1. ಸುದ್ದಿಗಳು

ಬೆಂಬಲ ಬೆಲೆ ಯೋಜನೆಯಡಿ ಬಿಳಿ ಜೋಳ ಖರೀದಿ: ಕಲಬುರಗಿ ತಾಲೂಕಾ ಕೇಂದ್ರದಲ್ಲಿ ಕೆ.ಎಫ್.ಸಿ.ಎಫ್.ಸಿ.ಯ 9 ಕೇಂದ್ರ ಸ್ಥಾಪನೆ

Jawar

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಬಿಳಿ ಜೋಳ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ತಾಲೂಕಾ ಕೇಂದ್ರದಲ್ಲಿರುವ 9 ಸಗಟು ಮಳಿಗೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು (ಆಹಾರ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಳಿ ಜೋಳ ಹೈಬ್ರಿಡ್ ಪ್ರತಿ ಕ್ವಿಂಟಾಲ್‍ಗೆ 2685.84 ರೂ. ಮತ್ತು ಬಿಳಿ ಜೋಳ ಮಾಲ್ದಂಡಿ ಪ್ರತಿ ಕ್ವಿಂಟಾಲ್‍ಗೆ 2706.41 ಪರಿಷ್ಕøತ ದರದಲ್ಲಿ ರೈತರಿಂದ ಪಡೆಯಲಾಗುತ್ತಿದೆ. ಕೃಷಿ ಇಲಾಖೆಯ ಫ್ರೂಟ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡ ರೈತರು ಇದೇ ಏಪ್ರಿಲ್ 30 ರೊಳಗೆ ಸಮೀಪದ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಂಡು ಬಿಳಿ ಜೋಳ ಮಾರಾಟ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು (ಆಹಾರ) ಅವರು ಕೋರಿದ್ದಾರೆ.

ಕೆ.ಎಫ್.ಸಿ.ಎಫ್.ಸಿ.ಯ 9 ಖರೀದಿ ಕೇಂದ್ರವಲ್ಲದೆ ಜಿಲ್ಲೆಯ ಕಂದಾಯ ಹೋಬಳಿಗಳಲ್ಲಿರುವ 65 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿಯೂ ಸಹ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರು-9448496023 ಮತ್ತು ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು-9448384981 ಇವರನ್ನು ಸಂಪರ್ಕಸಲು ಕೋರಿದೆ.

ಕೆ.ಎಫ್.ಸಿ.ಎಫ್.ಸಿ.ಯ 9 ಖರೀದಿ ಕೇಂದ್ರಗಳ ವಿವರ : ಆಫಜಲಪುರ ಸಿ.ಎಸ್.ಬೆಣ್ಣಿಸೂರ-9448133987, ಆಳಂದ ರಾಜಕುಮಾರ-8880659915, ಚಿಂಚೋಳಿ ಮಲ್ಲಣ್ಣ-9686287261, ಚಿತ್ತಾಪುರ ಎಸ್.ಬಿ ಬಿರಾದಾರ-9448880409, ಕಲಬುರಗಿ ಗ್ರಾಮಾಂತರ ಎಂ.ಕೆ.ಪರಗೊಂಡ-9901089922, ಜೇವರ್ಗಿ ಸಿದ್ದಮ್ಮ-9353773244, ಸೇಡಂ ಎಂ.ಎನ್.ತಾಳಿಕೋಟಿ-9901496987, ಕಲಬುರಗಿ ಪಡಿತರ ಪ್ರಕಾಶ-9845359642 ಹಾಗೂ ಶಹಾಬಾದ ಮಹ್ಮದ್ ಕರೀಮುಲ್ಲಾ-9845217682.

Published On: 15 April 2021, 08:57 PM English Summary: Purchase of jawar under support price scheme

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.