1. ಸುದ್ದಿಗಳು

ಜೋಂಬಿ ವೈರಸ್‌ಗೆ ಜೀವ ತುಂಬಿದ ವಿಜ್ಞಾನಿಗಳು: ಶುರುವಾಯ್ತು ಹೊಸ ಆತಂಕ!

Hitesh
Hitesh
Scientists Bringing Zombie Virus to Life: A New Anxiety Begins!

ಕೃಷಿ ಹಾಗೂ ಪ್ರಮುಖ ಸುದ್ದಿಗಳನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿ ನ್ಯೂಸ್‌ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.

 Urea Fertilizer| ರೈತರಿಗೆ ಸಬ್ಸಿಡಿ ದರದಲ್ಲಿ ಯೂರಿಯಾ ಗೊಬ್ಬರ !  

1. ನೈಸರ್ಗಿಕ ವಿಕೋಪಕ್ಕೆ ತುತ್ತಾದ ಬೆಳೆಗಳಿಗೆ ಸಮಗ್ರ ವಿಮಾ ರಕ್ಷಣೆ: ಕೇಂದ್ರ ಸರ್ಕಾರ
2. ರಾಜ್ಯದ ವಿವಿಧೆಡೆ ಸಾಧಾರಣ ಮಳೆ; ಬಹುತೇಕ ಒಣಹವೆ
3. ಅಕಾಲಿಕ ಮಳೆ ಟೊಮೆಟೊ, ಈರುಳ್ಳಿ ಬೆಳೆಗಾರರಿಗೆ ಸಂಕಷ್ಟ!
4. ವೈವಾಹಿಕ ವಿವಾದ ಪ್ರಕರಣ: ಸುಪ್ರೀಂ ಕೋರ್ಟ್‌ನಿಂದ ಮಹಿಳಾ ಪೀಠ ರಚನೆ
5. ಸಿಲಿಕಾನ್‌ ಸಿಟಿಯಲ್ಲಿ ಚಿರತೆ ಪ್ರತ್ಯಕ್ಷ: ಜನರಲ್ಲಿ ಆತಂಕ
6. ಕೆಲವೇ ದಿನಗಳಲ್ಲಿ ಮೂರು ಬಣ್ಣದಲ್ಲಿ ಟ್ವಿಟರ್‌ ಖಾತೆ ಪರಿಶೀಲನೆ
7. ಜೋಂಬಿ ವೈರಸ್‌ಗೆ ಜೀವ ತುಂಬಿದ ವಿಜ್ಞಾನಿಗಳು: ಶುರುವಾಯ್ತು ಹೊಸ ಆತಂಕ!
8. ಜಲಮಂಡಳಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಕೋಟಿ
9. ಜಿ20 ಶೃಂಗಸಭೆಗೆ ಭಾರತದ ಅಧ್ಯಕ್ಷತೆ: 100 ಸ್ಮಾರಕಗಳಿಗೆ ದೀಪಾಲಂಕಾರ
10. ಕಬ್ಬು ಬೆಳೆಗಾರರ ಪ್ರತಿಭಟನೆ 11ನೇ ದಿನಕ್ಕೆ 

Heavy Rain ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದ ವಿವಿಧೆಡೆ ಮೂರು ದಿನ ಮಳೆ   

Scientists Bringing Zombie Virus to Life: A New Anxiety Begins!

1. ನೈಸರ್ಗಿಕ ವಿಕೋಪಗಳಿಂದ ನಷ್ವವಾದ ರೈತರ ಬೆಳೆಗಳಿಗೆ ಸಮಗ್ರ ವಿಮಾ ರಕ್ಷಣೆಯನ್ನು ಒದಗಿಸಲಾಗುವುದು. ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆ
ಯಡಿಯಲ್ಲಿ ಸಮಗ್ರ ವಿಮಾ ರಕ್ಷಣೆ ಕಲ್ಪಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪಿಎಂ ಫಸಲ್‌ ಭೀಮಾ ಯೋಜನೆಯು ವಿಶ್ವದ ಅತಿದೊಡ್ಡ ಬೆಳೆ ವಿಮಾ ಯೋಜನೆಯಾಗುವ ಹಾದಿಯಲ್ಲಿದೆ. ಅಷ್ಟೆ ಅಲ್ಲದೇ ಪ್ರತಿ ವರ್ಷ ಈ

ಯೋಜನೆಯಡಿ ಸುಮಾರು 5 ಕೋಟಿ ರೈತರ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.

ಕಳೆದ 6 ವರ್ಷಗಳಲ್ಲಿ ಕೇಂದ್ರ ಸರ್ಕಾರ ರೈತರಿಗೆ 25 ಕೋಟಿ ರೂಪಾಯಿ ಪ್ರೀಮಿಯಂ ರೀತಿಯಲ್ಲಿ ಪಾವತಿಸಿದೆ. ಇನ್ನೂ ಕಳೆದ ಅಕ್ಟೋಬರ್ನಲ್ಲಿ ರೈತರಿಗೆ 1.25 ಕೋಟಿ ರೂಪಾಯಿ ಪಾವತಿಸಲಾಗಿದೆ.

ಯೋಜನೆಯ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರೀಮಿಯಂನ್ನು ಭರಿಸುತ್ತವೆ.

ನಿಖರವಾದ ಕೃಷಿಯೊಂದಿಗೆ ಫಸಲ್ ಭೀಮಾ ಯೋಜನೆ ರೈತರನ್ನು ತಲುಪಲು ಮತ್ತು ಕಾರ್ಯಾಚರಣೆಗಳನ್ನು

ಹೆಚ್ಚಿಸುವಲ್ಲಿ ಡಿಜಿಟಲೀಕರಣ ಮತ್ತು ತಂತ್ರಜ್ಞಾನವು ಮಹತ್ವದ ಪಾತ್ರವನ್ನು ವಹಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. 

rain

--------------
2. ಗುರುವಾರ ಹಾಗೂ ಶುಕ್ರವಾರ ರಾಜ್ಯದಲ್ಲಿ ಬಹುತೇಕ ಒಣಹವೆ ಮುಂದುವರಿ 
ಯಲಿದೆ. ಉಳಿದಂತೆ ಅಲ್ಲಲ್ಲಿ ಚದುರಿದಂತೆ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಮುಂದಿನ 24 ಗಂಟೆಗಳಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಉತ್ತರ ಒಳನಾಡಿನಲ್ಲಿ ಒಣಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 
--------------
3. ಈಚೆಗೆ ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಹಾಗೂ ಟೊಮೆಟೊ ಬೆಲೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.

ಬೆಳೆಗಾರರು ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ಟೊಮೆಟೊ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವಂತೆ ರೈತಪರ ಸಂಘಟನೆಗಳು ಆಗ್ರಹಿಸಿವೆ.

ಈಚೆಗೆ ಯಶವಂತಪುರ ಎಪಿಎಂಸಿ ಯಾರ್ಡ್‌ನಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿಗೆ 2 ರೂಪಾಯಿ-10 ರೂಪಾಯಿಗಳವರೆಗೆ ಕುಸಿದಿತ್ತು.

ಇದೀಗ ಗುಣಮಟ್ಟದ ಆಧಾರದಲ್ಲಿ 12 ರೂಪಾಯಿಗಳಿಂದ 18 ರೂಪಾಯಿಗಳವರೆಗೆ ಇದೆ.

ಇನ್ನು ಕೋಲಾರ ಜಿಲ್ಲೆಯ ಹಣ್ಣು ಹಾಗೂ ತರಕಾರಿ ಬೆಳೆಗಾರರ ಸಂಘರ್ಷ ಸಮಿತಿಯು ಟೊಮೆಟೊ

ಹಾಗೂ ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.   
--------------
4. ವೈವಾಹಿಕ ವಿವಾದ, ಜಾಮೀನು ವಿಚಾರ ಸೇರಿದಂತೆ ವಿವಿಧ ಮಾದರಿಯ ಅರ್ಜಿಗಳ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಪ್ರತ್ಯೇಕ ಪೀಠವನ್ನು ರಚಿಸಿದೆ.

ಮುಖ್ಯ   ನ್ಯಾಯಮೂರ್ತಿ ಡಿ. ವೈ.ಚಂದ್ರಚೂಡ್ ಅವರು ನ್ಯಾಯಮೂರ್ತಿ ಬಿ. ವಿ. ನಾಗರತ್ನ ಅವರು ಸೇರಿದಂತೆ ಎಲ್ಲಾ ಮಹಿಳೆಯರನ್ನೊಳಗೊಂಡ ಪೀಠವನ್ನು ರಚಿಸಿದ್ದಾರೆ.

ವೈವಾಹಿಕ ವಿವಾದಕ್ಕೆ ಸಂಬಂಧಿಸಿದ 10 ವರ್ಗಾವಣೆ ಅರ್ಜಿಗಳು, 10 ಜಾಮೀನು ವಿಚಾರಗಳು ಸೇರಿದಂತೆ

32 ವಿಷಯಗಳ ವಿಚಾರಣೆ ಈ ಪೀಠದ ಮುಂಭಾಗದಲ್ಲಿದೆ.
ಪ್ರಸ್ತುತ ರಚನೆಯಾಗಿರುವ ಮಹಿಳಾ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ

ಹಿಮಾ ಕೊಹ್ಲಿ, ಬಿ.ವಿ. ನಾಗರತ್ನ ಮತ್ತು ತ್ರಿವೇದಿ ಅವರನ್ನೊಳಗೊಂಡ ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ.

ಈ ರೀತಿಯಾಗಿ ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಮೂರನೇ ಬಾರಿಗೆ ಎಲ್ಲಾ ಮಹಿಳೆಯರನ್ನೊಳಗೊಂಡ ಪೀಠ ರಚಿಸಲಾಗಿದೆ.  
--------------  
5. ಬೆಂಗಳೂರಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ತುರಹಳ್ಳಿ ಅರಣ್ಯ ಪ್ರದೇಶ ಮತ್ತು ದೇವನಹಳ್ಳಿ

ಸುತ್ತಮುತ್ತ  ಚಿರತೆ ಪ್ರತ್ಯಕ್ಷವಾಗಿರುವುದು ವರದಿ ಆಗಿದೆ. ಈ ಭಾಗದಲ್ಲಿ ನಾಲ್ಕು ಚಿರತೆಗಳು ನಡೆದಾಡುತ್ತಿರುವುದು

ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ತುರಹಳ್ಳಿ ಅರಣ್ಯ ಪ್ರದೇಶದಲ್ಲಿ

ಬೋನ್ ಇರಿಸುವ ಮೂಲಕ ಚಿರತೆ ಸೆರೆಗೆ ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರೆ.   
--------------
6. ಟ್ವಿಟರ್‌ ಖಾತೆ ಪರಿಶೀಲನೆ ಕಾರ್ಯ ಶೀಘ್ರ ಪ್ರಾರಂಭವಾಗಲಿದೆ ಎಂದು ಸಂಸ್ಥೆಯ ಸಿಇಒ ಎಲಾನ್ ಮಸ್ಕ್ ತಿಳಿಸಿದ್ದಾರೆ.

ಮುಂದಿನ ವಾರದಿಂದ ತಾತ್ಕಾಲಿಕವಾಗಿ ಪರಿಶೀಲನಾ ಕಾರ್ಯ ಪ್ರಾರಂಭಿಸುತ್ತಿದ್ದೇವೆ. ಕಂಪನಿಗಳಿಗೆ ಚಿನ್ನದ ಬಣ್ಣ,

ಸರ್ಕಾರಕ್ಕೆ ಬೂದು ಬಣ್ಣ ಮತ್ತು ವ್ಯಕ್ತಿಗಳಿಗೆ (ಸೆಲೆಬ್ರಿಟಿ ಅಥವಾ ಇಲ್ಲದಿರಲಿ) ನೀಲಿ ಬಣ್ಣ ಇರಲಿದೆ ಎಂದು ತಿಳಿಸಿದ್ದಾರೆ.

 Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!
--------------  

7. ಜಗತ್ತು ಕೊರೊನಾ ಸೋಂಕು ತಂದೊಡ್ಡಿದ ಆಪಾಯಗಳಿಂದ ಈಗಷ್ಟೇ ಚೇತರಿಕೆ ಕಂಡಿದೆ. ಇದರ ಬೆನ್ನಲ್ಲೇ ಹೊಸದೊಂದು ಆತಂಕ ಶುರುವಾಗಿದೆ.

ಫ್ರೆಂಚ್‌ನ ವಿಜ್ಞಾನಿಗಳ ತಂಡ 50 ವರ್ಷ ಹಳೆಯ ಜಾಂಬಿ ವೈರಸ್‌ಗೆ ಜೀವ ತುಂಬುವ ಮೂಲಕ ಹೊಸ ಆತಂಕ ಸೃಷ್ಟಿಸಿದ್ದಾರೆ. 

ಸುಮಾರು 48,500 ವರ್ಷಗಳ ಹಿಂದೆ ಸರೋವರದ ಅಡಿಯಲ್ಲಿ ಹೂತಿದ್ದ ವೈರಸ್ ಗಳಿಗೆ ಈಗ ಮರು ಜೀವ ನೀಡಲಾಗಿದೆ.

ಜೋಂಬಿ ವೈರಸ್‌ಗಳು ಎಂದು ಕರೆಯುವ   13 ಹೊಸ ರೋಗಕಾರಕಗಳನ್ನು ಯುರೋಪಿಯನ್

ಸಂಶೋಧಕರು ರಷ್ಯಾದ ಸೈಬೀರಿಯಾ ಪ್ರದೇಶದಲ್ಲಿ ಪುನರುಜ್ಜೀವನಗೊಳಿಸಿದ್ದಾರೆ ಎಂದು ಅಮೆರಿಕದ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

--------------  
8. ಬೆಂಗಳೂರು ಜಲಮಂಡಳಿ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ರೂ. ದೇಣಿಗೆ ಹಸ್ತಾಂತರಿಸಲಾಯಿತು.

ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೇಶ್ ಸಿಂಗ್, ಮುಖ್ಯಮಂತ್ರಿಯವರ ಪ್ರಧಾನ

ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ಎನ್.

ಜಯರಾಂ ಸೇರಿದಂತೆ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದರ ಸಂಭ್ರಮಾಚರಣೆಯ ಭಾಗವಾಗಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಜಿ20 ಲಾಂಛನವನ್ನು

ಹೊಂದಿರುವಂತೆ ದೇಶದ 100 ಸ್ಮಾರಕಗಳು ದೀಪಾಲಂಕಾರದಿಂದ ಕಂಗೊಳಿಸಲಿದೆ.  

ವಸುಧೈವ ಕುಟುಂಬಕಂ ಎಂಬ ಧ್ಯೇಯವಾಕ್ಯದೊಂದಿಗೆ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎನ್ನುವುದು

ಭಾರತದ ಜಿ20 ಅಧ್ಯಕ್ಷತೆಯ ಥೀಮ್ ಆಗಿದೆ. ಈ ಥೀಮ್ ಮಾನವ, ಪ್ರಾಣಿ, ಸಸ್ಯ ಮತ್ತು ಸೂಕ್ಷ್ಮಜೀವಿಗಳು

ಮತ್ತು ಭೂಮಿಯ ಮೇಲೆ ಮತ್ತು ವಿಶಾಲ ವಿಶ್ವದಲ್ಲಿ ಅವುಗಳ ಪರಸ್ಪರ ಸಂಬಂಧ ಸೇರಿದಂತೆ ಎಲ್ಲಾ ಜೀವನದ

ಮೌಲ್ಯವನ್ನು ಎತ್ತಿಹಿಡಿಯಲಿದೆ. ಇನ್ನು ಈ ವರ್ಷದ ಅಧ್ಯಕ್ಷೀಯ ಅವಧಿಯಲ್ಲಿ ಭಾರತವು

50 ಕ್ಕೂ ಹೆಚ್ಚು ನಗರಗಳು ಮತ್ತು 32 ವಿವಿಧ ವಲಯಗಳಲ್ಲಿ ರಾಷ್ಟ್ರಾದ್ಯಂತ 200 ಸಭೆಗಳನ್ನು ಆಯೋಜಿಸಲು ನಿರ್ಧರಿಸಿದೆ.
--------------
government employees ಪುಣ್ಯಕೋಟಿ ಯೋಜನೆ: ಸರ್ಕಾರಿ ನೌಕರರಿಗೆ ತೆರಿಗೆ ವಿನಾಯ್ತಿ

10.  ಕಬ್ಬಿನ ಎಫ್‌ಆರ್‌ಪಿ ದರ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ

ಬರೋಬ್ಬರಿ 11ನೇ ದಿನಕ್ಕೆ ಕಾಲಿರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಭರವಸೆ ಈಡೇರಿಸಿಲ್ಲ.

ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.  
ಕಬ್ಬು ಬೆಳೆಗಾರರು ನಿರಂತರ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ.

ರಾಜ್ಯಕ್ಕಿಂತ ಕಡಿಮೆ ಸಕ್ಕರೆ ಇಳುವರಿ ಬರುವ ಪಂಜಾಬ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್,

ತಮಿಳುನಾಡಿನಲ್ಲಿ ಕಬ್ಬು ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಗಳೆ ಬರಿಸುವ ನಿಯಮ ಜಾರಿಯಲ್ಲಿದೆ.

ಆದರೆ, ರಾಜ್ಯದಲ್ಲಿ ಮಾತ್ರ ಸರ್ಕಾರ ಸಕಾಲದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
--------------    
Heavy Rain ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದ ವಿವಿಧೆಡೆ ಮೂರು ದಿನ ಮಳೆ  

Published On: 02 December 2022, 02:50 PM English Summary: Scientists Bringing Zombie Virus to Life: A New Anxiety Begins!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.