ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
ಸೋಮವಾರವಷ್ಟೇ ಬಿಗ್‌ಬಾಸ್ ಮನೆಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೋಗಿದ್ದರು.
ಪ್ರದೀಪ್ ಈಶ್ವರ್ (Pradeep Eshwar) ಅವರು ಬಿಗ್‌ಬಾಸ್‌ಗೆ ಮನೆಗೆ ಹೋದ ಮೊದಲ ದಿನವೇ ಸಾಕಷ್ಟು ಸುದ್ದಿಗೆ ಕಾರಣವಾಗಿತ್ತು.
ಪ್ರದೀಪ್ ಈಶ್ವರ್ ಅವರು ಬಿಗ್‌ಬಾಸ್ ಸ್ಪರ್ಧಿಯಾಗಿ ಹಲವು ದಿನಗಳ ಕಾಲ ಅಲ್ಲೇ ಇರಲಿದ್ದಾರೆ
(Bigg Boss Kannada) ಎಂದು ಅಂದಾಜಿಸಲಾಗಿತ್ತು.
ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ಪ್ರದೀಪ್ ಈಶ್ವರ್ ಅವರು (Chikkaballapur Mla Pradeep Eshwar) ನಾನು
ಹೋಗಿದಿದ್ದು, ಅತಿಥಿಯಾಗಿ ಮಾತ್ರ. ನಾನು ಅಲ್ಲಿ ಸ್ಪರ್ಧಿಯಲ್ಲ.
ಈ ಅಂಶವನ್ನು ಪ್ರೋಮೋದಲ್ಲಿ ಇಲ್ಲ. ನಂತರದ ಟೆಲಿಕಾಸ್ಟ್‌ನಲ್ಲಿ ಇತ್ತು.
ಜನರಲ್ಲಿ ಕುತೂಹಲ ಮೂಡಿಸುವ ಉದ್ದೇಶದಿಂದ ಪ್ರೋಮೊದಲ್ಲಿ ಅದನ್ನು ನೀಡಲಾಗಿರಲಿಲ್ಲ.
ಖಾಸಗಿ ಸುದ್ದಿವಾಹಿನಿಯವರ ಮನವಿಯ ಮೇರೆಗೆ ನಾನು ಹೋಗಿದ್ದೆ.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್‌ಗೆ: ಮೂರು ತಿಂಗಳು ಇರ್ತಾರಾ ?
ಅಲ್ಲಿ ನಾನು ಹೆಚ್ಚೆಂದರೆ 2ರಿಂದ 3ಗಂಟೆಯ ಅವಧಿಗೆ ಮಾತ್ರ ನಾನು ಅಲ್ಲಿದ್ದೆ. ಅಲ್ಲಿಗೆ ಹೋಗಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.
ಯುವಜನರಿಗೆ ಸಂದೇಶ ನೀಡಲು ಹೋಗಿದ್ದೆ
ಒಂದು ಪ್ಲಾಟ್‌ಫಾರಂನ ಮೂಲಕ ರಾಜ್ಯದ ಯುವ ಜನರಿಗೆ ಉತ್ತಮ ಸಂದೇಶವನ್ನು ನೀಡುವ ಉದ್ದೇಶದಿಂದ ಬಿಗ್‌ಬಾಸ್‌ಗೆ ಹೋಗಿದ್ದೆ.
ಒಂದು ವೇದಿಕೆಯನ್ನು ಬಳಸಿಕೊಂಡು ಎಲ್ಲ ಯುವ ಜನತೆಗೆ ಮಾಹಿತಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ.
ಈ ಬಗ್ಗೆ ನಮ್ಮ ಪಕ್ಷದ ಹಿರಿಯರಿಗೆ ಮಾಹಿತಿ ನೀಡಿದ್ದೆ.
ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ ಎಂದು ನಾನು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಟ್ರೋಲ್‌ಗೆ ಗುರಿಯಾದ ಶಾಸಕ
ಇದೀಗ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು, ಜನಪ್ರತಿನಿಧಿ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ
ಯಾವುದೇ ಉದಾಹರಣೆ ಎಲ್ಲಿಯೂ ಇಲ್ಲ. ರಾಜ್ಯದ ಜನರಿಗೆ ಇವರು ಆಹಾರವಾಗಿದ್ದಾರೆ.
ಇವರಿಂದ ಚಿಕ್ಕಬಳ್ಳಾಪುರದ ಜನತೆ ನಗೆಪಾಟಲಿಗೆ ಈಡಾಗಿದ್ದೇವೆ ಎಂದಿದ್ದಾರೆ.
Share your comments