1. ಸುದ್ದಿಗಳು

ಡಿ. 1ರಿಂದ ನಿಮ್ಮ ಖಾತೆಗೆ ಬರಲಿದೆ PM Kisan 7ನೇ ಕಂತಿನ ಹಣ: ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ.. ಈಗಲೇ ಪರಿಶೀಲಿಸಿಕೊಳ್ಳಿ

ಕಳೆದೆರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇದಾಗಲೇ 95 ಕೋಟಿ ರೂಪಾಯಿ ದೇಶದ 11.17 ಕೋಟಿ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ಇದಾಗಲೇ ಆರು ಕಂತಗಳನ್ನು ರೈತರ ಖಾತೆಗೆ ಹಣ ಜಮೆ ಮಾಡಲಾಗಿದೆ. ಏಳನೇ ಕಂತಿನ ಹಣ ಡಿಸೆಂಬರ್ 1 ರಿಂದ ದೇಶದ ಎಲ್ಲಾ ಅರ್ಹ ಫಲಾನುಭವಿಗಳ ಖಾತೆಗೆ 2 ಸಾವಿರ ರುಪಾಯಿ ಜಮೆ ಆಗಲಿದೆ.  

ಮೊದಲ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ಬರುತ್ತದೆ. ಎರಡನೇ ಕಂತು ಏಪ್ರಿಲ್ 1 ರಿಂದ ಜುಲೈ 31 ರವರೆಗೆ ಮತ್ತು  ಮೂರನೇ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ಬರುತ್ತದೆ.

ಈ ಯೋಜನೆಯಡಿ ಹೆಸರು ನೋಂದಾಯಿಸಿದ ರೈತರು ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ಎಲ್ಲಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಹಣ ಜಮೆಯಾಗಿದ್ದನ್ನು ಮತ್ತು  ಯಾವ ಹಂತದಲ್ಲಿದೆ ಎಂಬುದನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಬಹುದು. ಹೌದು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಸ್ಟೇಟಸ್ ಈಗಲೇ ತಿಳಿದುಕೊಳ್ಳಬಹುದು. https://pmkisan.gov.in/beneficiarystatus.aspx  ಇಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಅಥವಾ ನೋಂದಾಯಿಸಿದ ಮೊಬೈಲ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಈ ಮೂರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿ ಅಲ್ಲಿ ಕ್ಲಿಕ್ ಮಾಡಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮಗೆ ಇಲ್ಲಿಯವರೆಗೆ ಎಷ್ಟು ಕಂತು ಜಮೆಯಾಗಿದೆ. ಈಗಿನ ಕಂತು ಯಾವ ಹಂತದಲ್ಲಿದೆ ಎಂಬ ಮಾಹಿತಿಯೂ ಗೊತ್ತಾಗುತ್ತದೆ.

ಅಥವಾ ಗೂಗಲ್ ನಲ್ಲಿ pm kisan samman status ಅಂತ ಟೈಪ್ ಮಾಡಿ, know Beneficiary status-pm kisan ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಿಕೊಳ್ಳಬಹುದು.

ಪಿಎಂ ಕಿಸಾನ್ ಯೋಜನೆಯಲ್ಲಿ ಸರ್ಕಾರ ರೈತರಿಗೆ ನೀಡುವ ಹಣ ಸರಿಯಾಗಿ ನಿಮ್ಮ ಖಾತೆಗೆ ಬರಬೇಕು ಎಂದಾದರೆ ನೀವು ಕೆಲವು ವಿಷಯಗಳ ಬಗ್ಗೆ ಗಮನಹರಿಸಬೇಕು. ಈ ಯೋಜನೆಯಲ್ಲಿ ಹಲವು ಬಾರಿ ನೋಂದಾಯಿಸಿಕೊಂಡರೂ ಸರ್ಕಾರದಿಂದ ನಿಮಗೆ ಸಹಾಯ ಲಭ್ಯವಾಗುತ್ತಿಲ್ಲ ಎಂದಾದರೆ ಮೊದಲು ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ/ಇಲ್ಲವೋ ಎಂಬುದನ್ನು ಪರಿಶೀಲಿಸಿ. ಪಟ್ಟಿಯಲ್ಲಿ ಹೆಸರು ಇದ್ದರೆ, ಹಣವು ಖಾತೆಯಲ್ಲಿ ಬರುತ್ತದೆ, ಇಲ್ಲದಿದ್ದರೆ ಅದು ಬರುವುದಿಲ್ಲ.

ಒಂದು ವೇಳೆ ನೀವು ಇನ್ನೂ ನಿಮ್ಮ ಹೆಸರುನ್ನು ಪಿಎಂ ಕಿಸಾನ್ ಯೋಜನೆಯಡಿ ನಿಮ್ಮ ಹೆಸರು ನೋಂದಾಯಿಸಿದ್ದರೆ ಕೂಡಲೇ ನೋಂದಾಯಿಸಿಕೊಳ್ಳಿ. ಮುಂದಿನ ಕಂತು ನಿಮಗೆ ಸಿಗಲಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಫಲಾನುಭವಿಗಳಾಗಲು ಈ ಲಿಂಕ್ 
 https://www.pmkisan.gov.in/RegistrationForm.aspx  ಮೇಲೆ ಕ್ಲಿಕ್ ಮಾಡಿ ತಮ್ಮ ಹೆಸರು ಸೇರಿದಂತೆ ಇತರ ಮಾಹಿತಿಯನ್ನು ನೀಡಿ ನೋಂದಾಯಿಸಿಕೊಳ್ಳಿ.

ಈ ತಂತ್ರಾಂಶದಲ್ಲಿ  ತಮ್ಮ ಜಮೀನು ಇರುವ ಜಿಲ್ಲೆ, ತಾಲೂಕು, ಹೋಬಳಿ, ಮತ್ತು ಗ್ರಾಮವನ್ನು ಆಯ್ಕೆ ಮಾಡಿ ನಂತರ ತಮ್ಮ ಮೊಬೈಲ್  ನಂಬರ್ ಅನ್ನು ದಾಖಲಿಸಿ ಮುಂದುವರಿಯಬೇಕು. ಮುಂದಿನ ಹಂತದಲ್ಲಿ ನಾಲ್ಕು ಸಂಖ್ಯೆಯ ಪಾಸ್‍ವರ್ಡ್ ನಂಬರ್ ದಾಖಲಿಸಬೇಕು. ನಂತರ ಗ್ರಾಮವನ್ನು ಆಯ್ಕೆ ಮಾಡಿ ಅಪ್‍ಲೋಡ್ ಎಂಬ ಬಟನ್ ಒತ್ತಬೇಕು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಪಿಎಂ. ಕಿಸಾನ್ ಯೋಜನಾ ಹೆಲ್ಪ್ ಲೈನ್ ನಂಬರ್ 011-24300606, ಅಥವಾ ಪಿಎಂ ಕಿಸಾನ್ ಯೋಜನೆ ಟೋಲ್ ಫ್ರಿ ನಂ. 1800115526 ಗೆ ಸಂಪರ್ಕಿಸಬಹುದು.ಇದಲ್ಲದೆ ಹೆಲ್ಪ್ ಲೈನ್ 155261 ಕರೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಇದು ಬಿಟ್ಟು ಕೇಂದ್ರ ಕೃಷಿ ಸಚಿವಾಲಯ 011-23381092 ಗೆ ಕರೆ ಮಾಡಬಹುದು.

Published On: 27 November 2020, 08:46 PM English Summary: Pm Kisan 7th installment will deposit December 1st onward

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.