1. ಸುದ್ದಿಗಳು

LPG ಸಿಲೆಂಡರ್ ನಂತೆ ಕೃಷಿ pumpsetಗಳಿಗೆ ವಿದ್ಯುತ್ ಸಬ್ಸಿಡಿ ಸ್ವಯಂಪ್ರೇರಿತವಾಗಿ ತ್ಯಜಿಸುವ ಅಭಿಯಾನ ನಡೆಸುವ ಚಿಂತನೆ

ಕೃಷಿ ಪಂಪ್ ಸೆಟ್ ಗಳಿಗೆ ಪಡೆಯುತ್ತಿರುವ ವಿದ್ಯುತ್ ಸಬ್ಸಿಡಿಯನ್ನು ಶ್ರೀಮಂತರು ಸ್ವಯಂಪ್ರೇರಿತವಾಗಿ ತ್ಯಜಿಸುವ ಅಭಿಯಾನವನ್ನು ಸರ್ಕಾರ ಹಮ್ಮಿಕೊಳ್ಳುವ ಚಿಂತನೆ ನಡೆಸಿದೆ. ಕೃಷಿ ಪಂಪ್ ಸೆಟ್ಗಳಿಗೆ ಶ್ರೀಮಂತರು, ಉಳ್ಳವರು, ಆಸಕ್ತರು ಸ್ವಯಂಪ್ರೇರಿತವಾಗಿ ಗಿವ್ ಇಟ್ ಅಪ್ ಅಭಿಯಾನ ನಡೆಸುವ ಚಿಂತನೆಯಲ್ಲಿದೆ.

ಅಡುಗೆ ಅನಿಲ ಸಬ್ಸಿಡಿ ಸಹಾಯಧನ ತ್ಯಾಗ ದೇಶವ್ಯಾಪಿ ಉತ್ತಮ ಸ್ಪಂದನೆ ದೊರೆತಿರುವುದರಿಂದ ಈಗ ಕೃಷಿ ಪಂಪ್ ಸೆಟ್ ಗಳಿಗೂ ಉಚಿತ ಸಹಾಯಧನ ಸ್ಕೀಮ್ ಅನ್ವಯಿಸಿ ಅಭಿಯಾನ ಮೂಲಕ ಶ್ರೀಮಂತರ, ಉಳ್ಳವರ ಮನವೊಲಿಕೆಗೆ ಪ್ರಯತ್ನಿಸಲಿದೆ.

ರೈತರಿಗೆ ನೀರಾವರಿ ಪಂಪ್ ಸೆಟ್ಗಳಿಗೆ ಗರಿಷ್ಠ 10 ಅಶ್ವಶಕ್ತಿ ಸಾಮರ್ಥ್ಯದವರೆಗೆ ದಿನಕ್ಕೆ ಏಏಳು ಗಂಟೆ ಮೂರು ಫೇಸ್ ಉಚಿತವಾಗಿ ವಿದ್ಯುತ್ ಪೂರೈಸಲಾಗುತ್ತಿದೆ. ಈ ನೀತಿ ಎಲ್ಲಾ ರೈತರಿಗೂ ಏಕರೂಪವಾಗಿ ಅನ್ವಯಿಸುತ್ತಿದೆ. ದೊಡ್ಡ, ರೈತರು, ಶ್ರೀಮಂತರು, ಉದ್ಯಮ-ವಹಿವಾಟು ಉಳ್ಳುವರ ಹೊಂದಿದ ನೀರಾವರಿ ಐಪಿ ಸೆಟ್ಗಳಿಗೂ ಉಚಿತ ವಿದ್ಯುತ್ ಪೂರೈಕೆಯಾಗುತ್ತಿದೆ. ಇಂತಹ ಶ್ರೀಮಂತರು ಸ್ವಯಂಪ್ರೇರತರಾಗಿ ಮುಂದೆ ಬಂದು ಉಚಿತ ವಿದ್ಯುತ್ ಸೌಲಭ್ಯ ತ್ಯಜಿಸಲು ಮುಂದೆ ಬರಲು ಅಭಿಯಾನ ನಡೆಸುವ ಚಿಂತನೆ ನಡೆಸಿದೆ.

ತೋಟಗಾರಿಕೆ, ಬಹುವಾರ್ಷಿಕ ಬೆಳೆ ಬೆಳೆದ ಕ್ಷೇತ್ರಗಳು, ಫಾರ್ಮ ಹೌಸ್ ಮೂಲಕ ಹೆಚ್ಚು ಸಂಪಾದನೆ ಮಾಡುತ್ತಿರುವ ರೈತರು ವಿದ್ಯುತನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಇಂತಹ ರೈತರು ಸ್ವಯಂಪ್ರೇರಿತರವಾಗಿ ವಿದ್ಯುತ್ ಸಬ್ಸಿಡಿ ತ್ಯಜಿಸಿದರೆ  ಬಡರೈತರಿಗೆ ಅನುಕೂಲವಾಗಲಿದೆ ಎಂಬುದು ಸರ್ಕಾರದ ಯೋಚನೆಯಾಗಿದೆ.

ಕೃಷಿ ಪಂಪ್ ಸೆಟ್ಗಳಿಗೆ ಸಬ್ಸಿಡಿ ಕೈಬಿಡಲು ಇಂಧನ ಸಚಿವ ಸುನೀಲ್ ಕುಮಾರ ಶ್ರೀಮಂತರಿಗೆ ಮನವಿ

ಬಡ ರೈತರ ಹಿತದೃಷ್ಟಿಯಿಂದ ಶ್ರೀಮಂತ ರೈತರು, ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳಉ ತಮ್ಮ ಜಮೀನಿನ ಕೃಷಿ ಪಂಪ್ ಸೆಟ್ ಗಳಿಗೆ ಪಡೆಯುತ್ತಿರುವ ವಿದ್ಯುತ್ ಸಬ್ಸಿಡಿ ತ್ಯಜಿಸುವ ಮನಸ್ಸು ಮಾಡಬೇಕೆಂದು ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ ಮನವಿ ಮಾಡಿದ್ದಾರೆ.

ಅವರು ಕಲಬುರಗಿ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಮಂತ ರೈತರು, ರಾಜಕಾರಣಿಗಳು, ಅಧಿಕಾರಿಗಳು ಮನಸ್ಸು ಮಾಡಬೇಕು. ಬಡರೈತರ ಹಿತದೃಷ್ಟಿಯಿಂದಾಗಿ  ಸಬ್ಸಿಡಿಗೆ ಆಸೆಪಡದೆ ವಿದ್ಯುತ್ ಬಿಲ್ ಪಾವತಿಸಲು ಮುಂದೆ ಬರಬೇಕು. ಇದರಿಂದ ಗ್ರಾಮೀಣ ಭಾಗದಲ್ಲಿರುವ ಬಡ ರೈತರಿಗೆ ಸಬ್ಸಿಡಿ ನೀಡಲು ಸರ್ಕಾರಕ್ಕೆ ಸುಲಭವಾಗುತ್ತದೆ ಎಂದು ಹೇಳಿದ್ದಾರೆ.

ರೈತರ ಪಂಪ್ ಸೆಟ್ಗಳಿಗೆ ನಿರಂತರವಾಗಿ ಏಳು ತಾಸು ವಿದ್ಯುತ್ ಪೂರೈಕೆ ಮಾಡುವುದು ಸರ್ಕಾರದ ಆದ್ಯತೆಯಾಗಿದೆ. ಇದಕ್ಕಾಗಿ ರಾಜ್ಯದ 60 ಕಡೆಗಳಲ್ಲಿ ಸಬ್ ಸ್ಟೇಷನ್ ಗಳ ಸ್ಥಾಪನೆ ಮಾಡಲಾಗುತ್ತಿದೆ. ಈ ಕುರಿತಂತೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಜೊತೆಗೆ ಚರ್ಚೆ ನಡೆಸುತ್ತಿದ್ದು, ನಿರಂತರ ಏಳು ತಾಸು ವಿದ್ಯುತ್ ಪೂರೈಕೆ ಕುರಿತಂತೆ ಶಾಶ್ವತ ಯೋಜನೆ ರೂಪಿಸುವುದು ಸರ್ಕಾದ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

Published On: 09 September 2021, 11:27 AM English Summary: pump set subsidy gives it up Campaign by Karnataka govt

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.