1. ಸುದ್ದಿಗಳು

ಪಿಎಂ ಕಿಸಾನ್‌ ಮೊತ್ತ ಹೆಚ್ಚಳದ ಕುರಿತಾಗಿ ಮಹತ್ವದ ಮಾಹಿತಿ ನೀಡಿದ ಕೇಂದ್ರ ಕೃಷಿ ಸಚಿವ ತೋಮರ್‌!

Kalmesh T
Kalmesh T
PM Kisan Big Update: Union Agriculture Minister Tomar gave important information

ಪಿಎಂ ಕಿಸಾನ್‌ (PM Kisan) ಮೊತ್ತ ಹೆಚ್ಚಳದ ಕುರಿತಾಗಿ ಮಹತ್ವದ ಮಾಹಿತಿಯೊಂದನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ತಿಳಿಸಿದ್ದಾರೆ.

PM Krishi Sinchai Yojana : ನೀರಾವರಿ ಅಳವಡಿಸಿಕೊಳ್ಳಲು ಆಸಕ್ತ ರೈತರಿಂದ ಅರ್ಜಿ ಆಹ್ವಾನ!

ಬಜೆಟ್‌ ಪೂರ್ವ ರೈತರಲ್ಲಿ ಪಿಎಂ ಕಿಸಾನ್‌ ಮೊತ್ತವನ್ನು ಹೆಚ್ಚಳ ಮಾಡಲಾಗುವ ಕುರಿತು ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ, ಬಜೆಟ್‌ ಮಂಡನೆಯಲ್ಲಿ ಈ ಕುರಿತು ಸರ್ಕಾರ ಯಾವುದೇ ಚಕಾರವನ್ನು ಎತ್ತಿಲ್ಲ.

ಇದರಿಂದ ರೈತ ವರ್ಗಕ್ಕೆ ಭಾರೀ ಬೇಸರವಾಗಿದ್ದು, ಸಮರ್ಪಕವಾದ ಅಂತಿಮ ಮಾಹಿತಿಗಾಗಿ ಕಾಯುತ್ತಿದ್ದರು. ಇದೀಗ ರೈತರಿಗೆ ಕೇಂದ್ರ ಸರ್ಕಾರವು ಪಿಎಂ ಕಿಸಾನ್‌ ಮೊತ್ತ ಹೆಚ್ಚಳದ ಕುರಿತಾಗಿ ಇರುವ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಮಹತ್ವದ ಮಾಹಿತಿಯೊಂದನ್ನು ತಿಳಿಸಿದ್ದಾರೆ.

ಪಾಲಿ ಹೌಸ್ ನಿರ್ಮಾಣಕ್ಕೆ ರೈತರಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಫೆ.10 ಕೊನೆ ದಿನ!

ಪಿಎಂ ಕಿಸಾನ್ ಮೊತ್ತದಲ್ಲಿ ಯಾವುದೇ ಹೆಚ್ಚಳವಿಲ್ಲ!

ಇತ್ತೀಚೆಗೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ನೀಡುವ ಮೊತ್ತವನ್ನು 6000 ರೂ.ನಿಂದ 8000 ರೂ.ಗೆ ಹೆಚ್ಚಿಸುವ ಪ್ರಸ್ತಾಪವನ್ನು ಬಜೆಟ್‌ನಲ್ಲಿ ಮಂಡಿಸಬಹುದು ಎಂಬ ಸುದ್ದಿ ಇತ್ತು.

ಆದರೆ ಬಜೆಟ್ ನಲ್ಲಿ ರೈತರಿಗೆ ಅಂತಹ ಯಾವುದೇ ಉಡುಗೊರೆಯನ್ನು ನೀಡಿಲ್ಲ. ಹೀಗಿದ್ದರೂ ಇಂತಹ ನಿರ್ಧಾರ ಕೈಗೊಳ್ಳಬಹುದು ಎಂಬ ನಿರೀಕ್ಷೆ ರೈತರಲ್ಲಿತ್ತು.

ಫೆಬ್ರುವರಿ 22ರಿಂದ 25ರವರೆಗೆ “ರಾಷ್ಟ್ರೀಯ ತೋಟಗಾರಿಕೆ ಮೇಳ – 2023” ಆಯೋಜನೆ

ಆದರೆ, ಈ ಮಧ್ಯೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪಿಎಂ ಕಿಸಾನ್ ಯೋಜನೆಯ ಹೆಚ್ಚುತ್ತಿರುವ ಮೊತ್ತದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ.

ಪಿಎಂ ಕಿಸಾನ್ ಅಡಿಯಲ್ಲಿ ಈಗಿರುವ 6,000 ರೂ.ಗಳನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವನೆಯನ್ನು ಸರ್ಕಾರ ಹೊಂದಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯ ಮೊತ್ತ ಸದ್ಯಕ್ಕೆ ಹೆಚ್ಚಾಗುವುದಿಲ್ಲ. ಪ್ರತಿ ವರ್ಷ ರೈತರಿಗೆ ಕೇವಲ 6000 ರೂ. ಮೊತ್ತ ಮಾತ್ರ ನೀಡಲಾಗುತ್ತಿದೆ ಎಂದಿದ್ದಾರೆ.

Published On: 08 February 2023, 06:31 PM English Summary: PM Kisan Big Update: Union Agriculture Minister Tomar gave important information

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.