1. ಸುದ್ದಿಗಳು

ಬ್ರೇಕಿಂಗ್: ನಿವೇಶನವಾಗಿ ಬದಲಾದ ಕೃಷಿ ಭೂಮಿ ಖರೀದಿ ಅಕ್ರಮವಲ್ಲ- ಹೈಕೋರ್ಟ್!

Kalmesh T
Kalmesh T
Purchase land converted into residence is not illegal - High Court

ವಸತಿ ನಿವೇಶನಗಳಾಗಿ ಬದಲಾವಣೆ ಹೊಂದಿದ ಕೃಷಿ ಮಾಡುವ ಭೂಮಿಯನ್ನು ಖರೀದಿಸುವುದು ಅಕ್ರಮವಲ್ಲ ಎಂದು ಹೇಳುವ ಮೂಲಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಇದನ್ನೂ ಓದಿರಿ: 3,004.63 ಕೋಟಿ ಅಂದಾಜಿನ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದೆ “ಪಾರಾದೀಪ್ ಬಂದರು ಯೋಜನೆ”! ಏನಿದು ಗೊತ್ತೆ?

ಕೃಷಿ ಭೂಮಿಯನ್ನು ವಸತಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿದ ಬಳಿಕ ಅದನ್ನು ಖರೀದಿಸುವುದು ಅಕ್ರಮವಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 

ಈ ರೀತಿಯ ಭೂಮಿಯನ್ನು ಖರೀದಿಸಿದರೆ ಅದು ಕರ್ನಾಟಕ ಪರಿಷಿಷ್ಠ ಜಾತಿ, ಪರಿಷಿಷ್ಠ ಪಂಗಡಗಳ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

PM Kisan: ಪಿಎಂ ಕಿಸಾನ್‌ ಮುಂದಿನ ಕಂತು ಈ ಜನರಿಗೆ ಸಿಗುವುದಿಲ್ಲ..!

ರಾಮನಗರದ ಶೇಷಗಿರಿ ಹಳ್ಳಿಯಲ್ಲಿದ್ದ ಭೂಮಿಯೊಂದನ್ನು ವಸತಿ ಯೋಗ್ಯ ಭೂಮಿಯನ್ನಾಗಿ ಮಾರ್ಪಾಡು ಮಾಡಾಗಿತ್ತು. ಇದು  ಮೂಲತಃ ಮಂಜೂರು ಭೂಮಿಯಾಗಿದ್ದು, ಮೂರು ಎಕರೆಗಳಷ್ಟು ಭೂಮಿಯನ್ನು ಟಿಬೆಟಿಯನ್ ಮಕ್ಕಳ ಗ್ರಾಮ ಖರೀದಿಸಿತ್ತು.

ಈ ಬಗ್ಗೆ ಉಂಟಾಗಿದ್ದ ತಕರಾರಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದ್ದು ಭೂಮಿ ಖರೀದಿಯ ಸಿಂಧುತ್ವವನ್ನು ಎತ್ತಿ ಹಿಡಿದಿದೆ.  ಕಾಯ್ದೆಯ ಪ್ರಕಾರ ಎಸ್ ಸಿ/ ಎಸ್ ಟಿ ಗಳಿಗೆ ಮಂಜೂರಾಗಿರುವ ಭೂಮಿಯನ್ನು ವರ್ಗಾವಣೆ ಮಾಡುವಂತಿಲ್ಲ.

1978 ರಲ್ಲಿ ಗಿರಿಯಪ್ಪ ಎಂಬುವವರಿಗೆ ಈ ಜಮೀನು ಮಂಜೂರಾಗಿತ್ತು. ಇದನ್ನು 1996 ರಲ್ಲಿ ಗಿರಿಯಪ್ಪ ಟಿ ಪ್ರಸನ್ನ ಗೌಡ ಎಂಬುವವರಿಗೆ ಮಾರಾಟ ಮಾಡಿದ್ದರು.

ನೌಕರರಿಗೆ Good News! EPFO ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೆ ಬರಲಿದೆ ಬಡ್ಡಿ ಹಣ! ಈಗಲೇ ಚೆಕ್‌ ಮಾಡಿ

ಪ್ರಸನ್ನ ಗೌಡ ಎಂಬುವವರು ಈ ಭೂಮಿಯನ್ನು ಕೆಎಲ್ ಆರ್ ಕಾಯ್ದೆಯ ಪ್ರಕಾರ ಭೂಮಿಯನ್ನು ಪರಿವರ್ತಿಸಿ ನೋಂದಾಯಿತ ಸೊಸೈಟಿಯಾಗಿರುವ ಟಿಬೆಟಿಯನ್ ಮಕ್ಕಳ ಗ್ರಾಮಕ್ಕೆ ನೀಡಿದ್ದರು. 

ಗಿರಿಯಪ್ಪ ಎಂಬುವವರ ವಂಶಸ್ಥರು ಇದನ್ನು 2006 ರಲ್ಲಿ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು. 

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

Published On: 30 May 2022, 03:57 PM English Summary: Purchase land converted into residence is not illegal - High Court

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.