1. ಸುದ್ದಿಗಳು

ಆರೋಗ್ಯ ಕ್ಷೇತ್ರಕ್ಕೆ 50 ಸಾವಿರ ಕೋಟಿ ಸಾಲ ಕೋವಿಡ್ ನಿಗ್ರಹಕ್ಕೆ ಆರ್‌ಬಿಐನಿಂದ ಭರಪೂರ ನೆರವು

rbi governor shaktikanta das

ದೇಶದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗಿರುವಾಗಲೇ ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್ ದಾಸ್ ಪತ್ರಿಕಾಗೋಷ್ಠಿ ನಡೆಸಿ ಹಲವು ಮಹತ್ವದ ಪ್ರಕಟಣೆಗಳನ್ನು ಮಾಡಿದ್ದಾರೆ.

ಕೋವಿಡ್‌ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಮತ್ತು ಈ ಸಂದರ್ಭದಲ್ಲಿ ಸಾಮಾನ್ಯ ಜನರು, ಬ್ಯಾಂಕ್‌ಗಳು, ಉದ್ದಿಮೆಗಳು ಮತ್ತು ಇತರರಿಗೆ ನೆರವಾಗಲು ಅವರು ಕೆಲವು ಕ್ರಮಗಳನ್ನು ಘೋಷಿಸಿದ್ದಾರೆ.

ಮಾರ್ಚ್ 2022 ರವೆಗೆ ಕೋವಿಡ್ ಸಂಬಂಧಿಸಿದ ತುರ್ತು ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸಾಲ ಸೌಲಭ್ಯವನ್ನು ಬ್ಯಾಂಕ್‌ಗಳು ಒದಗಿಸಲು ಅನುಕೂಲವಾಗುವಂತೆ ಅವುಗಳಿಗೆ ತಕ್ಷಣ 50000 ಕೋಟಿ ರೂಪಾಯಿ ಲಿಕ್ವಿಡಿಟಿ ಒದಗಿಸಲು ಮುಂದಾಗಿರುವುದಾಗಿ ಹೇಳಿದರು.

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಲಸಿಕೆ ಉತ್ಪಾದಕರು ಸೇರಿದಂತೆ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯ ವೃದ್ದಿಗೆ ಸಾಲ ನೀಡಲು ಬ್ಯಾಂಕುಗಳಿಗೆ 50 ಸಾವಿರ ಕೋಟಿ ರೂಪಾಯಿ ಹಣಕಾಸು ( ಲಿಕ್ವಿಡಿಟಿ) ಪೂರೈಕೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ.

ಲಸಿಕೆ ಉತ್ಪಾದಕರು, ವೈದ್ಯಕೀಯ ಉಪಕರಣಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವವರು, ಆಸ್ಪತ್ರೆಗಳು ಪ್ರಯೋಗಾಲಯಗಳು, ಆಕ್ಸಿಜನ್ ತಯಾರಕರು ವೆಂಟಿಲೇಟರ್ ಉತ್ಪಾದಕರು, ಸೇರಿದಂತೆ ಇನ್ನಿತರ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಸಾಲ ಸೌಲಭ್ಯ ನೀಡಲು ಇಂತಹದೊಂದು ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಕೊರೊನಾ ಲಸಿಕೆ ಮತ್ತು ಕೊರೋನಾ ವಿರುದ್ದದ ಹೋರಾಟಕ್ಕೆ ಕೇಂದ್ರ ಸರ್ಕಾರ 35 ಸಾವಿರ ಕೋಟಿ ರೂಪಾಯಿ ಪ್ರಕಟಿಸಿದೆ .ಅದಕ್ಕೆ ಪೂರಕವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಲಸಿಕೆ ಉತ್ಪಾದಕರು ಸೇರಿದಂತೆ ಕೋವಿಡ್ ಹೋರಾಟಕ್ಕೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಂಡಿದೆ ಎಂದರು.

ಸೂಕ್ಷ್ಮ ಸಣ್ಣ ಮತ್ತು ಅತಿಸಣ್ಣ ವಲಯದ ಹಣಕಾಸು ಬ್ಯಾಂಕುಗಳು ಸಾಲ ಸೌಲಭ್ಯ ನೀಡಲು ಸಹಕಾರಿಯಾಗುವಂತೆ ಆರ್ ಬಿಐ ಈ ಕ್ರಮ ಕೈಗೊಂಡಿದೆ ಇದು ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಕೊರೋನಾ ಸೋಂಕಿನ ಎರಡನೇ ಅಲೆಯಿಂದ ತೊಂದರೆಗೊಳಗಾದ ನಾಗರಿಕರು, ವ್ಯಾಪಾರ ಘಟಕಗಳು ಮತ್ತು ಸಂಸ್ಥೆಗಳಿಗೆ ನಿಯೋಜಿಸಲಾಗುವುದು ಎಂದು ಭರವಸೆ ನೀಡಿದ ಅವರು ಎಲ್ಲಿ ಕೊರೋನಾ ಸೋಂಕಿನಿಂದ ಆಗುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವದಾಗಿ ಅವರು ತಿಳಿಸಿದ್ದಾರೆ.

ಹವಾಮಾನ ಇಲಾಖೆಯ ಸಾಮಾನ್ಯ ಮುಂಗಾರು ಮುನ್ಸೂಚನೆಯು 2021-22 ರಲ್ಲಿ ಗ್ರಾಮೀಣ ಬೇಡಿಕೆ ಮತ್ತು ಒಟ್ಟಾರೆ ಉತ್ಪಾದನೆಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಆದರೆ, ಹಣದುಬ್ಬರ ಒತ್ತಡಗಳ ಮೇಲೆ ಕೊಂಚ ಪರಿಣಾಮವನ್ನು ಬೀರಲಿದೆ ಎಂದು  ಕಳವಳ ವ್ಯಕ್ತಪಡಿಸಿದರು.

ಸಾಮಾನ್ಯ ಮುಂಗಾರು ಆಹಾರದ ಬೆಲೆಯ ಒತ್ತಡವನ್ನು ಅದರಲ್ಲೂ ವಿಶೇಷವಾಗಿ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳಲ್ಲಿ ಹೊಂದಲು ಸಹಾಯ ಮಾಡುತ್ತದೆ. ಏಪ್ರಿಲ್ 2021 ರಲ್ಲಿಯೂ ಸಹ ವ್ಯಾಪಾರ ಆಮದು ಮತ್ತು ರಫ್ತುಗಳು ಒಳ್ಳೆ ಬೆಳವಣಿಗೆ ಕಂಡಿದೆ ಎಂದು ಅವರು ಹೇಳಿದರು.

ಸೆಪ್ಟೆಂಬರ್ 30, 2021ರವರೆಗೆ ರಾಜ್ಯ ಸರಕಾರಗಳಿಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯಲು ನಿಯಮಗಳನ್ನು ಸರಳಗೊಳಿಸಲಾಗಿದೆ. ಎಸ್‌ಎಲ್‌ಟಿಆರ್‌ಒ (SLTRO) ಅಡಿಯಲ್ಲಿ ಸಣ್ಣ ಹಣಕಾಸು ಬ್ಯಾಂಕ್‌ಗಳಿಗೆ 10,000 ಕೋಟಿ ರೂಪಾಯಿ ಮೀಸಲಿಡಲಾಗಿದೆ.

Published On: 05 May 2021, 02:12 PM English Summary: Rs 50,000cr term liquidity facility for healthcare, SLTRO for Small Finance Banks

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.