ಗುಡ್ ಶೆಫರ್ಡ್ ಚರ್ಚ್‌ನಲ್ಲಿ ದಿವಂಗತ ಚೆರಿಯನ್ ಮೆಝುಕನಲ್ ಅವರ ಸ್ಮರಣಾರ್ಥ ಪ್ರಾರ್ಥನೆ ಸೇವೆ ನಡೆಯಿತು. ದುಃಖದಲ್ಲಿರುವ ಕುಟುಂಬಕ್ಕೆ ಕೃಷಿ ಜಾಗರಣವು ತನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸಿತು.
ಕೃಷಿ ಜಾಗರಣ ಸಂಸ್ಥಾಪಕ, ಎಂ ಸಿ ಡೊಮಿನಿಕ್ ಅವರ ತಂದೆ ದಿವಂಗತ ಚೆರಿಯನ್ ಮೆಝುಕನಲ್ ಅವರ ಪ್ರಾರ್ಥನಾ ಸೇವೆಯು 40 ನೇ ದಿನದಂದು ಅಂದರೆ 28 ಜುಲೈ 2022 ರಂದು ನವದೆಹಲಿಯ ಹೌಜ್ ಖಾಸ್‌ನಲ್ಲಿರುವ ಗುಡ್ ಶೆಫರ್ಡ್ ಚರ್ಚ್‌ನಲ್ಲಿ ನಡೆಯಿತು.
ದಿವಂಗತ ಚೆರಿಯನ್ ಮೆಝುಕನಲ್ ಅವರ ಸ್ಮರಣಾರ್ಥ ಸಾಂಪ್ರದಾಯಿಕ ವಿಧಿವಿಧಾನಗಳ ಅಂಗವಾಗಿ ಭೋಜನದ ನಂತರ ಪ್ರಾರ್ಥನೆಯನ್ನು ನೆರವೇರಿಸಿದ ಬಿಷಪ್ ಅವರ ಉಪಸ್ಥಿತಿಯಿಂದ ಪ್ರಾರ್ಥನಾ ಸೇವೆಯನ್ನು ನೇರವೇರಿಸಲಾಯಿತು.
ಅವರ ಕುಟುಂಬದವರಲ್ಲದೆ - ಎಂಸಿ ಡೊಮಿನಿಕ್ ಮತ್ತು ಮನುವೆಲ್ ಮೆಜುಕನಲ್ (ಮಕ್ಕಳು), ಮರ್ಸಿ ಅಲಿ ಮತ್ತು ಜಿಜಿ ಸಾಜಿ (ಮಗಳು), ಶೈನಿ ಡೊಮಿನಿಕ್ ಮತ್ತು ಡೆಲೋನಿ ಮ್ಯಾನುಯೆಲ್, ಸೊಸೆಯರು, ಅಳಿಯಂದಿರು, ಎಂ. ಅಲಿ ಮತ್ತು ಸಾಜಿ ಚಾಕೊ, ಸಂಬಂಧಿಕರು, ಸ್ನೇಹಿತರು , ಮತ್ತು ಕೃಷಿ ಜಾಗರಣ ಮತ್ತು ಮಲಬಾರ್ ಕುಟುಂಬದವರು ಪ್ರಾರ್ಥನಾ ಸೇವೆಯಲ್ಲಿ ಪಾಲ್ಗೊಂಡು ಗೌರವ ಸಲ್ಲಿಸಿದರು ಮತ್ತು ಅಗಲಿದ ಚೇತನಕ್ಕೆ ಶಾಂತಿ ಕೋರಿದರು.
81 ವರ್ಷದ ಚೆರಿಯನ್ ಮೆಝುಕನಲ್ ಅವರು ಜೂನ್ 16 ರಂದು ಕೊಮೆಯುಸಿರೆಳೆದಿದ್ದರು. ಅವರ ಅಂತ್ಯಕ್ರಿಯೆಯನ್ನು 16 ಜೂನ್ 2022 ರಂದು ನವದೆಹಲಿಯಲ್ಲಿ ನಡೆಸಲಾಯಿತು.
ಜಗತ್ತು ನಿಜವಾದ ದಯೆ ಮತ್ತು ಸಹಾಯ ಮಾಡುವ ಆತ್ಮವನ್ನು ಕಳೆದುಕೊಂಡಿದೆ. ಎಂ.ಸಿ.ಡೊಮಿನಿಕ್ ಅವರಿಗೆ ಆಧಾರ ಸ್ತಂಭವಾಗಿದ್ದರು, ಅವರ ಕುಟುಂಬ, ಕೃಷಿ ಜಾಗರಣ ಮೀಡಿಯಾ ಗ್ರೂಪ್ ಆಫ್ ಪಬ್ಲಿಕೇಷನ್ಸ್, ಮನುವೆಲ್ ಮಲಬಾರ್ ಜ್ಯುವೆಲರ್ಸ್ ಮತ್ತು ಹೋಟೆಲ್ ಮಲಬಾರ್ ಅವರ ಪ್ರೀತಿ ಮತ್ತು ಮಾರ್ಗದರ್ಶನಕ್ಕಾಗಿ ಅವರಿಗೆ ಎಂದೆಂದಿಗೂ ಕೃತಜ್ಞರಾಗಿದೆ.
Share your comments