1. ಸುದ್ದಿಗಳು

ಮೇಲ್ಛಾವಣಿ ಸೋಲಾರ್‌ ಅಳವಡಿಕೆಗೆ ₹14,588 ಸಹಾಯಧನ: ದೇಶದ ಯಾವುದೇ ಭಾಗದವರು ಅರ್ಜಿ ಸಲ್ಲಿಸಬಹುದು!

Kalmesh T
Kalmesh T
Rooftop Solar Programme extended till 31.03.2026

ಮೇಲ್ಛಾವಣಿ ಸೌರಶಕ್ತಿ ಕಾರ್ಯಕ್ರಮವನ್ನು 2026 ರವರೆಗೆ ವಿಸ್ತರಿಸಲಾಗಿದ್ದು ಈ ಕಾರ್ಯಕ್ರಮದ ಅಡಿಯಲ್ಲಿ ಗುರಿಯನ್ನು ಸಾಧಿಸುವವರೆಗೆ ಸಬ್ಸಿಡಿ ಲಭ್ಯವಿರುತ್ತದೆ. ದೇಶದ ಯಾವುದೇ ಭಾಗದ ಗ್ರಾಹಕರು ಅರ್ಜಿ ಸಲ್ಲಿಸಬಹುದು ಮತ್ತು ನೋಂದಣಿಯಿಂದ ಪ್ರಾರಂಭಿಸಿ ಸಬ್ಸಿಡಿಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಪಡೆಯಬಹುದು.

ಬೀದಿಬದಿ ವ್ಯಾಪಾರಿಗಳೆ ಗಮನಿಸಿ: ಪ್ರಧಾನ ಮಂತ್ರಿ ʻಸ್ವನಿಧಿʼ ಯೋಜನೆ ವಿಸ್ತರಣೆ

  • ರಾಷ್ಟ್ರೀಯ ಪೋರ್ಟಲ್ ಅಡಿಯಲ್ಲಿ ಇಡೀ ದೇಶಕ್ಕೆ ಸಹಾಯಧನವನ್ನು ರೂ. 14,588/- ಪ್ರತಿ ಕಿ.ವ್ಯಾ.ಗೆ (3 ಕಿ.ವ್ಯಾ ವರೆಗಿನ ಸಾಮರ್ಥ್ಯಕ್ಕಾಗಿ) ನಿಗದಿಪಡಿಸಲಾಗಿದೆ.
    ನೋಂದಾಯಿತ ಮಾರಾಟಗಾರರ ಪಟ್ಟಿ ರಾಷ್ಟ್ರೀಯ ಪೋರ್ಟಲ್ನಲ್ಲಿಯೂ ಲಭ್ಯವಿದೆ.
  • ರಾಷ್ಟ್ರೀಯ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ ಹಾಗು ನೆಟ್-ಮೀಟರಿಂಗ್ನ ಶುಲ್ಕಗಳನ್ನು ಆಯಾ ವಿತರಣಾ ಕಂಪನಿಗಳು ಸೂಚಿಸಿವೆ.
  • ಸಬ್ಸಿಡಿ ಸ್ವೀಕರಿಸಲು ಯಾವುದೇ ಮಾರಾಟಗಾರ ಅಥವಾ ವಿತರಣಾ ಕಂಪನಿಗೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.  
  • ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಸಚಿವಾಲಯದಿಂದ ಜಮಾ ಮಾಡಲಾಗುವುದು

ಎಲ್ಲ ವಸತಿ ಗ್ರಾಹಕರು ರಾಷ್ಟ್ರೀಯ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಶುಲ್ಕ ಅಥವಾ ಆಯಾ ವಿತರಣಾ ಕಂಪನಿಯು ಸೂಚಿಸದ ನೆಟ್-ಮೀಟರಿಂಗ್/ಟೆಸ್ಟಿಂಗ್ಗೆ ಯಾವುದೇ ಹೆಚ್ಚುವರಿ ಶುಲ್ಕಗಳ ಖಾತೆಯಲ್ಲಿ ಯಾವುದೇ ಮಾರಾಟಗಾರರಿಗೆ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸದಂತೆ ಸೂಚಿಸಲಾಗಿದೆ.

ಅಂತಹ ಶುಲ್ಕಗಳನ್ನು ಯಾವುದೇ ಮಾರಾಟಗಾರ/ಏಜೆನ್ಸಿ/ವ್ಯಕ್ತಿಯು ಬೇಡಿಕೆಯಿಟ್ಟರೆ, ಅದನ್ನು ಆಯಾ ವಿತರಣಾ ಕಂಪನಿಗೆ ಮತ್ತು ಈ ಸಚಿವಾಲಯಕ್ಕೆ ಇಮೇಲ್ ವಿಳಾಸ - rts-mnre[at]gov[dot]in ಗೆ ಸಂದೇಶ ಕಳುಹಿಸಬಹುದು. ರಾಷ್ಟ್ರೀಯ ಪೋರ್ಟಲ್‌ಗೆ ಸಂಬಂಧಿಸಿದ ಮಾಹಿತಿಗಾಗಿ ದಯವಿಟ್ಟು www.solarrooftop.gov.in  ಗೆ ಭೇಟಿ ನೀಡಿ.

ರಾಷ್ಟ್ರೀಯ ಪೋರ್ಟಲ್‌ನಲ್ಲಿ ಮೇಲ್ಛಾವಣಿ ಸೌರಶಕ್ತಿಯನ್ನು ಸ್ಥಾಪಿಸಲು ಸಿದ್ಧರಿರುವ , ದೇಶದ ಯಾವುದೇ ಭಾಗದ  ಗ್ರಾಹಕರು ಅರ್ಜಿ ಸಲ್ಲಿಸಬಹುದು ಮತ್ತು ನೋಂದಣಿಯಿಂದ ಪ್ರಾರಂಭಿಸಿ ಸಬ್ಸಿಡಿಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡುವವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡಬಹುದು.  

ರಾಷ್ಟ್ರೀಯ ಪೋರ್ಟಲ್ ಅಡಿಯಲ್ಲಿ ಸಹಾಯಧನವನ್ನು ರೂ. 14,588/- ಪ್ರತಿ ಕಿ.ವ್ಯಾ.ಗೆ (3 ಕಿ.ವ್ಯಾ.ವರೆಗಿನ ಸಾಮರ್ಥ್ಯಕ್ಕಾಗಿ) ಇಡೀ ದೇಶಕ್ಕೆ ಮತ್ತು ವಸತಿ ಗ್ರಾಹಕರು ತಮ್ಮ ಪ್ರದೇಶದ ಆಯಾ ವಿತರಣಾ ಕಂಪನಿಯಿಂದ ನೋಂದಾಯಿಸಲಾದ ಯಾವುದೇ ಮಾರಾಟಗಾರರಿಂದ ಮೇಲ್ಛಾವಣಿಯ ಸೌರ ಸ್ಥಾವರವನ್ನು ಸ್ಥಾಪಿಸಬೇಕು.

ನೋಂದಾಯಿತ ಮಾರಾಟಗಾರರ ಪಟ್ಟಿ ರಾಷ್ಟ್ರೀಯ ಪೋರ್ಟಲ್ನಲ್ಲಿಯೂ ಲಭ್ಯವಿದೆ. ಗ್ರಾಹಕರ ಹಿತಾಸಕ್ತಿ ಕಾಪಾಡಲು, ರಾಷ್ಟ್ರೀಯ ಪೋರ್ಟಲ್ನಲ್ಲಿ ಮಾರಾಟಗಾರ ಮತ್ತು ಗ್ರಾಹಕರ ನಡುವೆ ಒಪ್ಪಂದದ ಸಹಿ ಮಾಡಬೇಕಾಗಿರುವ ನಮೂನೆಯನ್ನು ಕೊಡಲಾಗಿದೆ. ಒಪ್ಪಂದದ ನಿಯಮಗಳನ್ನು ಪರಸ್ಪರ ಒಪ್ಪಿಕೊಳ್ಳಬಹುದು.

ಮಾರಾಟಗಾರರು ಕನಿಷ್ಠ 5 ವರ್ಷಗಳವರೆಗೆ ಗ್ರಾಹಕರಿಗೆ ನಿರ್ವಹಣೆ ಸೇವೆಗಳನ್ನು ಒದಗಿಸಬೇಕು ಮತ್ತು ಯಾವುದೇ ಲೋಪದ ಸಂದರ್ಭದಲ್ಲಿ ಆಯಾ ವಿತರಣಾ ಕಂಪನಿಯು ಮಾರಾಟಗಾರರ ಕಾರ್ಯಕ್ಷಮತೆಯ ಬ್ಯಾಂಕ್ ಗ್ಯಾರಂಟಿಯನ್ನು ನಗದೀಕರಿಸಿಕೊಳ್ಳಬಹುದು.

ರಾಷ್ಟ್ರೀಯ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ ಮತ್ತು ನೆಟ್-ಮೀಟರಿಂಗ್‌ನ ಶುಲ್ಕಗಳ ವಿವರಗಳನ್ನು ಆಯಾ ವಿತರಣಾ ಕಂಪನಿಗಳು ಸೂಚಿಸಿವೆ. ಸಬ್ಸಿಡಿಯನ್ನು ಸ್ವೀಕರಿಸಲು ಯಾವುದೇ ಮಾರಾಟಗಾರ ಅಥವಾ ವಿತರಣಾ ಕಂಪನಿಗೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.  ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಸಚಿವಾಲಯವು ಜಮಾ ಮಾಡುತ್ತದೆ.

ಸಚಿವಾಲಯವು ರೂಫ್ಟಾಪ್ ಸೋಲಾರ್ ಪ್ರೋಗ್ರಾಂ ಹಂತ-II (ಮೇಲ್ಛಾವಣಿ ಸೌರಶಕ್ತಿ) ಅನ್ನು ಅನುಷ್ಠಾನಗೊಳಿಸುತ್ತಿದೆ, ಇದರಲ್ಲಿ ಮೇಲ್ಛಾವಣಿಯ ಸೌರಶಕ್ತಿ ಫಲಕ ಸ್ಥಾಪನೆಗಾಗಿ ವಸತಿ ಗ್ರಾಹಕರಿಗೆ ಸಿಎಫ್ ಎ/ಸಬ್ಸಿಡಿಯನ್ನು ಒದಗಿಸಲಾಗುತ್ತಿದೆ.  ಕಾರ್ಯಕ್ರಮದ ಅನುಷ್ಠಾನವನ್ನು ಸುಲಭಗೊಳಿಸಲು, 30.07.2022ರಂದು ಗೌರವಾನ್ವಿತ ಪ್ರಧಾನಮಂತ್ರಿಯವರು ರಾಷ್ಟ್ರೀಯ ಪೋರ್ಟಲ್ನ  ಅಭಿವೃದ್ಧಿಗೆ ಚಾಲನೆ ನೀಡಿದ್ದರು.

ರಾಷ್ಟ್ರೀಯ ಪೋರ್ಟಲ್‌ಗೆ ಸಂಬಂಧಿಸಿದ ಮಾಹಿತಿಗಾಗಿ ದಯವಿಟ್ಟು www.solarrooftop.gov.in  ಗೆ ಭೇಟಿ ನೀಡಿ

Published On: 09 December 2022, 04:33 PM English Summary: Rooftop Solar Programme extended till 31.03.2026

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.