1. ಸುದ್ದಿಗಳು

ಕನ್ನಡ ಭಾಷೆ ಕಲಿಯುವ ವಿಧಾನವನ್ನು ಮರು ಟ್ವೀಟ್‌ ಮಾಡಿದ ಪ್ರಧಾನಿ ಮೋದಿ

Kalmesh T
Kalmesh T
PM shares creative way of learning Kannada language

ಕಲಾವಿದರೊಬ್ಬರು ತಮ್ಮ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದ ವರ್ಣಮಾಲೆಗಳ ಮೂಲಕ ಕನ್ನಡ ಭಾಷೆಯನ್ನು ಕಲಿಯುವ ಸೃಜನಾತ್ಮಕ ಚಿತ್ರವವೊಂದನ್ನು ಪ್ರಧಾನಿ ನರೇಂದ್ರ ಮೋದಿಯವರು ಮರು ಟ್ವೀಟ್‌ ಮಾಡಿದ್ದಾರೆ.

ಸರ್ಕಾರಿ ನೌಕರರ ಕನಿಷ್ಠ ವೇತನ ಹೆಚ್ಚಳ ಸಾಧ್ಯತೆ! ಎಷ್ಟು? ಏನು? ಇಲ್ಲಿದೆ ವಿವರ

ಪ್ರಧಾನಮಂತ್ರಿಯವರು ಕನ್ನಡ ಭಾಷೆಯನ್ನು ಕಲಿಯುವ ಸೃಜನಶೀಲ ವಿಧಾನವನ್ನು ಹಂಚಿಕೊಂಡಿದ್ದಾರೆ

ಇತರ ರಾಜ್ಯಗಳ ಭಾಷೆಯನ್ನು ಕಲಿಯುವುದನ್ನು ಯಾವಾಗಲೂ ಪ್ರತಿಪಾದಿಸುವ ಮತ್ತು ಆಗಾಗ್ಗೆ ಸ್ಥಳೀಯ ಭಾಷೆಯಲ್ಲಿ ಶುಭಾಶಯಗಳು ಮತ್ತು ಪರಿಚಯಾತ್ಮಕ ವಾಕ್ಯಗಳೊಂದಿಗೆ ತಮ್ಮ ಭಾಷಣಗಳನ್ನು ಪ್ರಾರಂಭಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಕನ್ನಡ ಭಾಷೆಯನ್ನು ಕಲಿಯುವ ಮೋಜಿನ ಮಾರ್ಗವನ್ನು ಹಂಚಿಕೊಂಡಿದ್ದಾರೆ.

ಪಿಂಚಣಿದಾರರೇ ಗಮನಿಸಿ : ಫೆಬ್ರವರಿ 20ರೊಳಗೆ ಈ ಕೆಲಸ ಮಾಡುವಂತೆ ಸರ್ಕಾರದ ಸೂಚನೆ!

ಕನ್ನಡ ವರ್ಣಮಾಲೆಯನ್ನು ಕಲಿಸುವ ಚಿತ್ರಾತ್ಮಕ ವಿಧಾನದ ಕುರಿತು ಕಿರಣ್ ಕುಮಾರ್ ಎಸ್ ಮಾಡಿದ ಟ್ವೀಟ್ ಅನ್ನು ಉಲ್ಲೇಖಿಸಿ ಪ್ರಧಾನಿ ಅವರು ಮರು ಟ್ವೀಟ್ ಮಾಡಿದ್ದಾರೆ.

"ಭಾಷೆಗಳನ್ನು ಕಲಿಯುವುದನ್ನು ಮೋಜಿನ ಚಟುವಟಿಕೆಯನ್ನಾಗಿ ಮಾಡುವ ಸೃಜನಶೀಲ ಮಾರ್ಗ ಇದಾಗಿದೆ. ಈ ಸಂದರ್ಭದಲ್ಲಿ ಸುಂದರ ಕನ್ನಡ ಭಾಷೆಯನ್ನು ಈ ರೀತಿ ಓದುವಂತೆ ಮಾಡಿದಕ್ಕಾಗಿ ಕಲಾವಿದರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಪ್ರಧಾನಿಯವರು ತಮ್ಮ ಟ್ವೀಟರ್‌ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ “A creative way to make learning languages a fun activity, in this case the beautiful Kannada language”.

Published On: 07 February 2023, 01:44 PM English Summary: PM shares creative way of learning Kannada language

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.