1. ಸುದ್ದಿಗಳು

Rain alert: ರಾಜ್ಯದಲ್ಲಿ ನಾಳೆ ಭಾರೀ ಮಳೆ ಸೂಚನೆ, ನಿಮ್ಮ ಜಿಲ್ಲೆಯ ಬಗ್ಗೆ ತಿಳಿಯಿರಿ

KJ Staff
KJ Staff
rain
rain

ನೈರುತ್ಯ ಮಾನ್ಸೂನ್‌ ರಾಜ್ಯದ ಒಳನಾಡಿನಲ್ಲಿ ಸಕ್ರಿಯವಾಗಿದೆ. ರಾಜ್ಯದ ವಿವಿಧೆಡೆ ಧಾರಾಕಾರ ಮಳೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿಗೆ ಈ ಸುದ್ದಿ ಓದಿ...

ಸಿಹಿಸುದ್ದಿ: ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆ, ₹50 ಕೋಟಿ ಅನುದಾನ ಮೀಸಲು!

 

ನೈರುತ್ಯ ಮಾನ್ಸೂನ್‌ ರಾಜ್ಯದ ಒಳನಾಡಿನಲ್ಲಿ ಸಕ್ರಿಯವಾಗಿದೆ. ರಾಜ್ಯದ ವಿವಿಧೆಡೆ ಧಾರಾಕಾರ ಮಳೆ ಮುಂದುವರಿದಿದೆ.

ಕಳೆದ 24 ತಾಸುಗಳಲ್ಲಿ ರಾಜ್ಯದ ದಾವಣಗೆರೆ ಮತ್ತು ವಿಜಯಪುರದಲ್ಲಿ ತಲಾ 12 ಸೆಂ.ಮೀ ಮಳೆ ಆಗಿರುವುದು ವರದಿ ಆಗಿದೆ.  

ಉಳಿದಂತೆ ಮದ್ದೂರು (ಮಂಡ್ಯ) 8 ಸೆಂ.ಮೀ, ಮಧುಗಿರಿ, ಮಧುಗಿರಿ (ತುಮಕೂರು), ಬೆಂಗಳೂರು ನಗರ ವ್ಯಾಪ್ತಿಯಲ್ಲಿ ತಲಾ 7 ಸೆಂ.ಮೀ ಮಳೆ ಆಗಿರುವುದು ವರದಿ ಆಗಿದೆ.  

ಇನ್ನು ರಾಜ್ಯದ ಬಾದಾಮಿ 6 ಸೆಂ.ಮೀ, ನರಗುಂದ , ಶ್ರವಣಬೆಳಗೊಳ, ಮಿಡಿಗೇಶಿ, ಮಾಲೂರು, ಕನಕಪುರದಲ್ಲಿ   ತಲಾ 5 ಸೆಂ.ಮೀ ಮಳೆ ಆಗಿದೆ.

PM Kisan Samman Sammelan 2022: ರೈತರ ಖಾತೆಗೆ ಬರಲಿದೆ ನೇರವಾಗಿ 16,000 ಕೋಟಿ!

ಹೊನ್ನಾಳಿ ವ್ಯಾಪ್ತಿಯಲ್ಲಿ ತಲಾ 4 ಸೆಂ.ಮೀ, ಕಾರ್ಕಳ, ಸಿದ್ದಾಪುರ ಎಆರ್‌ಜಿ, ಸಿದ್ದಾಪುರ, ಕೋಟ, ರಾಯಚೂರು, ಕುಷ್ಟಗಿ, ಜನವಾಡ, ನಿಟ್ಟೂರು, ಲೋಕಾಪುರ, ಬಿಳಗಿ, ಸಂಡೂರು, ಕುರುಗೋಡು,

ಬರಗೂರು, ಬೆಂಗಳೂರು ನಗರ, ದೊಡ್ಡಬಳ್ಳಾಪುರ ಸೇರಿದಂತೆ ವಿವಿಧೆಡೆ ತಲಾ 3 ಸೆಂ.ಮೀ ಮಳೆ ಆಗಿರುವುದು ವರದಿ ಆಗಿದೆ.   

ಮುಂದಿನ 24 ಗಂಟೆಗಳ ಕಾಲ  ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮತ್ತು ಉತ್ತರ ಒಳನಾಡು ಹಾಗೂ ಕರಾವಳಿಯ ಹಲವು ಪ್ರದೇಶಗಳಲ್ಲಿ ಹಗುರ ಮತ್ತು ಸಾಧಾರಣ ಮಳೆ ಆಗಲಿದೆ.

ಇದನ್ನೂ ಓದಿರಿ: ಡ್ರೋನ್ ಖರೀದಿಸಲು ಯೋಜಿಸುತ್ತಿರುವ ರೈತರಿಗೆ ಸುವರ್ಣಾವಕಾಶ, ಸರ್ಕಾರ 50% ಸಬ್ಸಿಡಿ

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ಜಿಲ್ಲೆಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ.

ಉಳಿದಂತೆ ದಕ್ಷಿಣ ಒಳನಾಡಿನ ಚಾಮರಾಜನಗರ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಇದನ್ನೂ ಓದಿರಿ: ಕೇಂದ್ರೀಯ ಉಗ್ರಾಣಗಳಲ್ಲಿ 227 ಲಕ್ಷ ಮೆಟ್ರಿಕ್ ಟನ್ ಗೋಧಿ, 205 ಲಕ್ಷ ಮೆಟ್ರಿಕ್ ಟನ್ ಅಕ್ಕಿ !

Published On: 19 October 2022, 05:43 PM English Summary: rain tomorrow in various districts of the state

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.