1. ಸುದ್ದಿಗಳು

Ration card: “ದತ್ತಾ” ಬದಲು “ಕುತ್ತಾ”; ಅಧಿಕಾರಿ ಮುಂದೆ ಆತ ಮಾಡಿದ್ದೇನು ಗೊತ್ತಾ!

Hitesh
Hitesh
Ration card: "Kutta" instead of "Datta" know what he did in front of the officer!

ವ್ಯಕ್ತಿಯೊಬ್ಬರ ಹೆಸರನ್ನು ರೇಷನ್ ಕಾರ್ಡ್‌ನಲ್ಲಿ ದತ್ತಾ ಬದಲು ಕುತ್ತಾ (ನಾಯಿ) ಎಂದು ಬದಲಾಯಿಸಿದ್ದು ಆ ವ್ಯಕ್ತಿ ಮಾಡಿದ ಕೆಲಸ ಇದೀಗ ಸಖತ್‌ ವೈರಲ್‌ ಆಗಿದೆ. ದತ್ತಾ ಮಾಡಿದ್ದೇನು ಇಲ್ಲಿದೆ ವಿವರ…

ಕಬ್ಬು ಬೆಳೆ FRP ದರ ಹೆಚ್ಚಳಕ್ಕೆ ಆಗ್ರಹಿಸಿ ಸಿ.ಎಂ ಮನೆ ಮುಂದೆ ನ.22ರಿಂದ ಧರಣಿ: ಕುರುಬೂರು ಶಾಂತಕುಮಾರ್‌ ಎಚ್ಚರಿಕೆ

ಪಡಿತರ ಚೀಟಿಯಲ್ಲಿ (ration card) ಶ್ರೀಕಾಂತಿ ಕುಮಾರ್ ದತ್ತಾ ಎನ್ನುವ ವ್ಯಕ್ತಿಯ ಹೆಸರನ್ನು ಅಧಿಕಾರಿಗಳು ಕುತ್ತಾ ಎಂದು ತಪ್ಪಾಗಿ ನಮೂದಿಸಿದ್ದಾರೆ.

ಇದನ್ನು ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಒಂದೇ ಬಾರಿ ಅಲ್ಲ. ಹಲವು ಬಾರಿ ಅವರ ಹೆಸರನ್ನು ತಪ್ಪಾಗಿ ನಮೂದಿಸಲಾಗಿದೆ.  

ಅಧಿಕಾರಿ ಮುಂದೆ ಹೋದ ಶ್ರೀಕಾಂತಿ ಕುಮಾರ್‌ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದು ನಡೆದಿರುವುದು ಪಶ್ಚಿಮ ಬಂಗಾಳದ ಬಂಕುರಾದಲ್ಲಿ.

ಶ್ರೀಕಾಂತಿ ಕುಮಾರ್ ದತ್ತಾ ಎನ್ನುವ ವ್ಯಕ್ತಿಯ ಹೆಸರಲ್ಲಿ ದತ್ತಾ ಬದಲು ಕುತ್ತಾ (ನಾಯಿ) ಎಂದು ತಪ್ಪಾಗಿ ನಮೂದಿಸಲಾಗಿದೆ.

ಇದರಿಂದ ಕೆರಳಿದ ಶ್ರೀಕಾಂತಿ ಕುಮಾರ್ ಬಂಕುರಾದ ಸ್ಥಳೀಯ ಪಾಲಿಕೆ ಅಧಿಕಾರಿ ಕಾರಿನಲ್ಲಿ ಬರುವಾಗ ಎದುರು ಹೋಗಿ  ಬೌ ಬೌ ಎಂದು ಬೊಗಳಿದ್ದಾನೆ.

ಇದರಿಂದ ಕಂಗಾಲದ ಅಧಿಕಾರಿ ದಾಖಲೆ ನೋಡಿ ದಂಗಾಗಿದ್ದಾರೆ.   

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಕ್ನಾ ಗ್ರಾಮದಲ್ಲಿ ನಡೆದಿರುವ ಈ ಘಟನೆ ದೇಶಾದ್ಯಂತ ಸದ್ದು ಮಾಡಿದೆ. 

ಈ ಗ್ರಾಮದ ವ್ಯಕ್ತಿ ಶ್ರೀಕಾಂತ್‌ ದತ್ತಾ ಹೆಸರನ್ನು ಆಹಾರ ಇಲಾಖೆ ನೀಡುವ ರೇಷನ್‌ ಕಾರ್ಡ್‌ನಲ್ಲಿ ಶ್ರೀಕಾಂತ್‌ 'ಕುತ್ತಾ' ಎಂದು ಮಾಡಿತ್ತು. ಹಿಂದಿಯಲ್ಲಿ ಕುತ್ತಾ ಎಂದರೆ ನಾಯಿ.

ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಶ್ರೀಕಾಂತ್‌ ಸಾಕಷ್ಟು ಬಾರಿ ಪ್ರಯತ್ನ ಮಾಡಿದರು. ಎರಡು ಬಾರಿ ಹೆಸರನ್ನು ಸರಿಪಡಿಸುವಂತೆ ಮನವಿ ಕೂಡ ಸಲ್ಲಿಸಿದ್ದರು.  

ರೈತರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಿದರೆ ಜೋಕೆ: ಆರ್‌. ಅಶೋಕ್‌ ಎಚ್ಚರಿಕೆ! 

40 ವರ್ಷ್ ಶ್ರೀಕಾಂತ್‌ ದತ್ತಾ, ಒಂದಲ್ಲ ಎರಡು ಬಾರಿ ತನ್ನ ಸರ್‌ನೇಮ್‌ನಲ್ಲಿ ಆಗಿರುವ ತಪ್ಪನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಮುಖೇನ ಮನವಿ ಸಲ್ಲಿಸಿದ್ದರು.  

ಆದರೆ, ಈ ರೀತಿ ಪದೇ ಪದೇ ಮನವಿ ಸಲ್ಲಿಸಿದರೂ, ಮೊದಲ ಬಾರಿಗೆ ಸರ್‌ನೇಮ್‌ ಬದಲು ಮಾಡಿದಾಗ ಅವಕಾಶ ಶ್ರೀಕಾಂತ್‌ ದತ್ತಾ ಎನ್ನುವ ಬದಲು ಶ್ರೀಕಾಂತ್‌ ಮಂಡಲ್‌ ಎಂದು ಮಾಡಿದ್ದರು.

ಬಳಿಕ ಮತ್ತೊಮ್ಮೆ ಅವರು ಸರ್‌ನೇಮ್‌ ಬದಲಿ ಮಾಡುವಂತೆ ಮನವಿ ಸಲ್ಲಿಸಿದಾಗ ಶ್ರೀಕಾಂತ್‌ ಕುಮಾರ್‌ ದತ್‌ ಎಂದು ಮಾಡಿದ್ದರು.

ರಾಜ್ಯದಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ!  

Ration card: "Kutta" instead of "Datta" know what he did in front of the officer!

ಬಳಿಕ ಮತ್ತೊಮ್ಮೆ ಅವರು ಅರ್ಜಿ ಸಲ್ಲಿಸಿ ಹೆಸರು ಸರಿಪಡಿಸುವಂತೆ ಕೋರಿಕೊಂಡಿದ್ದಾರೆ. ಈ ಹಂತದಲ್ಲಿ ಅಧಿಕಾರಿಗಳು ಅವರ ಹೆಸರನ್ನು ಶ್ರೀಕಂಠ ದತ್ತಾ ಎನ್ನುವ ಬದಲು ಶ್ರೀಕಂಠಿ ಕುಮಾರ್‌ ಕುತ್ತಾ ಎಂದು ಮಾಡಿದ್ದರು.

ಅಧಿಕಾರಿಗಳ ಅಸಡ್ಡೆಯ ವರ್ತನೆಗೆ ಕುದ್ದು ಹೋಗಿದ್ದ ಶ್ರೀಕಾಂತ್ ಕೈಯಲ್ಲಿ ಬ್ಯಾಗ್ ಮತ್ತು ಸಾಕಷ್ಟು ಪೇಪರ್ ಗಳನ್ನು ಹಿಡಿದುಕೊಂಡು 'ದುವಾರೆ ಸರ್ಕಾರ್' ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ವಿಪರ್ಯಾಸ ಎಂದರೆ ಎರಡು ಬಾರಿಯೂ ಅವರ ಹೆಸರನ್ನು ತಪ್ಪಾಗಿ ನಮೂದಿಸಲಾಗಿತ್ತು. ಎರಡು ಬಾರಿ ಹೆಸರು ಪರಿಷ್ಕರಣೆ ಮಾಡಿದ ಸಂದರ್ಭದಲ್ಲಿಯೂ ಅವರ ಹೆಸರಿನ ಮುಂದಿದ್ದ ಕುತ್ತಾ, ದತ್ತಾ ಆಗಲೇ ಇಲ್ಲ.  

ಹೀಗಾಗಿ, ಗ್ರಾಮಕ್ಕೆ ಬಂದಿದ್ದ ಆಹಾರ ಇಲಾಖೆಯ ಬ್ಲಾಕ್‌ ಡೆವಲಪ್‌ಮೆಂಟ್‌ ಅಧಿಕಾರಿಯ ಕಾರಿನ ಬಳಿ ಬಂದ ಶ್ರೀಕಾಂತ್‌ ದತ್ತಾ, ನಾಯಿಯ ರೀತಿ ವರ್ತನೆ ಮಾಡಿದ್ದಲ್ಲದೆ,  ಬೊಗಳಲು ಸಹ ಆರಂಭ ಮಾಡಿದ್ದಾರೆ.

ಇದರಿಂದ ಅಧಿಕಾರಿಗಳು ಹಾಗೂ ಬಿಡಿಒ ಸಹ ಮುಜುಗರಕ್ಕೆ ಒಳಗಾಗಿದ್ದಾರೆ. ದುವಾರೆ ಸರ್ಕಾರ್ ಯೋಜನೆ ಕಾರ್ಯಕ್ರಮದ ಅಡಿಯಲ್ಲಿ ಬಿಡಿಒ ಅಧಿಕಾರಿ ಶ್ರೀಕಾಂತ್ ಅವರ ಗ್ರಾಮಕ್ಕೆ ಆಗಮಿಸಿದ್ದರು.

ಶ್ರೀಕಾಂತ್ ನಾಯಿಯಂತೆ ಬೊಗಳುವುದನ್ನು ನೋಡಿ ಬಿಡಿಒ ಪೇಚಿಗೆ ಸಿಲುಕಿದ್ದರು.    

ಸರ್ಕಾರಿ ನೌಕರರಿಗೆ ಸಿಹಿಸುದ್ದಿ: 7ನೇ ವೇತನ ಆಯೋಗ ರಚನೆಗೆ ಸಿಎಂ ಅನುಮೋದನೆ: ಆರು ತಿಂಗಳಲ್ಲಿ ಶಿಫಾರಸ್ಸು ಸಾಧ್ಯತೆ! 

Published On: 21 November 2022, 10:27 AM English Summary: Ration card: "Kutta" instead of "Datta" know what he did in front of the officer!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.