1. ಸುದ್ದಿಗಳು

ಪಾಲಿಸಲ್ಫೇಟ್®: ಬಹು-ಪೋಷಕಾಂಶ ರಸಗೊಬ್ಬರವಾಗಿದೆ

Polysulphate

ಪಾಲಿಸಲ್ಫೇಟ್® ಯುಕೆಯಲ್ಲಿ ಐಸಿಎಲ್ ನಿಂದ ಗಣಿಯಿಂದ ತೆಗೆಯಲಾದ  ಹೊಸ ಬಹು-ಪೋಷಕಾಂಶ ರಸಗೊಬ್ಬರವಾಗಿದೆ. ಇದು ನೈಸರ್ಗಿಕ ಖನಿಜವಾಗಿದೆ (ಡೈಹೈಡ್ರೇಟ್ ಪಾಲಿ ಹ್ಯಾಲೈಟ್)  ಇದು ನಾಲ್ಕು ಪ್ರಮುಖ ಸಸ್ಯ ಪೋಷಕಾಂಶಗಳು, ಸಲ್ಫರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅನ್ನು ಒಳಗೊಂಡಿದೆ

ನೈಸರ್ಗಿಕ ಸ್ಫಟಿಕವಾಗಿರುವುದರಿಂದ, ಒಮ್ಮೆ ಮಣ್ಣಿನಲ್ಲಿ ಸೇರಿಸಿದರೆ, ಪಾಲಿಸಲ್ಫೇಟ್ ನಿಧಾನವಾಗಿ ಕರಗುತ್ತದೆ ಮತ್ತು ಕ್ರಮೇಣ ಅದರ ಪೋಷಕಾಂಶಗಳನ್ನು ಮಣ್ಣಿಗೆ ಬಿಡುಗಡೆ ಮಾಡುತ್ತದೆ. ಪಾಲಿಸಲ್ಫೇಟ್ ನ ಈ ವಿಶಿಷ್ಟ ಪೋಷಕಾಂಶ ವಿತರಣಾ ಗುಣಲಕ್ಷಣಗಳನ್ನ ಬೆಳೆಗಳಲ್ಲಿನಿರಂತರವಾಗಿ ಪೋಷಕಾಂಶಗಳನ್ನು ನೀಡುತ್ತದೆ, ಆದರೆ ಇತರ ಸಾಂಪ್ರದಾಯಿಕ ಪೊಟ್ಯಾಶ್ ಮತ್ತು ಸಲ್ಫೇಟ್ ಒಂದು ನಿರ್ದಿಷ್ಟ ಅವಧಿಯವರೆಗೆ ಇರುತ್ತದೆ.

ದೀರ್ಘಕಾಲದವರೆ ಪೋಷಕಾಂಶಗಳನ್ನು ನೀಡುವುದರಿಂದ ಪಾಲಿಹ್ಯಾಲೈಟ್  ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದಾಗಲೂ ಲೀಚಿಂಗ್ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಎಲ್ಲಾ ಮಣ್ಣಿನ ಪರಿಸ್ಥಿತಿಗಳಲ್ಲಿ ಅದನ್ನು ಅತ್ಯಂತ ಪರಿಣಾಮಕಾರಿ ರಸಗೊಬ್ಬರವನ್ನಾಗಿ ಮಾಡುತ್ತದೆ.

ಎಲ್ಲಾ ಬೆಳೆಗಳಿಗೆ ಪ್ರಯೋಜನಕಾರಿ

ಇದು ರೈತರು ಮತ್ತು ಬೆಳೆಗಾರರಿಗೆ ಅತ್ಯಂತ ಅನುಕೂಲಕರ ಮತ್ತು ಕಡಿಮೆ ವೆಚ್ಚದಾಯಕವಾಗಿದೆ, ಇದು ಅವರ ಬೆಳೆಗಳಿಗೆ ನಾಲ್ಕು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಪಾಲಿಸಲ್ಫೇಟ್ ಎಲ್ಲಾ ರೀತಿಯ ಮಣ್ಣು ಮತ್ತು ಬೆಳೆಗಳಿಗೆ ಸೂಕ್ತವಾದ ನೈಸರ್ಗಿಕ ಗೊಬ್ಬರವಾಗಿದೆ. ಪಾಲಿಸಲ್ಫೇಟ್ ನಲ್ಲಿ ಲಭ್ಯವಿರುವ ಸಲ್ಫರ್ ಸಸ್ಯಗಳಲ್ಲಿ  ಸಾರಜನಕದ ಬಳಕೆಯನ್ನು ಉತ್ತೇಜಿಸುತ್ತದೆ, ಹೀಗಾಗಿ ಸಾರಜನಕ ಬಳಕೆಯ ದಕ್ಷತೆಯನ್ನು (ಎನ್ ಯುಇ) ಹೆಚ್ಚಿಸುತ್ತದೆ. ಪ್ರೋಟೀನ್ ರಚನೆಯನ್ನು ಉತ್ತೇಜಿಸಲು ಸಲ್ಫರ್ ಮತ್ತು ನೈಟ್ರೋಜನ್ ಪೌಷ್ಟಿಕಾಂಶದೊಂದಿಗೆ ಸಮತೋಲನ ವು ಬಹಳ ಮುಖ್ಯವಾಗಿದೆ. ಕ್ಲೋರೈಡ್ (ಸಿಎಲ್) ನ ಕಡಿಮೆ ಅಂಶದಿಂದಾಗಿ, ಕ್ಲೋರೈಡ್ ಗೆ ಸೂಕ್ಷ್ಮವಾದ ಬೆಳೆಗಳಾದ ತಂಬಾಕು, ದ್ರಾಕ್ಷಿ, ಚಹಾ ಮತ್ತು ಇತರ ಹಣ್ಣುಗಳ ಬೆಳೆಗಳು ಮತ್ತು ಹೆಚ್ಚಿನ ಒಣ-ದ್ರವ್ಯದ ಅಂಶಕ್ಕಾಗಿ ಆಲೂಗಡ್ಡೆಗಳಿಗೆ ಸಹ ಪಾಲಿಸಲ್ಫೇಟ್ ಸೂಕ್ತವಾಗಿದೆ. 

 
 

ಪೋಷಕಾಂಶಗಳ ಸಂಯೋಜನೆ

K2O

13.5%

S

18.5%

MgO

5.5%

CaO

16.5%

 

 

ಮಣ್ಣಿನ ಆರೋಗ್ಯ ಮತ್ತು ಪರಿಸರಕ್ಕೆ ಸ್ವಾಭಾವಿಕವಾಗಿ ಉತ್ತಮವಾಗಿದೆ

ಪಾಲಿಸಲ್ಫೇಟ್ ಒಂದು ಸಾಮಾನ್ಯ ಪಿಎಚ್ ರಸಗೊಬ್ಬರವಾಗಿದೆ, ಆದ್ದರಿಂದ ಎಲ್ಲಾ ಪ್ರಕಾರದ ಮಣ್ಣು ಮತ್ತು ಮಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಸಂಯುಕ್ತ ಗೊಬ್ಬರ, ಪಾಲಿಸಲ್ಫೇಟ್ ಅನ್ನು ನೈಸರ್ಗಿಕ ಖನಿಜ ಸ್ಥಿತಿಯಲ್ಲಿ ಮಾರಾಟ ಮಾಡಲಾಗುತ್ತದೆ. ಇದನ್ನು ಯುಕೆಯ ಕ್ಲೀವ್ ಲ್ಯಾಂಡ್ ನಲ್ಲಿ 1250 ಮೀಟರ್ ಗಿಂತ ಹೆಚ್ಚು ಆಳದಿಂದ ಭೂಗತವಾಗಿ ಹೊರತೆಗೆಯಲಾಗುತ್ತದೆ. ನಂತರ ಅದನ್ನು ನೆಲಕ್ಕೆ ಇಳಿಸಿ, ಪರೀಕ್ಷಿಸಲಾಗುತ್ತದೆ ಮತ್ತು ಮೂಟೆಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ ಮತ್ತು ವಿಶ್ವದಾದ್ಯಂತ ಪೂರೈಸಲಾಗುತ್ತದೆ. ಇದು ಯಾವುದೇ ರಾಸಾಯನಿಕ ಬೇರ್ಪಡಿಸುವಿಕೆ ಅಥವಾ ಯಾವುದೇ ಸಂಕೀರ್ಣ ಕೈಗಾರಿಕಾ ಪ್ರಕ್ರಿಯೆಯನ್ನು ಒಳಗೊಂಡಿಲ್ಲ. ಆದ್ದರಿಂದ, ಇದು ಸ್ವಾಭಾವಿಕವಾಗಿ ಮಣ್ಣಿನ ಆರೋಗ್ಯಕ್ಕೆ ಮತ್ತು ಎಲ್ಲಾ ಬೆಳೆಗಳಲ್ಲಿ ಬಳಕೆಗೆ ಸೂಕ್ತವಾಗಿದೆ. ಪಾಲಿಸಲ್ಫೇಟ್ ಸಾಮಾನ್ಯ ರಸಗೊಬ್ಬರಗಳ ವಿಶಾಲ ಶ್ರೇಣಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಇಂಗಾಲದ ಹೆಜ್ಜೆಗುರುತು (ಪ್ರತಿ ಕೆಜಿ ಉತ್ಪನ್ನಕ್ಕೆ 0.034 ಕೆಜಿ) ಆಗಿದೆ.

ಪಾಲಿಸಲ್ಫೇಟ್ ನ ಈ ಎಲ್ಲಾ ಧನಾತ್ಮಕ ನಿರ್ದಿಷ್ಟ ಲಕ್ಷಣಗಳನ್ನು ತೆಗೆದುಕೊಂಡರೆ, ಪ್ರಪಂಚದಾದ್ಯಂತದ ರೈತರು ಧಾನ್ಯಗಳು, ಹಣ್ಣುಗಳು, ತರಕಾರಿ,  ಮತ್ತು ಗೆಡ್ಡೆಗೆಣಸು ಬೆಳೆಗಳಲ್ಲಿ ಬಳಸಲು ಪಾಲಿಸಲ್ಫೇಟ್ ನ್ನು ಆಯ್ಕೆ ಮಾಡುತ್ತಿರುವಲ್ಲಿ ಆಶ್ಚರ್ಯವಿಲ್ಲ. ಆದ್ದರಿಂದ, ವಿಶ್ವಾದ್ಯಂತ ಸುಸ್ಥಿರ ಕೃಷಿ ಉತ್ಪಾದನೆಯಲ್ಲಿ ಗಮನಾರ್ಹ ಪೌಷ್ಟಿಕಾಂಶವನ್ನು ಒದಗಿಸಲು ಪಾಲಿಸಲ್ಫೇಟ್ ಹೆಚ್ಚು ಆಯ್ಕೆ ಮಾಡಿದ ರಸಗೊಬ್ಬರವಾಗಿದೆ.

ಇದನ್ನು ಐಪಿಎಲ್ ನಿಂದ ಪಾಲಿಹ್ಯಾಲೈಟ್ ಆಗಿಯೂ ಪೂರೈಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ www.polysulphate.com  ಅಥವಾ www.fertilizers.sales@ICL-group.com ಗೆ  ಸಂಪರ್ಕಿಸಹುದು. ಅಥವಾ ಮೇಲ್ ಕಳಿಸಬಹುದು.

Published On: 08 April 2021, 05:56 PM English Summary: Polysulphate® : A natural mineral for sustainable agriculture

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.