1. ಸುದ್ದಿಗಳು

ಅಮುಲ್ ವಿಚಾರದಲ್ಲಿ ರಾಜಕಾರಣ ಸಲ್ಲದು: ಸಿಎಂ ಬೊಮ್ಮಾಯಿ

Kalmesh T
Kalmesh T
Politics is not good in Amul issue: CM Bommai

ನಂದಿನಿ ನಂಬರ್ ಒನ್ ಬ್ರ್ಯಾಂಡ್  ಆಗಲಿದ್ದು, ಅಮುಲ್ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಲಂಚ ಪಡೆಯುತ್ತಿದ್ದ ಕೃಷಿ ಅಧಿಕಾರಿ ಲೋಕಾಯುಕ್ತ ಬಲೆಗೆ: ₹2.5 ಲಕ್ಷಕ್ಕೆ ಬೇಡಿಕೆ!

ಅವರು ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬೇರೆ ರಾಜ್ಯಗಳಲ್ಲಿ ನಂದಿನಿ ಮಾರಾಟವನ್ನು ನಾವು ಕೂಡ ಮಾಡಿದ್ದೇವೆ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅಮುಲ್ ಹಿಮ್ಮೆಟ್ಟಿಸಲು ಅಗತ್ಯ ಕ್ರಮ  ಕೈಗೊಳ್ಳಲಾಗುವುದು ಎಂದರು.

ಅಭ್ಯರ್ಥಿಗಳ ಬಗ್ಗೆ ಚರ್ಚೆ

ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಜೆ ಪಿ ನಡ್ಡಾ ನೇತೃತ್ವದಲ್ಲಿ ಸಭೆ ನಡೆಯಲಿದೆ.  ಎಲ್ಲಾ ಅಭ್ಯರ್ಥಿಗಳ ವಿಚಾರ ಚರ್ಚೆ ಮಾಡಲಾಗುವುದು.

ನಾಳೆ ಸಂಜೆ ಐದು ಗಂಟೆಗೆ ಸಂಸದಿಯ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ  ಎಲ್ಲಾ 224 ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದರು.

Pradhan Mantri MUDRA Yojana: 10 ಲಕ್ಷದವರೆಗಿನ ಸಾಲ ವಿತರಣೆ, ₹23.2 ಲಕ್ಷ ಕೋಟಿ ಮಂಜೂರು

ಸಭೆಯಲ್ಲಿ ನಿರ್ಧಾರ

ಕೆಲ ಎಂಎಲ್ ಸಿ ಮತ್ತು ಸಂಸದರು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಈ  ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಚರ್ಚೆಯ ಬಳಿಕ ಎಷ್ಟು ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎಂದು ನಿರ್ಧಾರವಾಗಲಿದೆ ಎಂದು ತಿಳಿಸಿದರು.

ನಮ್ಮ ಶಕ್ತಿ ಮೇಲೆ ನಂಬಿಕೆ ಇದೆ

ಕಾಂಗ್ರೆಸ್ ನಲ್ಲಿ ಟಿಕೇಟ್  ಹಂಚಿಕೆಯ  ಗೊಂದಲದ  ಬಗ್ಗೆ ಸುದ್ದಿಗಾರರ  ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಶಕ್ತಿ ಮೇಲೆ ನಮಗೆ ನಂಬಿಕೆ ಇದೆ.  ಸಹಜವಾಗಿಯೇ ಅದರ ಲಾಭ ಆಗಲಿದೆ ಎಂದರು.

40 ವರ್ಷಗಳವರೆಗೆ ಆದಾಯ ನೀಡುವ Rubber Farming ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ಕಾಂಗ್ರೆಸ್ ಗೆ  ನಡುಕ ಹುಟ್ಟಿದೆ

ನಟ  ಸುದೀಪ್ ಬಿಜೆಪಿ ಬೆಂಬಲ‌ ನೀಡುವ ಬಗ್ಗೆ ಮಾತನಾಡಿ, ಕಾಂಗ್ರೆಸ್ ಈ ಹಿಂದೆ ನಟರನ್ನು ಕರೆ ತಂದು ಚುನಾವಣಾ ಪ್ರಚಾರ ಮಾಡಿದ್ದಾರೆ.  ಅಂಬರೀಶ್ ಪ್ರಚಾರ ಮಾಡಲಿಲ್ಲವೇ,ಶಾಸಕರಾಗಿರಲಿಲ್ಲವೇ ಎಂದು ಪ್ರಶ್ನಿಸಿದರು.  ಬಿಜೆಪಿಗೆ ಬೆಂಬಲ‌ ನೀಡುವ ಮುಂಚೆ ಅದರಿಂದಾಗೊ ಎಲ್ಲಾ ಪರಿಣಾಮದ ಬಗ್ಗೆ ಮಾಹಿತಿ ಇದೆ.

ಸುದೀಪ್ ಅವರು ನಮಗೆ ಬೆಂಬಲ ನೀಡಿರುವುದರಿಂದ ಸಹಜವಾಗಿ ಕಾಂಗ್ರೆಸ್ ಗೆ  ನಡುಕ ಹುಟ್ಟಿದೆ ಎಂದರು.

ಚರ್ಚೆಯಲ್ಲಿ ತಿಳಿಯಲಿದೆ

ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ  ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ ಆ ತರಹದ ಲೆಕ್ಕಾಚಾರ ಚರ್ಚೆಯಲ್ಲಿ ಮಾಡಿದಾಗಲೇ   ತಿಳಿಯುವುದು ಎಂದರು.

Published On: 08 April 2023, 01:54 PM English Summary: Politics is not good in Amul issue: CM Bommai

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.