1. ಸುದ್ದಿಗಳು

ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ-ಅಧಿಕೃತ ಆದೇಶ ಹೊರಡಿಸಿದ ಸರ್ಕಾರ

ರೈತರ ಮಕ್ಕಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದ್ದು, ಶನಿವಾರ ಈ ಸಂಬಂಧ ಹೊಸ ಶಿಷ್ಯವೇತನ ಯೋಜನೆ ಜಾರಿಗೆ ಆದೇಶ ಹೊರಡಿಸಲಾಗಿದೆ. ಜುಲೈ 28ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರ ಮಕ್ಕಳು ಉನ್ನತ ವ್ಯಾಸಂಗ ಮಾಡಬೇಕು ಎಂಬ ದೃಢಸಂಕಲ್ಪ ಹಾಗೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ರೈತರ ಮಕ್ಕಳಿಗೆ ಶಿಷ್ಯವೇತನ ಜಾರಿಗೊಳಿಸಿ, ಸರ್ಕಾರ ಅಧಿಕೃತ ದೇಶ ಪ್ರಕಟಿಸಿದೆ.

10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ರಾಜ್ಯದ ಯಾವುದೇ ಭಾಗದಲ್ಲಿರುವ, ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಗಳವರೆಗೆ ಪ್ರವೇಶವನ್ನು ಪಡೆದಿರುವ ರಾಜ್ಯದ ರೈತರ ಮಕ್ಕಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಪದ್ಧತಿ ಮೂಲಕ ಹಣ ವರ್ಗಾವಣೆ ಮಾಡಲಾಗುವುದು.
2021-22ನೇ ಆಥಿರ್ಕ ವರ್ಷದ ಸಾಲಿನಿಂದ ಜಾರಿಗೆ ಬರುವಂತೆ ಶಿಷ್ಯವೇತನದ ಹಣವನ್ನು ವಾರ್ಷಿಕ ಶಿಷ್ಯವೇತನ ರೂಪದಲ್ಲಿ ಪಾವತಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಿಎಂ ಆಘಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ನಂತರ ಈ ಯೋಜನೆ ಘೋಷಿಸಿದ್ದರು.

ಷರತ್ತುಗಳು:

ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ಶಿಷ್ಯವೇತನಕ್ಕೆ  ಅರ್ಹರಾಗಿರುತ್ತಾರೆ. ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರ್ಯಾಂಕ್ ಇತ್ಯಾದಿಗಳ ಆಧಾರದ ಮೇಲೆ ಶಿಷ್ಯ ವೇತನ, ಪ್ರಶಸ್ತಿ ಪಡೆದ ರೈತರ ಮಕ್ಕಳು ಅರ್ಹರಾಗಿರುತ್ತಾರೆ. ಯಾವುದಾದರೊಂದು ವಿಧಧ ಕ್ರೋಸ್ಗೆ ಶಿಷ್ಯವೇತನ ದೊರೆಯಲಿದೆ.

ಯಾರಿಗೆ ಅನ್ವಯ:

ರೈತ ಅಂದರೆ ರಾಜ್ಯದ ಯಾವುದೇ ಭಾಗದಲ್ಲಿ ಉಳುಮೆ ಮಾಡುವ ಅಥವಾ ಕೃಷಿ ಮಾಡುವಂತಹ ಜಮೀನಿನ್ನು ತನ್ನ ಹೆಸರಿನಲ್ಲಿ ಹೊಂದಿರುವವರಾಗಿರಬೇಕು.

ಸರ್ಕಾರದಿಂದ ಮಂಜೂರು ಮಾಡಲಾಗುವ ಶೀಷ್ಯವೇತನ ಯಾರಿಗೆ ಎಷ್ಟು (ರೂ.ಗಳಲ್ಲಿ)

ಕೋರ್ಸ್

ಪುರುಷರು

ಮಹಿಳೆಯರು, ಅನ್ಯಲಿಂಗದವರು

ಪದವಿಯ ಮುಂಚೆ ಪಿಯುಸಿ, ಐಟಿಐ, ಡಿಪ್ಲೋಮಾ

 2500

3000

ಎಲ್ಲ ಬಿಎ, ಬಿಎಸ್ಸಿ, ಬಿಕಾಂ ಇತ್ಯಾದಿ (ಎಂಬಿಬಿಎಸ್, ಬಿಇ, ಬಿಟೆಕ್, ವೃತ್ತಿಪರ ಕೋರ್ಸ್ ಹೊರತುಪಡಿಸಿ)

5000

5500

ಎಲ್.ಎಲ್.ಬಿ., ಪ್ಯಾರ ಮೆಡಿಕಲ್, ಬಿಫಾರ್ಮ್, ನರ್ಸಿಂಗ್, ಇತ್ಯಾದಿ, ವೃತ್ತಿಪರ ಕೋರ್ಸ್‍ಗಳು

7500

8000

ಎಂಬಿಬಿಎಸ್, ಬಿಇ, ಬಿಟೆಕ್, ಎಲ್ಲ ಸ್ನಾತಕೋತ್ತರ ಕೋರ್ಸ್

10000

11000

Published On: 08 August 2021, 09:57 AM English Summary: Scholarships for farmers' children

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.