1. ಸುದ್ದಿಗಳು

ಈ ಬಾರಿ ಹೊಸ ದಾಖಲೆ ಸೃಷ್ಟಿಸಿದ ಹಿಂಗಾರು ಬಿತ್ತನೆ

KJ Staff
KJ Staff

ಈ ವರ್ಷ ಕೊರೋನಾ ಮಹಾಮಾರಿ ಇಂದ ಎಲ್ಲಾ ಉದ್ಯಮಗಳು ಬಂದಾದರೂ, ಕೃಷಿ ಮಾತ್ರ ನಿಲ್ಲಲಿಲ್ಲ ಹಾಗೂ ಎಂದಿಗೂ ನಿಲ್ಲುವುದಿಲ್ಲ ಎಂಬ ಸಂದೇಶವನ್ನು ವಿಶ್ವದ ಜನರಿಗೆ ಮುಟ್ಟಿಸಿದೆ. ಸ್ವಾತಂತ್ರ್ಯಪೂರ್ವದಿಂದಲೂ ಗಮನಿಸಿದರೆ ಈ ಬಾರಿ ನಮ್ಮ ದೇಶದಲ್ಲಿ ಅತ್ಯಂತ ಹೆಚ್ಚು ದಾಖಲೆಯ ಹಿಂಗಾರು ಬಿತ್ತನೆಯಾಗಿದೆ.

ನಮ್ಮ ದೇಶದಲ್ಲಿ ಹಿಂಗಾರು ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು,6.75 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.ವರ್ಷಕ್ಕೆ ಹೋಲಿಸಿದರೆ ನಾವು ಈ ಬಾರಿ2.86 ರಷ್ಟು ಹೆಚ್ಚಿನ ಇಳುವರಿಯನ್ನು ಕೂಡ ಪಡೆಯುತ್ತೇವೆ ಎಂದು ಅಂದಾಜಿಸಲಾಗಿದೆ, ಇದು ಕೂಡ ಒಂದು ದಾಖಲೆಯಾಗಲಿದೆ.

 ಇನ್ನು ನಾವು ಮುಖ್ಯ ಬೆಳೆಗಳ ಮಾಹಿತಿಯನ್ನು ನೋಡುತ್ತಾ ಹೋದರೆ ಗೋಧಿ ಬೆಳೆಯುವುದು ವರ್ಷಕ್ಕಿಂತ ಈ ವರ್ಷ ಶೇಕಡ 3.13 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ,ಇನ್ನು ಮತ್ತೊಂದು ಪ್ರಮುಖ ಬೆಳೆಯಾದ ಬತ್ತದ ಕಡೆ ನಾವು ನೋಡಿದಾಗ ಶೇಕಡ 15.24 ರಷ್ಟು ಹೆಚ್ಚಾಗಿದೆ.

ಈ ಮೂಲಕ ನಾವು ಇಂದು ಯುವಕರಿಗೆ ಹಾಗೂ ಜನರಿಗೆ ತಿಳಿಸಿಕೊಡುವುದೇ ನೆಂದರೆ ನಾವು ಐಷಾರಾಮಿ ಜೀವನ ವಿಲ್ಲದೆ ಬದುಕಬಹುದು ಆದರೆ ಹೊಟ್ಟೆಗೆ ಮೂರು ಹೊತ್ತು ಊಟವಿಲ್ಲದೆ ಬದುಕಲು ಸಾಧ್ಯವಿಲ್ಲ, ಹಾಗಾಗಿ ಕೃಷಿಗೆ ಮಹತ್ವ ನೀಡೋಣ ಹಾಗೂ ರೈತನನ್ನು ಗೌರವಿಸೋಣ.

Published On: 26 January 2021, 01:32 PM English Summary: Rabi sowing

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.