವ್ಯಸನವಾಗಿದೆ. ಸ್ವತಃ ಕೃಷಿಕರೇ ಈ ವ್ಯಸನದಿಂದ ಹೊರಬರಲು ಬಯಸಿದರೂ, ಅವರನ್ನು ಅಲುಗಾಡಲು ಕೂಡ ಬಿಡದಂತೆ ಗಟ್ಟಿಯಾಗಿ ತನ್ನ ಕಬಂದ ಬಾಹುಗಳಲ್ಲಿ ಹಿಡಿದಿಟ್ಟಿರುವುದು ಈ ರಾಸಾಯನಿಕ ಕೃಷಿ.

ಇದರಿಂದಾಗುತ್ತಿರುವ ಪರಿಣಾಮಗಳು ಒಂದೆರಡಲ್ಲ; ನಾವಿಂದು ಎದುರಿಸುತ್ತಿರುವ ನೂರಾರು ಅನಾರೋಗ್ಯ ಸಮಸ್ಯೆಗಳು, ಕಾಯಿಲೆಗಳು, ಪ್ರಕೃತಿ ವಿಕೋಪಗಳು, ಪ್ರಾಕೃತಿಕ ಅಸಮತೋಲನ, ಜಾಗತಿಕ ತಾಪಮಾನ ಏರಿಕೆಯಂತಹ ಬೃಹತ್ ಹಾಗೂ ಗಂಭೀರ ಸಮಸ್ಯೆಗಳಿಗೆ ಇದೇ ರಾಸಾಯನಿಕ ಕೃಷಿ ಮುಲ ಕಾರಣವಾಗಿದೆ.

ಈ ವಾಸ್ತವ ಸತ್ಯದ ಅರಿವು ಕೃಷಿ ಸಮುದಾಯದ ಪ್ರತಿಯೊಬ್ಬ ಸಣ್ಣ ಕೃಷಿಕನಿಗೂ ಇದೆ. ಆದರೆ, ರಾಸಾಯನಿಕಗಳ ಬಳಕೆ ಬಿಟ್ಟು ಹರಬರುವ ಗಟ್ಟಿ ಮನಸ್ಸನ್ನು ಕೃಷಿಕರು ಮಾಡುತ್ತಿಲ್ಲ. ಪರಿಣಾಮ, ಮುಂದೊಂದು ದಿನ ಭೂಮಿಯಿಂದ ಕೃಷಿ ಎಂಬ ಕೃಷಿಯೇ ಅಳಿಸಿ ಹೋಗುವ ಅಪಾಯ ಎದುರಾಗಲಿದೆ. ಒಂದು ಕಡ್ಡಿ ಹುಲ್ಲನ್ನು ಕೂಡ ಬೆಳೆಯಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ವಿಜ್ಞಾನಿಗಳ ಸಮುದಾಯ ಎಚ್ಚರಿಸಿದೆ.

ಹೌದು, ನಾವಿಂದು ನಮ್ಮ ಬೆಳೆಗಳಿಗೆ ಮಿತಿ ಮೀರಿ ರಾಸಾಯನಿಕಗಳನ್ನು ಸಿಂಪಡಿಸುತ್ತಿದ್ದೇವೆ. ಅದರಲ್ಲೂ ಕಳೆ ನಾಶಕದ ರೂಪದಲ್ಲಿ ನಾವು ಬಳಸುತ್ತಿರುವ ಗ್ಲೈಫೋಸೆಟ್ ಎಂಬ ವಿಷಕಾರಿ ರಾಸಾಯನಿಕ ತಂದೊಡ್ಡುತ್ತಿರುವ ಅಪಾಯಗಳ ಅರಿವು ರೈತ ಸಮುದಾಯಕ್ಕೆ ಆಗುತ್ತಲೇ ಇಲ್ಲ. ಕೃಷಿ ಭೂಮಿಯಲ್ಲಿ ಕಳೆ ಬೆಳೆಯುವುದು ಸಹಜ. ಹಾಗಂತ ಈ ಕಳೆ ಗಿಡಗಳು ಅಥವಾ ಹುಲು ಇಂದುನೆನ್ನೆಯಿAದ ಬೆಳೆಯುತ್ತಿಲ್ಲ. ಅನಾದಿಕಾಲದಿಂದಲೂ ಕೃಷಿ ಬೆಳೆಗಳ ನಡುವೆ ಕಳೆಗಳು ಹುಟ್ಟುತ್ತಲೇ ಇವೆ. ಆದರೆ ಪೂರ್ವಜನರು ಅವುಗಳ ನಿಯಂತ್ರಣಕ್ಕೆ ಹಲವು ವಿಧಾನಗಳನ್ನು ಅನುಸರಿಸುತ್ತಿದ್ದರು. ಅಂಥವುಗಳಲಲ್ಲಿ ಪ್ರಮುಖವಾದದ್ದು ಎಡೆ ಕುಂಟೆ ಹೊಡೆಯುವುದು. ಆದರೆ  ಈ ವಿಧಾನ ನೀರಾವರಿ ಬೆಳೆಗಳಲ್ಲಿ (ಭತ್ತ ಮೊದಲಾದುವು) ಸಾಧ್ಯವಿಲ್ಲದ ಕಾರಣ ಆಳುಗಳ ಮೂಲಕ ಇಲ್ಲವೇ ತಾವೇ ಗದ್ದೆಗಿಳಿದು ಕಳೆ ಕಿತ್ತು ಗದ್ದೆ ಹಸನು ಮಾಡುತ್ತಿದ್ದರು.

ಎಲ್ಲದಕ್ಕೂ ಕಳೆ ನಾಶಕವೇ ಅಸ್ತ್ರ

ಕೈಗಳಿಂದ ಕಳೆ ಕೀಳುವ ವಿಧಾನ ಇಂದು ಸಂಪೂರ್ಣ ನಶಿಸಿ ಹೋಗಿದೆ. ಹಗಲಿಗೊಂದು ಪ್ಲಾಸ್ಟಿಕ್ ಕ್ಯಾನ್ ನೇತು ಹಾಕಿಕೊಂಡು, ಅದರೊಳಗೆ  ಕಳೆ ನಾಶಕ ತುಂಬಿಕೊAಡು ನೆಲಕ್ಕೆ ಸಿಂಪಡಿಸುತ್ತಾ ಹೋಗುವ ರೈತ, ಮರು ದಿನ ಹೊಲಕ್ಕೆ ಬಂದು ಕಳೆಗಳೆಲ್ಲಾ ಒಣಗಿ ಹೋಗಿರುವುದನ್ನು ಕಂಡು ಖುಷಿ ಪಡುತ್ತಾನೆ. ಆದರೆ, ತಾನು ಹೀಗೆ ಬಳಸಿದ ಕಳೆ ನಾಶಕ, ಕಳೆಯೊಂದಿಗೆ ತನ್ನ ಹೊಲದಲ್ಲಿನ ಮಣ್ಣನ್ನೂ ಕೊಲ್ಲುತ್ತಿದೆ ಎಂಬುದನ್ನು ಮರೆಯುತ್ತಿದ್ದಾನೆ. ಒಂದೇ ದಿನದಲ್ಲಿ ಕಳೆ ಒಣಗುತ್ತದೆ ಎಂಬುದು ಈ ಕಳೆ ನಾಶಕ ಎಷ್ಟೊಂದು ಅಪಾಯಕಾರಿ ಎಂಬುದನ್ನು ಸಹ ಸೂಚಿಸುತ್ತದೆ. ಆದರೆ ಅದರತ್ತ ಕೃಷಿಕರು ಗಮನಹರಿಸುತ್ತಿಲ್ಲ. ಕಳೆ ತೆಗೆಯುವುದೊಂದೇ ಅವರ ಮೂಲ ಗುರಿಯಯಾಗಿದೆ. ಆದರೆ, ಈ ಅಪಾಯಕಾರಿ ಕಳೆ ನಾಶಕಗಳ ನಿರಂತರ ಬಳಕೆಯು ಭೂಮಿಯನ್ನು ನಿರ್ಜೀವ ಗೊಳಿಸುತ್ತದೆ. ಇದರಿಂದ ಬೆಳೆಗಳ ಬೆಳವಣಿಗೆ ಕುಂಠಿತವವಾಗಿ ಇಳುವರಿ ಸಹ ಕುಸಿಯುತ್ತದೆ. ಜೊತೆಗೆ ನಾವು ಸೇವಿಸುವ ಆಹಾರ ಕೂಡ ವಿಷಯುಕ್ತವಾಗುತ್ತದೆ.

ಏನಿದು ಗ್ಲೈಫೋಸೆಟ್?

ಇದೊಂದು ಪರಮಾಣು ವಿಕಿರಣದಿಂದ ಹೊರ ಸೂಸಿದ ಕಸ ಎನ್ನುತ್ತದೆ ವಿಜ್ಞಾನ ಲೋಕ. ಅಂದರೆ, ಈಗೇನು ನಾವು ಪರಮಾಣು ಯುದ್ಧದ ಭಯಾನಕತೆ ಬಗ್ಗೆ ಕೇಳಿ ಬೆಚ್ಚಿಬೀಳುತ್ತಿದ್ದೇವೋ ಅದೇ ರೀತಿಯ ಅಡ್ಡಪರಿಣಾಮಗಳನ್ನು ಉಂಟುಮಾಡಬಲ್ಲ ವಿನಾಶಕಾರಿ ಗುಣಗಳು ಈ ಗ್ಲೈಫೋಸೆಟ್‌ನಲ್ಲಿವೆ. ಸಂಶೋಧನೆಗಳ ಪ್ರಕಾರ ರೈತರು, ತೋಟಗಾರಿಕೆ, ಮಳೆ ಆಶ್ರಿತ ಬೆಳೆಗಳು ಹಾಗೂ ತರಕಾರಿ ಮತ್ತು ವಾಣಿಜ್ಯ ಬೆಳೆಗಳಲ್ಲಿ ಕಳೆ ನಿಯಂತ್ರಿಸಲು ಹೆಚ್ಚಾಗಿ ಬಳಸುತ್ತಿರುವ ರೌಂಡಪ್ ಎಂಬ ಕಳೆ ನಾಶಕವು ಅತ್ಯಂತ ಅಪಾಯಕಾರಿ ಎಂಬುದು ತಿಳಿದುಬಂದಿದೆ.

ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ದೇಶವು, ಪುಟ್ಟ ವಿಯೆಟ್ನಾಮ್ ವಿರುದ್ಧ ಅನಗತ್ಯ ಕ್ಯಾತೆ ತೆಗೆದು ಯುದ್ಧ ಮಾಡುತ್ತಿದ್ದಾಗ ಮ್ಯಾಂಗ್ರೊವ್ ಕಾಡುಗಳಲ್ಲಿ ವಾಸಿಸುತ್ತ ಅಮೆರಿಕನ್ ಸೈನ್ಯಕ್ಕೆ ವಿಯೆಟ್ನಾಮಿ ಸೈನಿಕರು ತೀವ್ರ ಪ್ರತಿರೋಧ ಒಡ್ಡುತ್ತಿದ್ದರು. ಈ ವೇಳೆ ವಿಯೆಟ್ನಾಮ್ ಸೈನಿಕರನ್ನು ಹುಡುಕಲು ಮ್ಯಾಂಗ್ರೊವ್ ಕಾಡಿನ ಮರಗಳಲ್ಲಿದ್ದ ದಟ್ಟ ಎಲೆಗಳನ್ನು ಕೃತಕವಾಗಿ ಉದುರಿಸಬೇಕಾಯಿತು. ಈ ಕಾರ್ಯಕ್ಕೆ ನೆರವಾದ ಅಮೆರಿಕದ ರಾಸಾಯನಿಕ ವಿಜ್ಞಾನಿಗಳು, ಜಲಜನಕ ಮತ್ತು ಇಂಗಾಲದ ಪರಮಾಣುಗಳನ್ನ ಅಭದ್ರಗೊಳಿಸಿ ‘ಗ್ಲೈಫೋಸೆಟ್' ಎಂಬ ವಿಷ ತಯಾರಿಸಿದರು. ಇದನ್ನ ಅಮೇರಿಕ ಸೇನೆ ‘ಏಜೆಂಟ್ ಆರೆಂಜ್’ ಎಂಬ ಗುಪ್ತ ಹೆಸರಿನಿಂದ ಕರೆಯಿತು. ಅಮೆರಿಕ ಸೇನೆಯು ಸಿಂಪಡಿಸಿದ ಈ ವಿಷ ರಾಸಾಯನಿಕದ ಪರಿಣಾಮಗಳಿಂದ ಚೇತರಿಸಿಕೊಳ್ಳಲು ವಿಯೆಟ್ನಾಮ್ ದೇಶಕ್ಕೆ ದಶಕಗಳೇ ಬೇಕಾದವು.

ಯುದ್ಧವೇನೊ ಮುಗಿಯಿತು. ಆದರೆ ಅಮೇರಿಕದ ಗೋದಾಮುಗಳಲ್ಲಿ ಭಾರೀ ಪರಮಾಣದ ಗ್ಲೈಫೋಸೆಟ್ ಸಂಗ್ರಹ ಹಾಗೇ ಉಳಿದಿತ್ತು. ಇದಕ್ಕೂ ಪರಿಹಾರ ಸೂಚಿಸಿದ ವಿಜ್ಞಾನಿಗಳು, ಕೃಷಿಯಲ್ಲಿ ಕಳೆ ನಾಶಕವಾಗಿ ಬಳಸುವ ಸಲಹೆ ನೀಡಿದರು. ಪರಿಣಾಮವಾಗಿ, ರೌಂಡಪ್ ಎಂಬ ಹೆಸರಿನ ಕಳೆ ನಾಶಕ ಅಮೆರಿಕದಾದ್ಯಂತ ಗುಲ್ಲೆಬ್ಬಿಸಿತು. ಅಲ್ಲಿನ ರೈತರೆಲ್ಲಾ ಈ ಕಳೆ ನಾಶಕ ಬಳಸಿ ಕಳೆಗಳ ವಿರುದ್ಧ ಯುದ್ಧ ಗೆದ್ದೆವೆಂಬ ಖುಷಿಯಲ್ಲಿ ತೇಲ ತೊಡಗಿದರು. ಆದರೆ, ವರ್ಷಗಳು ಉರುಳಿದಂತೆ ಅವರ ಭೂಮಿಯೆಲ್ಲಾ ಬರಡಾಗತೊಡಗಿತು ಇದಕ್ಕೆ ತಾವು ಬಳಸುತ್ತಿರುವ ಕಳೆ ನಾಶಕವೇ ಕಾರಣ ಎಂದರಿತ ರೈತರು ಅದನ್ನು ತಿರಸ್ಕರಿಸಿದರು.

ಈ ಗ್ಲೈಫೋಸೆಟ್ ಅನ್ನು ಕಳೆನಾಶಕವಾಗಿ ಬಳಸಿದ್ದ ಭೂ ಪ್ರದೇಶಗಳಲ್ಲಿ ಅಧ್ಯಯನ ನಡೆಸಿದ ಅಮೆರಿಕದ ಕೆಲ ವಿಜ್ಞಾನಿಗಳು, ಗ್ಲೈಫೋಸೆಟ್ ಒಂದು ‘ಕ್ಯಾನ್ಸರ್ ಕಾರಕ ವಿಷ’ ಎಂಬ ತೀರ್ಮಾನಕ್ಕೆ ಬಂದರು. ಬಳಿಕ ಅಮೆರಿಕದಲ್ಲಿ ಅದನ್ನು ಬ್ಯಾನ್ ಮಾಡಲಾಯಿತು. ಬಳಿಕ ಗ್ಲೈಫೋಸೆಟ್ ಕಳೆ ನಾಶಕ ಆಫ್ರಿಕ, ಏಷ್ಯಾ ರೀತಿಯ ಕೃಷಿ ಪ್ರಧಾನ ಖಂಡಗಳನ್ನು ಪ್ರವೇಶಿಸಿತು.

ಈಗ ನಾವು ಈ ವಿಷವನ್ನು ಅಮೃತದಂತೆ ಬಳಸುತ್ತಿದ್ದೇವೆ. ಇದರಿಂದ ನಮ್ಮ ಮಣ್ಣು ದಿನೇ ದಿನ ಸತ್ವ ಕಳೆದುಕೊಂಡು ನಿರ್ಜೀವವಾಗುತ್ತಿದೆ. ಇನ್ನೊಂದೆಡೆ, ಈ ಮಣ್ಣಿನಲ್ಲಿ ಬೆಳೆದ ಬೆಳೆಗಳನ್ನು ಸೇವಿಸಿದ ನಮ್ಮ ಮಕ್ಕಳು ಹಲವು ಗಂಭೀರ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿ ವಿಜ್ಞಾನಿಗಳ ತಂಡವೊಂದು ಈ ಗ್ಲೈಫೋಸೆಟ್ ವಿಷದ ಕುರಿತು ಅಧ್ಯಯನ ನಡೆಸಿದ್ದು, ‘ಈ ವಿನಾಶಕಾರಿ ಕಳೆನಾಶಕದ ಬಳಕೆ ಹೀಗೇ ಮುಂದುವರಿದರೆ ಕೆಲವೇ ದಶಕಗಳಲ್ಲಿ ಭಾರತದಲ್ಲಿನ ಭೂಮಿಯಲ್ಲಿ ಒಂದು ಹುಲ್ಲು ಕಡ್ಡಿಯನ್ನು ಸಹ ಬೆಳೆಯಲು ಆಗುವುದಿಲ್ಲ’ ಎಂದು ಎಚ್ಚರಿಕೆ ನೀಡಿದೆ.

Published On: 10 August 2021, 01:57 PM English Summary: se of harmful glyphosate will end agriculture in future say scientists

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.