1. ಸುದ್ದಿಗಳು

Ration card ಗುಡ್‌ನ್ಯೂಸ್‌: ರೇಷನ್‌ ಕಾರ್ಡ್‌ ತಿದ್ದುಪಡಿ ಅಥವಾ ಸೇರ್ಪಡೆಗೆ ಅವಕಾಶ!

Hitesh
Hitesh
Ration card Goodnews: Ration card amendment or addition allowed!

ರಾಜ್ಯದಲ್ಲಿ ರೇಷನ್‌ (Ration Card Holder) ಕಾರ್ಡ್‌ ಹೊಂದಿರುವವರಿಗೆ ರಾಜ್ಯ ಸರ್ಕಾರವು ಇದೀಗ ಸಿಹಿಸುದ್ದಿಯೊಂದನ್ನು ನೀಡಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ನಂತರದಲ್ಲಿ

ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ಗಳ ಬೇಡಿಕೆ ಹೆಚ್ಚಾಗಿ ಕಂಡುಬಂದಿತ್ತು.

ಬೇಡಿಕೆ ನಿರೀಕ್ಷೆಗೂ ಮೀರಿ ಹೆಚ್ಚಾಗಿದ್ದು ಹಾಗೂ ಸರ್ವರ್‌ ಸಮಸ್ಯೆ ಸೇರಿದಂತೆ ನಾನಾ ಕಾರಣಗಳಿಂದಾಗಿ

ನೂತನ ರೇಷನ್‌ ಕಾರ್ಡ್‌ ವಿತರಣೆ, ಸೇರ್ಪಡೆ ಸೇರಿದಂತೆ ವಿವಿಧ ಕೆಲಸಗಳನ್ನು ರಾಜ್ಯ ಸರ್ಕಾರವು ತಾತ್ಕಾಲಿಕವಾಗಿ ತಡೆ ಹಿಡಿದಿತ್ತು.

ಇದೀಗ ರಾಜ್ಯ ಸರ್ಕಾರವು ರೇಷನ್‌ ಕಾರ್ಡ್‌ ಹೊಂದಿರುವವರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ.

ಈ ಹಿಂದೆ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿಗೆ ನೀಡಿದ್ದ

ಅವಧಿಯನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ 

ಇದೇ ಸೆಪ್ಟೆಂಬರ್ 14ವರೆಗೂ ವಿಸ್ತರಣೆ ಮಾಡಿರುವುದಾಗಿ ಆದೇಶ ಮಾಡಿದೆ.

ಹೀಗಾಗಿ, ಇಂದು ಮತ್ತು ನಾಳೆ ಮಾತ್ರ ಈ ಅವಕಾಶ ಲಭ್ಯವಿರಲಿದೆ.

ಅಲ್ಲದೇ ಯಜಮಾನಿ / ಮನೆಯ ಒಡತಿಯ ಸ್ಥಾನದಲ್ಲಿರುವ ಮಹಿಳೆಯರು ಹೆಸರಿಲ್ಲದ ಇದ್ದಿದ್ದರಿಂದ

ಗೃಹಲಕ್ಷ್ಮಿಯೋಜನೆಗೆ ಅರ್ಜಿ ಹಾಕಲು ಸಾಧ್ಯವಾಗದೆ ಇರುವ  ಮಹಿಳೆಯರಿಗೆ ಸುವರ್ಣ ಅವಕಾಶ ಸಿಕ್ಕಂತಾಗಿದೆ.

ರೇಷನ್‌ ಕಾರ್ಡ್‌ನ ಅವಧಿ ವಿಸ್ತರಣೆ ಮಾಡಿರುವ ಬಗ್ಗೆ ಟ್ವೀಟ್‌ ಮಾಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

ಇಲಾಖೆಯು ಪಡಿತರ ಚೀಟಿಯಲ್ಲಿ ತಿದ್ದುಪಡಿ/ಸೇರ್ಪಡೆಗೆ ಅವಧಿಯನ್ನು ವಿಸ್ತರಿಸಲಾಗಿದ್ದು, ಗೃಹ ಲಕ್ಷ್ಮಿ ಯೋಜನೆಗೆ

ನೋಂದಾಯಿಸಿಕೊಳ್ಳದವರು ಸೆಪ್ಟೆಂಬರ್ 09 ರಿಂದ 14 ರೊಳಗೆ ಯಜಮಾನಿಯ ಸ್ಥಾನದಲ್ಲಿ ತಿದ್ದುಪಡಿ

ಮಾಡಿಕೊಂಡು,ಯೋಜನೆಗೆ ನೋಂದಾಯಿಸಿ ಸೌಲಭ್ಯ ಪಡೆಯಬಹುದು ಎಂದು ಹೇಳಿದೆ.  

ಅಲ್ಲದೇ ಗೃಹ ಲಕ್ಷ್ಮಿಯೋಜನೆಯಡಿ ಈಗಾಗಲೇ ನೋಂದಾಯಿಸಿ ರೇಷನ್ ಕಾರ್ಡ್ ನಲ್ಲಿ ಯಜಮಾನಿ ಹೆಸರು ಬದಲಾವಣೆಗೆ

ಅರ್ಜಿ ಸಲ್ಲಿಸದೇ ಇದ್ದರೇ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯಿಂದ

ಈ ಅರ್ಜಿ ಇತ್ಯರ್ಥವಾಗುವವರೆಗೆ ಗೃಹಲಕ್ಷ್ಮಿಯೋಜನೆ ತಡೆಹಿಡಿಯಲಾಗುತ್ತದೆ ಎಂದು ಹೇಳಲಾಗಿದೆ.  

ಪಡಿತರ ಚೀಟಿಯಲ್ಲಿ ತಿದ್ದುಪಡಿ ಅಥವಾ ಸೇರ್ಪಡೆಅವಧಿಯನ್ನು ವಿಸ್ತರಿಸಲಾಗಿದೆ.

ಗೃಹ ಲಕ್ಷ್ಮಿ ಯೋಜನೆಗೆ ಇಲ್ಲಿಯವರೆಗೂ ನೋಂದಾಣಿ ಮಾಡಿಕೊಳ್ಳದೆ ಇರುವವರು

ಸೆಪ್ಟೆಂಬರ್ 14ರ ಒಳಗಾಗಿ ಯಜಮಾನಿಯ ಸ್ಥಾನದಲ್ಲಿ ತಿದ್ದುಪಡಿ ಮಾಡಿಕೊಂಡು,

ಯೋಜನೆಗೆ ನೋಂದಾಯಿಸಿ ಸೌಲಭ್ಯ ಪಡೆಯಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.  

Published On: 13 September 2023, 10:34 AM English Summary: Ration card Goodnews: Ration card amendment or addition allowed!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.