1. ಸುದ್ದಿಗಳು

ಅಂಚೆ ಕಚೇರಿಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, 57 ಸಾವಿರದವರೆಗೆ ವೇತನ

ಉದ್ಯೋಗಾಂಕ್ಷಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಮಹಾರಾಷ್ಟ್ರದ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 1371 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪೋಸ್ಟ್​ಮ್ಯಾನ್​, ಮೇಲ್​ ಗಾರ್ಡ್, ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು  ಅಂಚೆ ಇಲಾಖೆಯ ಅಧಿಕೃತ ವೆಬ್​ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವಿರ: 1029 ಹುದ್ದೆ ಪೋಸ್ಟ್ ಮ್ಯಾನ್​, 15 ಮೇಲ್​ ಗಾರ್ಡ್ ಹಾಗೂ ಉಳಿದ 327 ಹುದ್ದೆಗಳನ್ನ ಕಚೇರಿ ಸಿಬ್ಬಂದಿ ಕೆಲಸಕ್ಕಾಗಿ ಅರ್ಜಿ ಆಹ್ವಾನಿಸಾಗಿದೆ. ಅಕ್ಟೋಬರ್​ 12ರಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ನವೆಂಬರ್​ 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. https://dopmah20.onlineapplicationform.org/MHPOST/ ಗೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ: ಅಭ್ಯರ್ಥಿಗಳು ಪಿಯುಸಿ ಪಾಸ್ ಆಗಿರಬೇಕು. ಮತ್ತು ಪೋಸ್ಟ್ ಮ್ಯಾನ್ ಮತ್ತು ಮೇಲ್ ಗಾರ್ಡ್ ಹುದ್ದೆಗಳಿಗೆ ಕಂಪ್ಯೂಟರ್ ಮತ್ತು ಸ್ಥಳೀಯ ಭಾಷೆಯ ಜ್ಞಾನ ಹೊಂದಿರಬೇಕು, ಆದರೆ ಅಡ್ಮಿನಿಸ್ಟ್ರೇಟಿವ್ ಮತ್ತು ಸಬ್ ಆರ್ಡಿನೇಟ್ ಆಫೀಸ್ ನಲ್ಲಿ ಎಂಟಿಎಸ್ ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ಪಾಸ್ ಹೊಂದಿರಬೇಕು ಮತ್ತು ಸ್ಥಳೀಯ ಭಾಷೆಯ ತಿಳುವಳಿಕೆಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ವಯೋಮಿತಿ: ಎಲ್ಲಾ ಹುದ್ದೆಗಳಿಗೆ ಕನಿಷ್ಠ ವಯೋಮಿತಿ 18 ವರ್ಷ, ಪೋಸ್ಟ್ ಮ್ಯಾನ್ ಮತ್ತು ಮೇಲ್ ಗಾರ್ಡ್ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 27 ವರ್ಷ ಹಾಗೂ ಎಂಟಿಎಸ್ ಹುದ್ದೆಗೆ 25 ವರ್ಷ ಆಗಿರಬೇಕು.

ಮೀಸಲಾತಿ:  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅನ್ ರಿಸರ್ವ್ಡ್/ಇಡಬ್ಲ್ಯುಎಸ್/ಓಬಿಸಿ ಅಭ್ಯರ್ಥಿಗಳು 500 ರೂ.ಗಳನ್ನು ಪಾವತಿಸಬೇಕಾಗುತ್ತದೆ, ಮಹಿಳಾ ಅಭ್ಯರ್ಥಿಗಳು ಮತ್ತು ಎಸ್ ಸಿ/ಎಸ್ ಟಿ/ಪಿಡಬ್ಲ್ಯೂಡಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು.

ಪೋಸ್ಟ್ ಮ್ಯಾನ್, ಎಂಟಿಎಸ್ ಮತ್ತು ಮೇಲ್ ಗಾರ್ಡ್ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಆಧಾರದ ಮೇಲೆ ಆಯ್ಕೆಗಳು ನಡೆಯಲಿವೆ.  ಹೆಚ್ಚಿನ ಮಾಹಿತಿಗೆ  https://dopmah20.onlineapplicationform.org/MHPOST/  ಲಿಂಕ್ ಕ್ಲಿಕ್ ಮಾಡಿ.

Published On: 18 October 2020, 02:36 PM English Summary: Post office jobs with upto Rs 57,000 salary

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.