1. ಸುದ್ದಿಗಳು

STAR KISAN GHAR YOJANA! 50 ಲಕ್ಷ ರೂ ರೈತರಿಗೆ ಸಿಗಲಿದೆ!

Ashok Jotawar
Ashok Jotawar
Star Kisan Yojana Meant By

(STAR KISAN GHAR YOJANA )ಸ್ಟಾರ್ ಕಿಸಾನ್ ಘರ್ ಯೋಜನೆ:

ನೀವು KISAN CREDIT CARD  (KCC ) ಹೊಂದಿರುವವರಾಗಿದ್ದರೆ ಮತ್ತು ನೀವು ಸರ್ಕಾರಿ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದರೆ, ಈ ವರ್ಷದ ಒಳ್ಳೆಯ ಸುದ್ದಿ ನಿಮಗೆ ಹೆಚ್ಚು ಉಪಯುಕ್ತವಾಗಿದೆ. KCC ಹೊಂದಿರುವ  ರೈತರಿಗೆ ಅವರ  ಹೊಸ ಮನೆ ಅಥವಾ ತೋಟದ ಮನೆ ನಿರ್ಮಿಸಿಕೊಳ್ಳಲು 50 ಲಕ್ಷ ಸಾಲ ನೀಡಲಾಗುತ್ತಿದೆ. ಅದೂಕೂಡಾ ಯಾವುದೇ ಪ್ರಮಾಣ ಪಾತ್ರ ಇಲ್ಲದೆ.

ಇದರೊಂದಿಗೆ ಸಾಲ ಮರುಪಾವತಿ ಅವಧಿಯನ್ನೂ ದೀರ್ಘವಾಗಿ ಇರಿಸಲಾಗಿದ್ದು, ಇದರಿಂದ ರೈತರು ಸುಲಭವಾಗಿ ಸಾಲ ಮರುಪಾವತಿ ಮಾಡಬಹುದು. ಕನಿಷ್ಠ ಬಡ್ಡಿಯಲ್ಲಿ ಲಭ್ಯವಿರುವ ಈ ಸಾಲವನ್ನು ಸ್ಟಾರ್ ಕಿಸಾನ್ ಘರ್ ಯೋಜನೆ ಮೂಲಕ ಲಭ್ಯವಾಗುವಂತೆ ಮಾಡಲಾಗುತ್ತಿದೆ.

STAR KISAN GHAR YOJANA: ಯಾರಿಗೆ ಸಿಗುತ್ತೆ ಈ ಸಾಲ

ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ 'ಬ್ಯಾಂಕ್ ಆಫ್ ಇಂಡಿಯಾ' ದೇಶದ ಅನ್ನದಾತ ರೈತರ ಕನಸನ್ನು ನನಸಾಗಿಸಲು ಸ್ಟಾರ್ ಕಿಸಾನ್ ಘರ್ ಯೋಜನೆಯನ್ನು ಪ್ರಾರಂಭಿಸಿದೆ. ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆ ಹೊಂದಿರುವ ರೈತರಿಗೆ ಮಾತ್ರ ಯೋಜನೆಯ ಪ್ರಯೋಜನ ಲಭ್ಯವಿರುತ್ತದೆ. ನೀವು ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆಯನ್ನು ಹೊಂದಿದ್ದರೆ ನೀವು ಈ ಯೋಜನೆಯ ಲಾಭವನ್ನು ಪಡೆಯಬಹುದು. ಇಲ್ಲವಾದರೆ ನಿಮಗೆ ಈ ಒಂದು ಲಾಭ ಸಿಗುವುದು ತುಂಬಾನೇ ಕಷ್ಟ.

ಏನಿದು STAR KISAN GHAR YOJANA?

ಸ್ಟಾರ್ ಕಿಸಾನ್ ಘರ್ ಯೋಜನೆಯು ಬ್ಯಾಂಕ್ ಆಫ್ ಇಂಡಿಯಾಗಾಗಿದೆ. ಬ್ಯಾಂಕ್‌ನ ಕೆಸಿಸಿ ಖಾತೆ ಹೊಂದಿರುವ ರೈತರಿಗೆ ಯೋಜನೆಯ ಲಾಭವನ್ನು ನೀಡಲಾಗುವುದು.

Farmer...

ಯೋಜನೆಯಡಿ ರೈತರಿಗೆ ಕೃಷಿ ಭೂಮಿಯಲ್ಲಿ ಹೊಸ ಮನೆ ಅಥವಾ ತೋಟದ ಮನೆ ನಿರ್ಮಾಣ, ಹಳೆ ಮನೆ ದುರಸ್ತಿಗೆ ಕನಿಷ್ಠ ಬಡ್ಡಿ ದರದಲ್ಲಿ ಸಾಲ ದೊರೆಯಲಿದೆ. ಮತ್ತು ಈ ಸಾಲಕ್ಕೆ ಸುಮಾರು ರೈತರ ಅರ್ಜಿಗಳು ಕೂಡ ಬಂದಿವೆ.

 15 ವರ್ಷ ಕಾಲಾವಧಿ .

ಬ್ಯಾಂಕ್ ಆಫ್ ಇಂಡಿಯಾದ ಸ್ಟಾರ್ ಕಿಸಾನ್ ಘರ್ ಯೋಜನೆಯಡಿ ರೈತರಿಗೆ 1 ಲಕ್ಷದಿಂದ 50 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ. ರೈತನು ತನ್ನ ಜಮೀನಿನಲ್ಲಿ ಹೊಸ ಮನೆ ಅಥವಾ ತೋಟದ ಮನೆಯನ್ನು ನಿರ್ಮಿಸಲು ಬಯಸಿದರೆ, ಅವನು ಬ್ಯಾಂಕ್‌ನ ಷರತ್ತುಗಳ ಮೇಲೆ 50 ಲಕ್ಷ ರೂ.ವರೆಗೆ ಸಾಲವನ್ನು ಪಡೆಯಬಹುದು. ಅದೇ ಸಮಯದಲ್ಲಿ ಹಳೆಯ ಮನೆಯ ದುರಸ್ತಿ ಮತ್ತು ನವೀಕರಣಕ್ಕೆ 10 ಲಕ್ಷ ರೂ.ವರೆಗೆ ಸಾಲ ದೊರೆಯಲಿದೆ. ಈ ಸಾಲದ ಬಡ್ಡಿ ದರವನ್ನು ವಾರ್ಷಿಕ ಶೇ.8.05ಕ್ಕೆ ನಿಗದಿಪಡಿಸಲಾಗಿದೆ. HOUSING LOAN ನಲ್ಲಿ ಇದೊಂದು ದೊಡ್ಡ ಕ್ರಾಂತಿ ಏಕೆಂದರೇ ಕೇವಲ ಶೇ.8.05 ರಷ್ಟು ಬಡ್ಡಿ ಆಚಾರಿ ಮೂಡಿಸುತ್ತದೆ.

ಇದರೊಂದಿಗೆ ರೈತರಿಗೆ ಸಾಲ ಮರುಪಾವತಿ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ರೈತರು ಈ ಸಾಲವನ್ನು 15 ವರ್ಷಗಳ ಅವಧಿಯಲ್ಲಿ ಮರುಪಾವತಿ ಮಾಡಬಹುದು.

ಅಲ್ಲದೆ, ನಿಮ್ಮ ನಗರ ಅಥವಾ ಹಳ್ಳಿಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡುವ ಮೂಲಕ ನೀವು ಮಾಹಿತಿಯನ್ನು ಪಡೆಯಬಹುದು. ಇದಲ್ಲದೆ ಬ್ಯಾಂಕಿನ ಟೋಲ್ ಫ್ರೀ ಸಂಖ್ಯೆ 1800 103 1906 ಅನ್ನು ಸಂಪರ್ಕಿಸಬಹುದು.

ಆದಾಯ ತೆರಿಗೆ ರಿಟರ್ನ್ ಅಗತ್ಯವಿಲ್ಲ

 

ಬ್ಯಾಂಕ್ ಆಫ್ ಇಂಡಿಯಾದ ಸ್ಟಾರ್ ಕಿಸಾನ್ ಘರ್ ಯೋಜನೆಯಲ್ಲಿ ರೈತರಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ಹಲವು ಪರಿಹಾರಗಳನ್ನು ಒದಗಿಸಲಾಗಿದೆ. ಈ ಯೋಜನೆಯಡಿ 50 ಲಕ್ಷ ರೂ.ವರೆಗೆ ಸಾಲ ಪಡೆಯಲು ರೈತರು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವ ಅಗತ್ಯವಿಲ್ಲ. ಯಾವುದೇ ರೈತ ಸಹೋದರರು ಈ ಯೋಜನೆಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಪಡೆಯಲು ಬಯಸಿದರೆ, ನಂತರ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

BOI KCC ಬಗ್ಗೆ ತಿಳಿಯಿರಿ

ಬ್ಯಾಂಕ್ ಆಫ್ ಇಂಡಿಯಾ ದೇಶದ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತದೆ. ಕೃಷಿಯ ಹೊರತಾಗಿ, ರೈತರು ವೈಯಕ್ತಿಕ ಮತ್ತು ತುರ್ತು ವೆಚ್ಚಗಳಿಗೆ ಕೆಸಿಸಿ ಬಳಸಬಹುದು.

ಇನ್ನಷ್ಟು ಓದಿರಿ:

PM KISAN ಜೊತೆಗೆ 'KARNATAKA' ಸರ್ಕಾರದಿಂದಲೂ 4000ರೂ!

Published On: 07 January 2022, 01:01 PM English Summary: Rs50 Lakh Loan For Farmers!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.