News

ಮೋದಿ ಸರ್ಕಾರದಿಂದ ರೈತರಿಗೆ ಭರ್ಜರಿ ಉಡುಗೊರೆ! ರೂ. 4000ದ ಯೂರಿಯಾ ಈಗ 266 ಕ್ಕೆ !

06 April, 2022 9:56 AM IST By: Kalmesh T
Rs. 4000 The Urea Now at 266! A grand gift for farmers from Modi government

ರೈತರಿಗೆ ಗುಡ್‌‌ ನ್ಯೂಸ್‌! ರಸಗೊಬ್ಬರದ ಬೆಲೆ ಕೇಳಿ ಕಂಗಾಲಾಗಿದ್ದ ರೈತರಿಗೆ ಕೇಂದ್ರ ಸರ್ಕಾರ ಇದೀಗ ಭರ್ಜರಿ ಉಡುಗೊರೆಯೊಂದನ್ನು ನೀಡಲಿದೆ. ಯಾವಾಗ ನೀಡಲಿದೆ ಮತ್ತು ಯಾರಿಗೆಲ್ಲ ದೊರೆಯಲಿದೆ ಎಂಬುದನ್ನು ತಿಳಿಯಲು ಇದನ್ನು ಓದಿರಿ.

ಹೌದು! ಈ ಹಿಂದೆ ಹಣದುಬ್ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಒಂದೆಡೆ ಈಗಾಗಲೇ ಪೆಟ್ರೋಲ್‌, ಡೀಸೆಲ್ ಬೆಲೆ ಏರಿಕೆಯಿಂದ ರೈತರು ಸಂಕಷ್ಟದಲ್ಲಿದ್ದರೆ, ಇನ್ನೊಂದೆಡೆ ಗೊಬ್ಬರದ ಬೆಲೆ ಏರಿಕೆ ರೈತರನ್ನು ಮತ್ತಷ್ಟು ಕಂಗಾಲಾಗಿಸಿತ್ತು. ನಡುವೆ ಮೋದಿ ಸರ್ಕಾರ ರೈತರಿಗೆ ಅಗ್ಗದ ರಸಗೊಬ್ಬರಗಳನ್ನು ಒದಗಿಸಲು ತನ್ನ ಸಿದ್ಧತೆ ನಡೆಸುತ್ತಿದೆ. 

ಇದನ್ನು ಓದಿರಿ: 

 ಪಿಎಂ ಕಿಸಾನ್ ಸ್ಟೇಟಸ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 7 ನೇ ಕಂತಿನ ಹಣ ಈ ವಾರ ಜಮೆಯಾಗುವ ಸಾಧ್ಯತೆ

ದೇಶದ ಪ್ರಮುಖ ಸಹಕಾರಿ ಸಂಸ್ಥೆಯಾದ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ (Indian Farmers Fertilizer Co-operative Limited ) (IFFCO) ಲಿಮಿಟೆಡ್ ಡೈಅಮೋನಿಯಂ ಫಾಸ್ಫೇಟ್ (DAP) ಮತ್ತು NPK ಬೆಲೆಯನ್ನು ಹೆಚ್ಚಿಸಿದೆ.  

ಈಗಾಗಲೇ ಪೆಟ್ರೋಲ್‌, ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ರೈತರು ಈಗ ತಮ್ಮ ಬೆಳೆಗಳಿಗೆ ಗೊಬ್ಬರವನ್ನು ದುಬಾರಿ ಬೆಲೆಗೆ ಖರೀದಿಸಬೇಕಾಗಿದೆ. ಈ ಎರಡು ಗೊಬ್ಬರದ ಬೆಲೆ ಏರಿಕೆಯಿಂದ ಈಗ ಕೃಷಿ ವೆಚ್ಚವೂ ಹೆಚ್ಚಾಗಲಿದೆ. ಆದರೆ ಈ ನಡುವೆ ಮೋದಿ ಸರ್ಕಾರ ಅವರಿಗೆ ಒಂದು ಪರಿಹಾರ ನೀಡಿದೆ.

ಇದನ್ನೂ ಓದಿ: UAN ನಂಬರ್ ಇಲ್ಲದೆ EPF ಬ್ಯಾಲೆನ್ಸ್‌ ಚೆಕ್‌ ಮಾಡೋದು ಹೇಗೆ..?

 ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಬಂಪರ್‌ ಸುದ್ದಿ..ಹೆಚ್ಚಳವಾಗುತ್ತಾ HRA..?

ಮೋದಿ ಸರ್ಕಾರ ಅಗ್ಗದ ದರದಲ್ಲಿ ರಸಗೊಬ್ಬರವನ್ನು ನೀಡಲಿದೆ

ಸರ್ಕಾರದ ಉನ್ನತ ಮೂಲಗಳ ಪ್ರಕಾರ, ಮೇ (May) ತಿಂಗಳಿನಿಂದ ಪ್ರಾರಂಭವಾಗುವ ಖಾರಿಫ್ ಬಿತ್ತನೆ ಹಂಗಾಮಿಗೆ 3 ಮಿಲಿಯನ್ (Million) ಟನ್ DAP ಮತ್ತು 7 ಮಿಲಿಯನ್ ಟನ್ ಯೂರಿಯಾ ಸೇರಿದಂತೆ ರಸಗೊಬ್ಬರಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ವ್ಯವಸ್ಥೆ ಮಾಡಿದೆ.

ಖಾರಿಫ್ ಹಂಗಾಮಿನ ಅಗತ್ಯತೆಗಳನ್ನು ಪೂರೈಸಲು ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸಿದ್ದು, ರೈತರ ಅಗತ್ಯಕ್ಕೆ ಅನುಗುಣವಾಗಿ ಮತ್ತಷ್ಟು ರಸಗೊಬ್ಬರಗಳನ್ನು ಖರೀದಿಸಲಾಗುವುದು ಎಂದು ಮೂಲಗಳು ತಿಳಿಸಿವೆ. 

ಇದನ್ನೂ ಓದಿ: ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ

 ಕೋಳಿ ಸಾಕಣೆಗೆ ಮುನ್ನ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಯಾವವು..?

ಅರ್ಧ ಬೆಲೆಗೆ ರಸಗೊಬ್ಬರ ನೀಡಲು ಸರಕಾರದ ನಿರ್ಧಾರ

ಅಧಿಕಾರಿಗಳ ಪ್ರಕಾರ ಇಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೂರಿಯಾ ಬೆಲೆ 50 ಕೆಜಿ ಚೀಲಕ್ಕೆ 4000 ರೂ.ಗೆ ಏರಿದ್ದರೆ, ದೇಶೀಯ ಮಾರುಕಟ್ಟೆಯಲ್ಲಿ ಇಂದು 50 ಕೆಜಿ ಚೀಲಕ್ಕೆ 266 ರೂ.ಗೆ ಯೂರಿಯಾವನ್ನು ನೀಡುತ್ತಿದೆ.

ಅದೇ ಸಮಯದಲ್ಲಿ, ದೇಶೀಯ ಮಾರುಕಟ್ಟೆಯಲ್ಲಿ DAP ಬೆಲೆ ಚೀಲಕ್ಕೆ 1,350 ರೂ.ಗಳಾಗಿದ್ದು, ಅದರ ಅಂತರರಾಷ್ಟ್ರೀಯ ಬೆಲೆ ಪ್ರತಿ ಚೀಲಕ್ಕೆ 4,200 ರೂ.ಗೆ ಏರಿಕೆಯಾಗಿದೆ. ಆದರೆ , ಸರ್ಕಾರವು ದೇಶೀಯ ಮಾರುಕಟ್ಟೆಯಲ್ಲಿ ಅರ್ಧದಷ್ಟು ಬೆಲೆಗೆ ಮಾರಾಟ ಮಾಡುತ್ತಿದೆ.

ಗುಡ್‌ ನ್ಯೂಸ್‌: ಹೈನುಗಾರರಿಗೆ ಕ್ರೆಡಿಟ್‌ ಕಾರ್ಡ್‌! ದೇಶದಲ್ಲೆ ಮೊದಲು

Navy Recruitment : 12ನೇ ತರಗತಿ ಪಾಸ್ ಆದವರಿಗೆ ನೇಮಕಾತಿ..69,000 ವರೆಗೆ ಸಂಬಳ