1. ಸುದ್ದಿಗಳು

ಡಿಸೆಂಬರ್ 18 ರವರೆಗೆ ಸೈನಿಕ ಶಾಲೆಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಕೆಗೆ ಕಾಲಾವಕಾಶ

ಸೈನಿಕ ಶಾಲೆಗಳಲ್ಲಿ ದಾಖಲಾತಿ, ಜಾತಿ ಪ್ರಮಾಣ ಪತ್ರ ಸೇರಿದಂತೆ ಇತರ ಕಾರಣಗಳಿಂದ ಅರ್ಜಿ ಸಲ್ಲಿಸದೆ ಇರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಂತಸದ ಸುದ್ದಿ. ಡಿ. 18ರವರೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.

ಸೈನಿಕ ಶಾಲೆಗಳಲ್ಲಿ 2021-22ನೇ ಸಾಲಿಗೆ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಜಾತಿ ಪ್ರಮಾಣ ಪತ್ರ ಮತ್ತು ಇತರೆ ದಾಖಲೆಗಳನ್ನು ಆನ್‌ಲೈನ್ ನಲ್ಲಿ ಅಪ್‌ಲೋಡ್ ಮಾಡಲು ಅಭ್ಯರ್ಥಿಗಳು ತೊಂದರೆ ಎದುರಿಸುತ್ತಿರುವ ಕಾರಣದಿಂದ ಅಭ್ಯರ್ಥಿಗಳ ಅನುಕೂಲಕ್ಕಾಗಿ ಅರ್ಜಿ ಸಲ್ಲಿಕೆ ಅವಧಿಯನ್ನು ಡಿ.18 ರವರೆಗೆ ವಿಸ್ತರಿಸಲಾಗಿದೆ.

ಅರ್ಜಿ ಸಲ್ಲಿಕೆಗೆ ಡಿ.18 ರಸಂಜೆ 5 ಗಂಟೆಯವರೆಗೆ ಹಾಗೂ ಶುಲ್ಕ ಪಾವತಿಗೆ ಡಿ.18ರ ರಾತ್ರಿ 11.50 ಗಂಟೆಯವರೆಗೆ ಅವಕಾಶ ನೀಡಲಾಗಿದೆ.

ಅಭ್ಯರ್ಥಿಗಳು ತಾವು ನೀಡಿದ ವಿವರಗಳಲ್ಲಿ ಯಾವುದೇ ವಿವರವನ್ನು ತಿದ್ದುಪಡಿ ಮಾಡಬಹುದು. ಅರ್ಜಿ ವಿವರಗಳ ತಿದ್ದುಪಡಿಗಾಗಿಆನ್‌ಲೈನ್ ಪೋರ್ಟಲ್ಗೆ

https://aissee.nta.nic.in ಭೇಟಿ ನೀಡಬಹುದು.

ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಯ ದಿನಾಂಕವನ್ನು ಮರು ನಿಗದಿಪಡಿಸಲಾಗಿದೆ. 2021 ರ ಫೆ. 7 ರಂದು ನಿಗದಿಪಡಿಸಲಾಗಿದೆ ಎಂದು ಪರೀಕ್ಷಾ ವಿಭಾಗದ ಹಿರಿಯ ನಿರ್ದೇಶಕರು ತಿಳಿಸಿದ್ದಾರೆ.

Published On: 12 December 2020, 10:28 AM English Summary: Sainik school admission date extended

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.